ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಎ.30ರಂದು ಪ್ರತಿಷ್ಠಾ ವರ್ಧಂತ್ಯುತ್ಸವ, ಜಾತ್ರೋತ್ಸವ ಹಾಗೂ ಧರ್ಮದೈವಗಳ ನೇಮೋತ್ಸವ ನಡೆಯಿತು.
ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಪಂಚವಿಂಶತಿ ಕಲಶ ಪೂಜೆ, ಗಣಪತಿ ಹೋಮ, ದೇವರಿಗೆ ಕಲಶಾಭಿಷೇಕ, ಭಜನಾ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶ್ರೀಲಲಿತ ಸಹಸ್ರನಾಮ ಪಾರಾಯಣ, ದೈವಗಳ ಭಂಡಾರ ತೆಗೆಯುವುದು, ರಾತ್ರಿ ಶ್ರೀದೇವಿಗೆ ರಂಗಪೂಜೆ, ಬಳಿಕ ಶ್ರೀದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ವಸಂತ ಕಟ್ಟೆಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಧರ್ಮದೈವಗಳ ನೇಮೋತ್ಸವ ನಡೆಯಿತು.
ಅಶೋಕ್ ರೈಯವರಿಂದ ಶ್ರೀದೇವಿಗೆ ಪುಷ್ಪಕನ್ನಡಿ, ಉತ್ಸವಮೂರ್ತಿಗೆ ಬಂಗಾರದ ಕವಚ ಸಮರ್ಪಣೆ
ಬೆಳಿಗ್ಗೆ ವಿನಾಯಕನಗರದಲ್ಲಿರುವ ಮಹಿಷಮರ್ದಿನಿ ದ್ವಾರದಿಂದ ಭವ್ಯ ಮೆರವಣಿಗೆಯೊಂದಿಗೆ ದೇವಳಕ್ಕೆ ಹೊರೆಕಾಣಿಕೆ ಅರ್ಪಣೆಯಾಯಿತು. ಇದೇ ವೇಳೆ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈ, ಸುಮಾ ಅಶೋಕ್ ರೈ ಮತ್ತು ಮಕ್ಕಳಿಂದ ಶ್ರೀದೇವಿಗೆ ಪುಷ್ಪಕನ್ನಡಿ ಹಾಗೂ ಉತ್ಸವ ಮೂರ್ತಿಗೆ ಬಂಗಾರದ ಕವಚ ಸಮರ್ಪಣೆಯಾಯಿತು.