ಪುತ್ತೂರು: ಪುತ್ತೂರು ಕ್ಷೇತ್ರ ಈಗಾಗಲೇ ಹೈ ವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದು ಚುನಾವಣಾ ಅಖಾಡದಲ್ಲಿ ಅಭ್ಯರ್ಥಿಗಳು ಮತ ಪ್ರಚಾರ ನಡೆಸುತ್ತಿದು, ಕಾಂಗ್ರೆಸ್ ನ ತತ್ವ ಸಿದ್ಧಾಂತಗಳಿಂದ ಬೇಸರಗೊಂಡು ಹೊರ ಬಂದು ಜೆಡಿಎಸ್ ನಿಂದ ಟಿಕೆಟ್ ಗಿಟ್ಟಿಸಿಕೊಂಡ ದಿವ್ಯ ಪ್ರಭಾ ಗೌಡ ಜೆಡಿಎಸ್ ಅಸ್ತಿತ್ವವನ್ನು ಪುತ್ತೂರಿನಲ್ಲಿ ತೋರಿಸಲು ಗೆಲುವಿಗಾಗಿ ಹಗಲು ರಾತ್ರಿ ಎನ್ನದೇ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಭರ್ಜರಿ ಮತ ಪ್ರಚಾರ ನಡೆಸುತ್ತಿದ್ದಾರೆ.
ಚುನಾವಣಾ ದಿನ ಹತ್ತಿರ ಬರುತ್ತಿದ್ದಂತೆ ಲೆಕ್ಕಾಚಾರಗಳು ಮೇಲೆ ಕೆಳಗೆ ಆಗುತ್ತಿದ್ದು, ಜೆಡಿಎಸ್ ನ ಪ್ರಚಾರ ವೈಖರಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ನಿದ್ದೆಗೆಡಿಸಿದೆ. ಒಂದೆಡೆ ಪಕ್ಷೇತರ ಅಭ್ಯರ್ಥಿಯು ಬಿಜೆಪಿ ಪಕ್ಷಕ್ಕೆ ತಲೆ ನೋವಾದರೆ ಮತ್ತೊಂದೆಡೆ ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಅವರು ತನ್ನ ಸಮುದಾಯದ ಮತಗಳನ್ನು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವುದು ಪಕ್ಕಾ ಆಗಿದ್ದು, ಕಾಂಗ್ರೆಸ್ ಗೆ ದೊಡ್ಡ ಹೊಡೆತವಾಗುವ ಲಕ್ಷಣಗಳು ಕಂಡುಬರುತ್ತಿದೆ. ದಿವ್ಯ ಪ್ರಭಾ ಗೆಲುವಿನತ್ತ ಮುನ್ನುಗುತ್ತಿರುವ ಸೂಚನೆಗಳು ಕಾಣಿಸುತ್ತಿದೆ.