ಮನೆ ದೇವರ ಕೋಣೆಯ ಪೀಠದಲ್ಲೇ ಗಟ್ಟಿಯಾದ ಶಿವಲಿಂಗ ! ಮೂರು ವರ್ಷದ ಹಿಂದೆಯೂ ನಡೆದಿತ್ತು ಅಚ್ಚರಿ; ಕೇಪುಳು ತುಳಸಿ ಕೆಟರರ‍್ಸ್‌ನ ಹರೀಶ್ ರಾವ್ ಮನೆಯಲ್ಲಿ ಘಟನೆ

0

ಪುತ್ತೂರು: ಮನೆ ದೇವರ ಕೋಣೆಯಲ್ಲಿರುವ ದೇವರ ಪೀಠದಲ್ಲಿ ಪೂಜಿಸಲ್ಪಡುತ್ತಿದ್ದ ಶಿವಲಿಂಗವೊಂದು ಪೀಠದಲ್ಲೇ ಗಟ್ಟಿಯಾದ ಅಚ್ಚರಿಯ ಘಟನೆ ಪುತ್ತೂರು ಕೇಪುಳು ತುಳಸಿ ಕೆಟರರ‍್ಸ್ ಮಾಲಕ ಹರೀಶ್ ರಾವ್ ಅವರ ಮನೆಯಲ್ಲಿ ಬೆಳಕಿಗೆ ಬಂದಿದೆ. ಮೂರು ವರ್ಷದ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು. ಪ್ರಶ್ನಾ ಚಿಂತನೆಯಲ್ಲಿ ದೈವೀ ಸಾನಿಧ್ಯ ಪ್ರಕಟಗೊಂಡಿರುವುದಾಗಿ ಹೇಳಲಾಗಿದೆ.

ತುಳಸಿ ಕೆಟರರ‍್ಸ್‌ನ ಮಾಲಕ ಹರೀಶ್ ರಾವ್ ಅವರ ಮನೆ ಸಂಸ್ಥೆಯ ಕಟ್ಟಡದ ಮೇಲಂತಸ್ತಿನಲ್ಲಿದ್ದು, ಅವರ ದೇವರ ಕೋಣೆಯಲ್ಲಿ ಸಣ್ಣ ಶಿವಲಿಂಗವನ್ನು ಪೂಜಿಸಲಾಗುತ್ತಿದೆ. ನಿತ್ಯ ಮಡಿಯಲ್ಲಿ ಶಿವಲಿಂಗವನ್ನು ಎತ್ತಿ ಸ್ವಚ್ಛ ಮಾಡಿ ನೆವೈದ್ಯ ಇಟ್ಟು ಪೂಜೆ ಪುನಸ್ಕಾರ ಮಾಡುತ್ತಿದ್ದು, ಏ.24ರಂದು ಎಂದಿನಂತೆ ಶಿವಲಿಂಗದ ಸುತ್ತ ಸ್ವಚ್ಛಗೊಳಿಸಲೆಂದು ಶಿವಲಿಂಗವನ್ನು ಎತ್ತಲು ಮುಂದಾದಾಗ ಯಾವುದೇ ಕಾರಣಕ್ಕೂ ಅದು ಮೇಲೆ ಬರಲಿಲ್ಲ.ಮಾತ್ರವಲ್ಲದೆ ಇದ್ದಲ್ಲಿಂದ ಕದಲದೇ ಅಲ್ಲೇ ಗಟ್ಟಿಯಾಗಿರುವುದು ಬೆಳಕಿಗೆ ಬಂದಿತ್ತು. ಇದರ ಜೊತೆಗೆ ಶಿವಲಿಂಗದ ಸುತ್ತ ಹುತ್ತದ ರೀತಿಯಲ್ಲಿ ಮಣ್ಣು ಅಂಟಿಕೊಂಡಿರುವುದು ಗಮನಕ್ಕೆ ಬಂತು. 2019ರ ಮಾರ್ಚ್ 19ರಂದು ಇದೇ ರೀತಿ ಶಿವಲಿಂಗ ಗಟ್ಟಿಯಾಗಿತ್ತು. ಆ ಸಂದರ್ಭ ಅವರು ಪ್ರಶ್ನಾ ಚಿಂತನೆಯಲ್ಲಿ ನೋಡಿದಾಗ, ಮುಂದೆ 2023ಕ್ಕೆ ಇಂತಹ ಘಟನೆ ಮರುಕಳಿಸುವ ಮೂಲಕ ದೈವೀ ಸಾನಿಧ್ಯ ಪ್ರಕಟಗೊಳ್ಳುತ್ತದೆ ಎಂದಿದ್ದರು.

ನಶಿಸಿ ಹೋದ ಶಿವ ಸಾನಿಧ್ಯದ ಪುನಶ್ಚೇತನಗೊಳಿಸಲು ಶಿವನ ಆಗಮನ: 12ವರ್ಷಗಳಿಂದ ಪೂಜಿಸಲ್ಪಡುತ್ತಿದ್ದ ಮನೆಯ ದೇವರ ಪೀಠದಲ್ಲಿರುವ ಶಿವಲಿಂಗ 2019ರ ಮಾರ್ಚ್ 19ರಂದು ಶುದ್ಧಾಚಾರ ಮಾಡುವ ಸಂದರ್ಭ ಶಿವಲಿಂಗ ತೆಗೆಯಲು ಬಂದಿಲ್ಲ. ಶಿವಲಿಂಗ ದೇವರ ಪೀಠದಲ್ಲಿ ಗಟ್ಟಿಯಾಗಿತ್ತು. ಆ ಸಂದರ್ಭ ದೈವಜ್ಞರನ್ನು ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಿಗೆ ಮಾಹಿತಿ ನೀಡಿದಾಗ ಅವರು ಬಂದು ನೋಡಿ ಪ್ರಶ್ನೆ ಚಿಂತನೆ ಮಾಡಿದಾಗ ಇಲ್ಲಿ ಶಿವ ಸಾನಿಧ್ಯ ಇದೆ ಎಂದು ಕಂಡು ಬಂತು. ಆ ಸಂದರ್ಭ ವಿಶೇಷ ಪೂಜೆ ಪುರಸ್ಕಾರ ಮಾಡಿದ್ದೆವು. ಆಗ ಮತ್ತೆ ಒಂದು ವಾರದೊಳಗೆ ಶಿವ ಲಿಂಗದ ಸುತ್ತ ಮಣ್ಣಿನ ಹುತ್ತ ಬೆಳೆಯಿತು. ಪುನಃ ಶಿವಲಿಂಗದ ಹಿಂಬದಿಯಲ್ಲಿ ಜಡೆ ಥರ ಬಂದು ಮಾಯವಾಯಿತು. ಅದೇ ದಿನ ಗಣಪತಿ ಹೋಮ, ಏಕಾದಶ ರುದ್ರ ಮಾಡುವ ಸಂದರ್ಭ ಮಧ್ಯಾಹ್ನ ಗರುಡವೊಂದು ಮನೆಯ ಮೇಲೆ ಹಾರಿ ಪಶ್ಚಿಮ ದಿಕ್ಕಿನತ್ತ ಸಾಗಿತ್ತು.ಮನೆಯಲ್ಲಿ ತಾಂಬೂಲ ಪ್ರಶ್ನೆ ಇಟ್ಟೆವು.ಆಗ 12ನೇ ಶತಮಾನದಲ್ಲಿ ಈ ಪರಿಸರದಲ್ಲಿ ಶಿವನಿಗೆ ಸಂಬಂಧ ಪಟ್ಟ ದೇವಿ ದೇವಸ್ಥಾನ ಮತ್ತು ಎರಡು ಅತೀ ಶಕ್ತಿಯುತವಾದ ದೈವಿಕ ಶಕ್ತಿಗಳು ನಶಿಸಿ ಹೋಗಿವೆ. ಇದರ ಪುನಶ್ಚೇತನಗೊಳಿಸಲು ಶಿವನ ಆಗಮನ ಆಗಿದೆ. ಇದು ನಿಮ್ಮ ಒಬ್ಬರಿಂದ ಮಾಡುವ ವಿಚಾರ ಅಲ್ಲ. ಊರಿನವರು ಸೇರಿ ಮಾಡಬೇಕಾಗಿರುವುದು. ಕಾಲಕ್ರಮೇಣ ಸಮಯ ಬಂದಾಗ ಅದು ಮತ್ತೆ ಪ್ರಕಟಗೊಳ್ಳುತ್ತದೆ ಎಂದರು. ಆರಂಭದಲ್ಲಿ 2019ರ ಮಾ.19ಕ್ಕೆ ನೆಲೆಯಾದ ಶಿವ ಏ.20ಕ್ಕೆ ಮತ್ತೊಮ್ಮೆ ಮೇಲೆ ಬಂದಿತ್ತು. ಇದೀಗ 2023ರ ಏ.24ರಂದು ಬೆಳಿಗ್ಗೆ ಮಗದೊಮ್ಮೆ ಶಿವ ನಾನು ಇಲ್ಲಿ ನೆಲ್ಲಿಸಿದ್ದೇನೆ ಎಂದು ತೋರಿಸಿಕೊಟ್ಟಿದ್ದಾನೆ. ಸಂಜೆ ಶಿವಲಿಂಗದ ಸುತ್ತ ಹುತ್ತದ ರೀತಿ ಮಣ್ಣು ಬೆಳೆದಿದೆ. ಮುಂದೆ ಶಿವನ ಇಚ್ಚೆಯಂತೆ ದೇವತಾ ಕಾರ್ಯ ನಡೆಯಲಿದೆ ಎಂದು ಮನೆಯ ಮಾಲಕ ಹರೀಶ್ ರಾವ್ ತಿಳಿಸಿದ್ದಾರೆ

2023ರಲ್ಲಿ ಮತ್ತೆ ಪ್ರಕಟಗೊಳ್ಳಲಿದೆ ಎಂದಿದ್ದೆ
ಶಿವರಾತ್ರಿ ಕಳೆದು ಸ್ವಲ್ಪ ದಿನದ ಬಳಿಕ ಹರೀಶ್ ರಾವ್ ಅವರ ಮನೆಯಲ್ಲಿ ಶಿವಲಿಂಗ ಮೇಲಕ್ಕೆ ಬಾರದ ಮತ್ತು ಅದರ ಸುತ್ತ ಹುತ್ತ ಬೆಳೆದಿರುವ ಕುರಿತು ಮಾಹಿತಿ ನೀಡಿದ್ದರು. ಈ ಕುರಿತು ನಾನೇ ಅಲ್ಲಿಗೆ ತೆರಳಿ ನೋಡಿದ್ದೆ. ಪ್ರಶ್ನೆ ಚಿಂತನೆಯಲ್ಲಿ ನೋಡಿದಾಗ ಇಲ್ಲೊಂದು ದೇವರ ಸಾನಿಧ್ಯ ಇರುವುದು ಕಂಡು ಬಂದಿತ್ತು. ಮುಂದೆ ಕೆಲವು ದಿನದ ಬಳಿಕ ಶಿವಲಿಂಗ ಮೊದಲಿನಂತೆ ಸಡಿಲಗೊಂಡಿದೆ ಎಂದು ಹರೀಶ್ ರಾವ್ ತಿಳಿಸಿದ್ದರು. ಈ ಕುರಿತು ನಾನು, ರವಿ ಮತ್ತು ಮೇಷ ರಾಶಿಯಲ್ಲಿದ್ದಂತೆ ಶಿವ ಸಾನಿಧ್ಯ ಇದೆಯೆಂದಾದರೆ 2023ರಲ್ಲಿ ಮತ್ತೆ ಪ್ರಕಟಗೊಳ್ಳುತ್ತದೆ ಎಂದು ಹೇಳಿದ್ದೆ. ಅದೇ ರೀತಿ ಇದೀಗ ದೇವರು ಪ್ರಕಟಗೊಂಡಿದ್ದಾರೆ. ಮುಂದೆ ಅಲ್ಲಿ ಶಿವ ದೇವರಿಗೆ ಸಂಬಂDiಸಿ ಶಿವ ಪಾರ್ವತಿ ಸಾನಿಧ್ಯ ಆಗುವ ಎಲ್ಲಾ ಲಕ್ಷಣ ಇದೆ.
ಎ ವಸಂತ ಕೆದಿಲಾಯ,
ಪ್ರಧಾನ ಅರ್ಚಕರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

LEAVE A REPLY

Please enter your comment!
Please enter your name here