ಪುತ್ತೂರು: 2023 ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಗತ್ಯ ಸೇವೆಯಡಿ ಕರ್ತವ್ಯ ನಿರ್ವಹಿಸುವ ನೌಕರರು ಮೇ 10ರಂದು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಸಾಧ್ಯವಿಲ್ಲದ ಕರ್ತವ್ಯ ನಿರತ ನೌಕರರಿಗೆ ಚುನಾವಣಾ ಆಯೋಗದಿಂದ ಮೇ 2 ರಿಂದ 3 ತನಕ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ.
ಈಗಾಗಲೇ 30 ಮಂದಿ ಅಗತ್ಯ ಕರ್ತವ್ಯ ನಿರತ ನೌಕರರು 12 ಡಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ್ದು, ಅವರಿಗೆ ತಾಲೂಕು ಕಚೇರಿ ಪ್ರಾಂಗಣದಲ್ಲಿ ಪೋಸ್ಟಲ್ ವೋಟರ್ ಸೆಂಟರ್ನ್ನು ಮತದಾನಕ್ಕೆ ತೆರಯಲಾಗುತ್ತದೆ. ಮೇ 2ರಿಂದ 4ರ ತನಕ ಬೆಳಿಗ್ಗೆ ಗಂಟೆ 9 ರಿಂದ ಸಂಜೆ ಗಂಟೆ 5 ರತನಕ ಮತದಾನ ಕೇಂದ್ರ ತೆರೆದಿರುತ್ತದೆ. 12 ಡಿಯಲ್ಲಿ ಅರ್ಜಿ ಸಲ್ಲಿಸಿದ ಅಗತ್ಯ ಸೇವೆಯಡಿ ಕರ್ತವ್ಯ ನಿರತ ನೌಕರರು ಪಿವಿಸಿ ಕೇಂದ್ರದಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿ ಗಿರೀಶ್ ನಂದನ್ ಅವರು ತಿಳಿಸಿದ್ದಾರೆ.