ಮತದಾನ ಜಾಗೃತಿ ಮೂಡಿಸುವ ಕವನಗಳ ಆಹ್ವಾನ

0

ಪುತ್ತೂರು: ತಾಲೂಕು ಸ್ವೀಪ್ ಸಮಿತಿ ಪುತ್ತೂರು, ಸಂಸಾರ ಜೋಡುಮಾರ್ಗ, ರೋಟರಿ ಪುತ್ತೂರು ಎಲೈಟ್, ರೋಟರಿ ಪುತ್ತೂರು ಯುವ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕವು ಸಾಹಿತ್ಯಾಸಕ್ತರಿಂದ ಮತದಾನದ ಕುರಿತಾಗಿ ಜಾಗೃತಿ ಮೂಡಿಸುವ ಕವನಗಳನ್ನು ಆಹ್ವಾನಿಸಲಾಗಿದೆ.


ಮತದಾನದ ಮಹತ್ವ, ದೇಶದ ನಾಗರಿಕರಾಗಿ ಮತದಾರರ ಜವಾಬ್ದಾರಿ, ಮತದಾನಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯ ಹಿರಿಮೆ, ಸ್ವೀಪ್ ಕಾಳಜಿ, ಚುನಾವಣೆಯ ಮಹತ್ವ, ಮತಯಂತ್ರದ ವಿಚಾರಗಳನ್ನು ಕವನಗಳಲ್ಲಿ ಉಲ್ಲೇಖಿಸಬೇಕು. ಯಾವುದೇ ರಾಜಕೀಯ ಪಕ್ಷಗಳ ಹೆಸರು, ಪ್ರಣಾಳಿಕೆ, ಅಭ್ಯರ್ಥಿ, ನಾಯಕರ ಕುರಿತಾಗಿ ಕವನಗಳಲ್ಲಿ ಉಲ್ಲೇಖಿಸುವಂತಿಲ್ಲ. ಆಸಕ್ತರು 12 ಸಾಲಿಗೆ ಮೀರದ ತಮ್ಮ ಒಂದು ಅಥವಾ ಎರಡು ಕವನಗಳನ್ನು ತಮ್ಮ ಹೆಸರು, ವಿಳಾಸದ ಜೊತೆ ಕಳುಹಿಸಿ ಕೊಡಬೇಕು. ಇವುಗಳ ಪೈಕಿ ಆಯ್ಕೆ ಸಮಿತಿ ಆಯ್ಕೆ ಮಾಡಿದ 20 ಕವಿಗಳ ಕವನಗಳಿಗೆ ಈ ತಿಂಗಳ ಅಂತ್ಯದಲ್ಲಿ ಪುತ್ತೂರಿನಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಕವನವಾಚನಕ್ಕೆ ಅವಕಾಶ ನೀಡಲಾಗುವುದು. ಸಾಹಿತಿಗಳು ತಮ್ಮ ಎರಡು ಕವನಗಳನ್ನು ಎ.25 ಕ್ಕೆ ಮುಂಚಿತವಾಗಿ ದೂರವಾಣಿ ಸಂಖ್ಯೆ 7899161098 ವಾಟ್ಸಾಪ್ ಮಾಡುವಂತೆ ತಾಲೂಕು ಸ್ವೀಪ್ ಸಮಿತಿ ವಿನಂತಿಸಿದೆ.

LEAVE A REPLY

Please enter your comment!
Please enter your name here