ಅದೆಷ್ಟೋ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದಾರೆ
ಒಳ್ಳೆಯ ಕೆಲಸ ಮಾಡಿದವರು ಒಂದೇ ಸ್ಥಾನದಲ್ಲಿ ಶಾಶ್ವತವಲ್ಲ
ಸಂಜೀವ ಮಠಂದೂರು ಅವರಿಗೆ 6 ತಿಂಗಳೊಳಗೆ ಉತ್ತಮ ಸ್ಥಾನ
ಪುತ್ತೂರು:ಬಿಜೆಪಿಯಲ್ಲಿ ನಿಲ್ಲುವವರೇ ಬರಬೇಕು.ಕಾರಣ ನಮಗೆ 130 ಸೀಟ್ ಬೇಕು.ಒಂದು ಸೀಟ್ ಮಿಸ್ ಆದರೂ ಕಾಂಗ್ರೆಸ್ ಬರುತ್ತದೆ.ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಕೂಡಾ ಮುಖ್ಯವಾಗಿರುವುದರಿಂದ ಆಶಾ ತಿಮ್ಮಪ್ಪ ಅವರನ್ನು ಬಹುಮತದಿಂದ ಗೆಲ್ಲಿಸಬೇಕೆಂದು ತಮಿಳುನಾಡು ರಾಜ್ಯದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಹೇಳಿದರು.
ಪುತ್ತೂರು ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಅವರು, ಕರಾವಳಿಯಲ್ಲಿ ಬಿಜೆಪಿಗೆ ಭದ್ರ ಬುನಾದಿ ಇದೆ. ಹಾಗಾಗಿಯೇ ಗೆಲ್ಲುವ ಪಕ್ಷದಲ್ಲಿ ಆಕಾಂಕ್ಷಿಗಳು ಇರೋದು ಸಾಮಾನ್ಯವಾಗಿದೆ.ಪುತ್ತೂರಿನಲ್ಲೂ ಈ ಬಾರಿ ಪಕ್ಷೇತರರಾಗಿ ಸ್ಪಽಸುತ್ತಿದ್ದಾರೆ.ಪಕ್ಷೇತರ ಸ್ಪರ್ಧೆ ಬಗ್ಗೆ ನಾನು ಮಾತನಾಡುವುದಿಲ್ಲ. ಪಕ್ಷ ಎಲ್ಲರಿಗೂ ಸ್ಥಾನಮಾನವನ್ನು ಕೊಡುತ್ತದೆ.ಆದರೆ ಸ್ವಲ್ಪ ಸಮಾಧಾನದಲ್ಲಿ ಕಾಯಬೇಕು.ಯುವಜನತೆಗೆ ಬಿಜೆಪಿ ಖಂಡಿತವಾಗಿಯೂ ಅವಕಾಶ ನೀಡುತ್ತದೆ ಎಂದ ಅವರು ಈ ಬಾರಿ ಬಿಜೆಪಿಯಲ್ಲಿ ನಿಲ್ಲುವವರದ್ದೇ ಗೆಲುವಾಗಬೇಕು ಎಂದರು.
ಅದೆಷ್ಟೋ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದಾರೆ.ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.ಒಳ್ಳೆಯ ಕೆಲಸ ಮಾಡಿದವರು ಒಂದೇ ಸ್ಥಾನದಲ್ಲಿ ಶಾಶ್ವತ ಎನ್ನುವ ವ್ಯವಸ್ಥೆ ಬಿಜೆಪಿ ಪಕ್ಷದಲ್ಲಿಲ್ಲ.ಇಂದು ಒಂದು ಸ್ಥಾನವಾದರೆ, ನಾಳೆ ಇನ್ನೊಂದು ಸ್ಥಾನಕ್ಕೆ ಹೋಗೋದು ಪಕ್ಷದೊಳಗಿನ ವ್ಯವಸ್ಥೆಯಾಗಿದ್ದು, ಸಂಜೀವ ಮಠಂದೂರಿಗೆ ಪಕ್ಷ ಮುಂದಿನ 6 ತಿಂಗಳೊಳಗೆ ಉತ್ತಮ ಸ್ಥಾನವನ್ನು ನೀಡಬಹುದು. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಕಾರ್ಯಕರ್ತರು ನಿರ್ವಹಿಸಬೇಕು ಎಂದ ಅಣ್ಣಾ ಮಲೈ ಅವರು ಸಂಘಟನೆ, ಪಕ್ಷದ ಚಿಹ್ನೆ, ೧೩೦ ಸೀಟ್ ಬರಬೇಕೆಂಬ ಗುರಿ ಮುಂದಿಟ್ಟು ಇವತ್ತು ಕಾರ್ಯಕರ್ತರು ಕೆಲಸ ಮಾಡಬೇಕಾಗಿದೆ ಎಂದರು.
ಹಿಂದೆ ಶೇ.೬೫, ಇಂದು ಶೇ.೯೯ ಮಂದಿ ಗ್ಯಾಸ್ ಬಳಕೆ: ಗ್ಯಾಸ್ ಬೆಲೆ ಏರಿಕೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಣ್ಣಾ ಮಲೈ, ಹಿಂದೆ ಶೇ.೬೫ ಮಂದಿ ಗ್ಯಾಸ್ ಬಳಕೆ ಮಾಡುತ್ತಿದ್ದರು.ಇಂದು ಶೇ.೯೯ ಮಂದಿ ಬಳಕೆ ಮಾಡುತ್ತಿದ್ದಾರೆ. ೮ ಕೋಟಿ ಜನತೆಗೆ ಉಚಿತ ಗ್ಯಾಸ್ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ.ಈ ಹಂತದಲ್ಲಿ ಅಂತರ್ರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬೆಲೆ ಏರಿಕೆ ನಡೆದಾಗ ಸಹಜವಾಗಿ ಗ್ಯಾಸ್ ಬೆಲೆ ಏರಿಕೆಯಾಗಿದೆ ಎಂದು ಹೇಳಿದರು.
ಹಳೆ ಟೇಪ್ ರೆಕಾರ್ಡರ್‌ನಂತೆ ಕಾಂಗ್ರೆಸ್ ಮಾತನಾಡುತ್ತದೆ:
ಕಾಂಗ್ರೆಸ್ ಪಕ್ಷ ೧೯೬೦ರ ಹಳೆ ಟೇಪ್ ರೆಕಾರ್ಡರ್ ಇದ್ದ ಹಾಗೆ ಮಾತನಾಡುತ್ತಿದೆ.ರಾಜ್ಯದಲ್ಲಿ ಅಽಕಾರಕ್ಕೆ ಬಂದಲ್ಲಿ ಈ ಕಾನೂನು ವಾಪಸ್ ಪಡೆಯುತ್ತೇವೆ, ಆ ಕಾನೂನು ಮಾಡಲು ಬಿಡೋದಿಲ್ಲ ಎನ್ನುತ್ತಿದೆ.ಇದೇ ಕಾರಣಕ್ಕೆ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಕಾಂಗ್ರೆಸ್ ಪಕ್ಷವನ್ನು ರಿವರ್ಸ್ ಗೇರ್‌ಗೆ ಹೋಲಿಸಿದ್ದಾರೆ.ಕಾಂಗ್ರೆಸ್ ರಿವರ್ಸ್ ಗೇರ್ ಹಾಕಿ ಓಡುತ್ತಿದೆ.ಆದರೆ ಬಿಜೆಪಿ ಡಬಲ್ ಇಂಜಿನ್ ಮೂಲಕ ಮುಂದೆ ಓಡುತ್ತಿದೆ.ಇದು ಕಾಂಗ್ರೆಸ್ ಮತ್ತು ಬಿಜೆಪಿಗೆ ಇರುವ ವ್ಯತ್ಯಾಸವಾಗಿದೆ ಎಂದು ಅಣ್ಣಾಮಲೈ ಹೇಳಿದರು.
ಶಾಸಕ ಸಂಜೀವ ಮಠಂದೂರು, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ತಮಿಳುನಾಡು ರಾಜ್ಯ ಬಿಜೆಪಿ ಕಾರ್ಯದರ್ಶಿ ಸೂರ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಽರ್ ಕಣ್ಣೂರು, ಜಿಲ್ಲಾ ರೈತ ಮೋರ್ಚಾದ ಕಾರ್ಯದರ್ಶಿ ರೇಣುಕಾಪ್ರಸಾದ್, ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸುರೇಶ್, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಬಿಂದು ಸುರೇಶ್, ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಎಸ್.ಅಪ್ಪಯ್ಯ ಮಯಾ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಹಿಂದುಳಿದ ಮೋರ್ಚಾ ಜಿಲ್ಲಾ ಅಧ್ಯಕ್ಷ ಆರ್.ಸಿ.ನಾರಾಯಣ, ಮಾಧ್ಯಮ ಪ್ರಮುಖ್ ಚಂದ್ರಶೇಖರ್ ರಾವ್ ಬಪ್ಪಳಿಗೆ, ರೇಣುಕಾಪ್ರಸಾದ್ ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷದಂತೆ ಕೇವಲ ಇಬ್ಬರು ಎಸಿ ರೂಮ್‌ನಲ್ಲಿ ಕುಳಿತು ಅಭ್ಯರ್ಥಿಯನ್ನು ಆಯ್ಕೆ ಮಾಡುವ ವ್ಯವಸ್ಥೆ ಬಿಜೆಪಿಯಲ್ಲಿಲ್ಲ.ತಳಮಟ್ಟದ ಶಕ್ತಿಕೇಂದ್ರ, ಜಿಲ್ಲಾ ಕೇಂದ್ರ, ರಾಜ್ಯ ಚುನಾವಣಾ ಸಮಿತಿ, ಕೇಂದ್ರ ಚುನಾವಣಾ ಸಮಿತಿ, ಪಾರ್ಲಿಮೆಂಟರಿ ಸಮಿತಿ ಚರ್ಚೆ ನಡೆಸಿದ ಬಳಿಕ ಪ್ರಧಾನಿ ಮೋದಿ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತಗೊಳಿಸುತ್ತಾರೆ.ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರ ಗೆಲುವು ನಿಶ್ಚಿತ.ಸಂಘಟನೆಯಲ್ಲಿ ಕೆಲಸ ಮಾಡಿದ ಆಧಾರದಲ್ಲಿ ಪಕ್ಷ ಈ ಬಾರಿ ಆಶಾ ತಿಮ್ಮಪ್ಪ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ-
———–ಅಣ್ಣಾ ಮಲೈ ಐಪಿಎಸ್