ಬ್ಲಾಕ್ ಕಾಂಗ್ರೆಸ್ ಎಸ್.ಟಿ ಘಟಕದಿಂದ ಚುನಾವಣಾ ಸಮಾಲೋಚನಾ ಸಭೆ

0

ಎಸ್.ಸಿ,ಎಸ್.ಟಿ ಸಮುದಾಯದ ಬೇಡಿಕೆಗಳನ್ನು ವಿಧಾನಸಭೆಯಲ್ಲಿ ಚರ್ಚಿಸಿ ನ್ಯಾಯ ಕೊಡಿಸುತ್ತೇನೆ-ಅಶೋಕ್ ಕುಮಾರ್ ರೈ

ಪುತ್ತೂರು: ಎಸ್.ಟಿ ಸಮುದಾಯ ಶ್ರೀ ಮಹಮ್ಮಾಯಿ ಅಮ್ಮನವರಲ್ಲಿ ಪ್ರಾರ್ಥಿಸಿದಂತೆ ನನ್ನನ್ನು ಗೆಲ್ಲಿಸಿ ತನ್ನಿ, ನಿಮ್ಮ ಬೇಡಿಕೆಗಳನ್ನು ವಿಧಾನಸಭೆಯಲ್ಲಿ ಚರ್ಚಿಸಿ ನ್ಯಾಯ ಕೊಡಿಸುತ್ತೇನೆ. ಅಶೋಕ್ ರೈ ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಅಶೋಕ್ ಕುಮಾರ್ ರೈಯವರು ಹೇಳಿದರು.

ಅವರು ಎ.20 ರಂದು ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಎಸ್.ಟಿ ಘಟಕದ ಚುನಾವಣಾ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಕಳೆದ ಐದು ವರ್ಷಗಳಲ್ಲಿನ ಬಿಜೆಪಿ ಸರಕಾರದ ಸಾಧನೆ ಶೂನ್ಯ. ಅದರಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕೆಲವು ಸಂವಿಧಾನಬದ್ಧ ಹಕ್ಕುಗಳನ್ನು ಕಸಿದುಕೊಂಡು ದಲಿತರಿಗೆ ಅನ್ಯಾಯ ಎಸಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಲ್ಲಿ ವಿಧಾನಸಭೆಯಲ್ಲಿ ದಲಿತರಿಗಾದ ಅನ್ಯಾಯದ ಬಗ್ಗೆ ಧ್ವನಿ ಎತ್ತಲಿದ್ದೇನೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ ಮಾತನಾಡಿ, ಎಸ್.ಟಿ ಘಟಕವು ಮಹಾಲಿಂಗ ನಾಯ್ಕರವರ ಅಧ್ಯಕ್ಷತೆಯಲ್ಲಿ ಕಳೆದ ಎರಡು ವರ್ಷಗಳಿಂದ ಉತ್ತಮವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅಲ್ಲದೆ ಪ್ರತಿ ಗ್ರಾಮ, ವಲಯಗಳಲ್ಲಿ ಘಟಕದ ಸಮಿತಿಗಳನ್ನು ರಚಿಸಿ, ಮಾಸಿಕ ಸಭೆಗಳನ್ನು ನಡೆಸಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಸಭೆಯಲ್ಲಿ ಸಾರ್ವಜನಿಕ ಅಭಿಪ್ರಾಯ ವ್ಯಕ್ತಪಡಿಸಿದ ಘಟಕದ ಸದಸ್ಯ ರಮೇಶ್ ಅವರು ಮಾತನಾಡಿ, ಘಟಕ ರಚನೆಯ ಆರಂಭದಿಂದ ಹಿಡಿದು ಇಲ್ಲಿಯವರೆಗೆ ಮಾಡಿದ ಸಾಧನೆಯನ್ನು ವಿವರಿಸುತ್ತ, ಕಾಂಗ್ರೆಸ್ ಸರಕಾರ ಇರುವಾಗ ನಾವುಗಳು ಸ್ವಾವಲಂಬಿ ಜೀವನ ನಡೆಸಲು ಭೂಮಿಯನ್ನು ನೀಡಿದೆ. ಉಳುಮೆ ಮಾಡಲು ಕೃಷಿ ಉಪಕರಣಗಳನ್ನು ನೀಡಿದೆ. ಕಾಂಗ್ರೆಸ್ ಸರಕಾರದ ಆಡಳಿತದ ಸಮಯದಲ್ಲಿ ಸವಲತ್ತುಗಳನ್ನು ಪಂಚಾಯತ್ ನಲ್ಲಿ ಕರೆದು ಕೊಡುತ್ತ ಇದ್ದರು. ಈಗ ಬಿಜೆಪಿ ಆಡಳಿತ ಬಂದ ಮೇಲೆ ನಮಗೆ ಕೊಡುವ ಸವಲತ್ತು ಸಿಗದಂತೆ ಮಾಡುವಂತಾಗಿದೆ. ಎಸ್.ಟಿ ಘಟಕ ರಚನೆ ಆದ ಮೇಲೆ ಅದನ್ನು ಉತ್ತಮ ಸಂಘಟನೆಯನ್ನಾಗಿ ಬಲಿಷ್ಠ ಸದೃಢವಾಗಿ ಮುಂದುವರೆಸಲು ಬ್ಲಾಕ್ ಕಾಂಗ್ರೆಸ್ ನ ಸೌಮ್ಯ ಸ್ವಭಾವದ ಅಧ್ಯಕ್ಷರಾದ ವಿಶ್ವನಾಥ ರೈ ಅವರ ವ್ಕಕ್ತಿತ್ವ ನಮಗೆ ಪ್ರೇರಣೆ, ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್ ಅವರು ಪ್ರತಿ ವಲಯಕ್ಕೆ ಭೇಟಿ ನೀಡಿ ಚಿಂತನಾಶೀಲವಾದ ಒಂದು ಗಟ್ಟಿಯಾದ ಸಂಘಟನೆಯನ್ನು ಮಾಡಿದ್ದಾರೆ. ಹಾಗಾಗಿ ನಮ್ಮ ಹಿತವನ್ನು, ನಮ್ಮ ರಕ್ಷಣೆಯನ್ನು ಮಾಡುವ ಕಾಂಗ್ರೆಸ್ ಸರಕಾರ ಬರಲು, ಸಮಾಜ ಸೇವೆಯನ್ನು ಕಾಯಕ ಮಾಡಿಕೊಂಡು ಬಂದಿರುವ ಅಶೋಕ್ ರೈ ಅವರನ್ನು ಗೆಲ್ಲಿಸಲು ಎಸ್.ಟಿ ಘಟಕ ಶಕ್ತಿ ಮೀರಿ ಕೆಲಸ ಮಾಡುತ್ತದೆ ಎಂದು ಹೇಳಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮದ್ ಆಲಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ.ಎಸ್ ಮಹಮದ್, ಮಾಜಿ ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯೆ ವಿಮಲ ದೈತೋಟ, ಅರಿಯಡ್ಕ ಗ್ರಾ.ಪಂ ಸದಸ್ಯೆ ವಿನುತ,ಜಿಲ್ಲಾ ಪ್ರಚಾರ ಸಮಿತಿ ಜಂಟಿ ಸಂಯೋಜಕ ಕೃಷ್ಣಪ್ರಸಾದ್ ಆಳ್ವರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಈಶ್ವರ್ ಬೆಡೇಕರ್, ಕರುಣಾಕರ ಪಾಂಗ್ಲಾಯಿ, ತಮ್ಮಣ್ಣ ನಾಯ್ಕ ಪಾಣಾಜೆ, ವೆಂಕಪ್ಪ ನಾಯ್ಕ ನಿಡ್ಪಳ್ಳಿ, ತಾರಾನಾಥ ನುಳಿಯಾಲು, ಮಹಾಲಿಂಗ ನಾಯ್ಕ ಇರ್ದೆ, ವೀಣಾ ದೇವಪ್ಪ ನಾಯ್ಕ, ಜಲಜಾಕ್ಷಿ ನಿಡ್ಪಳ್ಳಿ, ಗಿರಿಜಾ ನಿಡ್ಪಳ್ಳಿ, ಸದಾನಂದ ಭರಣ್ಯ, ಈಶ್ವರ ನಾಯ್ಕ ಗುರಿಕೇಲು, ಸವಿತಾ ಭರಣ್ಯ, ಪ್ರತಿಭಾ ಕೊಂದಳ್ಕಾನ, ನವ್ಯಶ್ರೀ ಕೊಂದಳ್ಕಾನ, ರಾಮ ಕಿಲಂಪಾಡಿ, ವಿಶ್ವನಾಥ ದೇವತಲಡ್ಕ, ವೆಂಕಪ್ಪ ನಾಯ್ಕ ಬಾಜುಗುಳಿ, ಅಜಿತ್ ಕುಮಾರ್, ರಾಮ ನಾಯ್ಕ ಕೋಟೆ, ಕಿರಣ್ ಕುಮಾರ್ ನಡುಗುಡ್ಡೆ, ವಿಠಲ ಅರಿಯಡ್ಕ, ಭಾರತಿ ಒಳಮೊಗ್ರು, ಶೀನಪ್ಪ ನಾಯ್ಕ ಒಳಮೊಗ್ರು, ಒಳಮೊಗ್ರು ಪಂಚಾಯತ್ ಸದಸ್ಯೆ ಪ್ರಭಾವತಿ ಬೊಳ್ಳಾಡಿ,ಲಕ್ಷ್ಮಣ ಕೋಡಿ, ಹರಿಣಾಕ್ಷಿ ಬೊಳ್ಳಡ್ಕರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಿಜೆಪಿ ಸರಕಾರದಿಂದ ದಲಿತರಿಗಾದ ಅನ್ಯಾಯ ಮನೆಮನೆಗೆ ತಿಳಿಸಿ
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್‌ರೈಯವರನ್ನು ಯಾವ ರೀತಿಯಲ್ಲಿ ಗೆಲ್ಲಿಸಬೇಕು, ಪುತ್ತೂರು ವಿಧಾನಸಭಾ ವ್ಯಾಪ್ತಿಯಲ್ಲಿರುವ ಎಸ್.ಟಿ ಮತದಾರರನ್ನು ಜಾತ್ಯಾತೀತ ತತ್ವದಡಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮನೆಮನೆಗೆ ತೆರಳಿ ಕಾಂಗ್ರೆಸ್ ಆಭ್ಯರ್ಥಿ ಪರ ಮತಯಾಚಿಸುವಂತೆ ವಿನಂತಿಸಿದ ಎಸ್.ಟಿ. ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕರವರು ಕಾಂಗ್ರೆಸ್ ನ ಪ್ರಮುಖ ಮೂರು ಗ್ಯಾರಂಟಿಗಳಾದ 200 ಯೂನಿಟ್ ವಿದ್ಯುತ್ ಉಚಿತ, ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು ರೂ.2 ಸಾವಿರ, ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು ಹತ್ತು ಕೆ.ಜಿ ಅಕ್ಕಿ ಉಚಿತ ಕೊಡುಗೆಗಳನ್ನು ಮನೆ ಮನೆಗೆ ವಿವರಿಸಬೇಕು ಎಂದರು. ಎಸ್.ಟಿ/ಎಸ್.ಸಿ ಸಮುದಾಯದವರ ಮನೆ ನಿವೇಶನ ಕನ್ವರ್ಷನ್ ಕಾಯ್ದೆಯನ್ನು ಬಿಜೆಪಿ ಸರಕಾರ ರದ್ದುಗೊಳಿಸಿರುವುದು, ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನೀಡದಿರುವುದು, ಮೀಸಲಾತಿಯನ್ನು ಹೆಚ್ಚಳ ಮಾಡುವುದಾಗಿ ಮಾಧ್ಯಮದ ಮೂಲಕ ಸುಳ್ಳು ಮಾಹಿತಿ ನೀಡಿರುವುದನ್ನು ಎಲ್ಲಾ ಎಸ್.ಸಿ, ಎಸ್.ಟಿ ಮತದಾರರಿಗೆ ಮನವರಿಕೆ ಮಾಡಲಾಗುವುದು. ನಮ್ಮ ಆಭ್ಯರ್ಥಿ ಅಶೋಕ್ ರೈಯವರನ್ನು ವಿಜಯಿಗೊಳಿಸಲು ನಾವೆಲ್ಲಾ ಶಕ್ತಿಮೀರಿ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ನಾಮಪತ್ರ ಸಲ್ಲಿಸಿ ಎಸ್.ಟಿ ಘಟಕದ ಸಭೆಗೆ ಆಗಮಿಸಿದ ಅಶೋಕ್ ರೈ ಅವರನ್ನು ಎಸ್.ಟಿ ಘಟಕದ ಮಹಿಳಾ ಸದಸ್ಯರು ಸಂಪ್ರದಾಯದಂತೆ ಆರತಿ ಬೆಳಗಿಸಿ ಸ್ವಾಗತಿಸಿ, ಮರಾಟಿಗರು ಆರಾಽಸುವ ಮಹಮ್ಮಾಯಿ ಅಮ್ಮನವರಲ್ಲಿ ಅಶೋಕ್ ರೈಯವರ ಗೆಲುವಿಗಾಗಿ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here