ಪುತ್ತೂರು: ಕುಂಬ್ರ ಅರಿಯಡ್ಕ ಗ್ರಾಮ ವ್ಯಾಪ್ತಿಯ ಕೊಂಬರಡ್ಕ ಕರ್ಕೇರ ಕುಟುಂಬ ತರವಾಡು ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಧರ್ಮದೈವ ವರ್ಣರ ಪಂಜುರ್ಲಿ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಮೇ.2 ರಂದು ಪ್ರಾರಂಭಗೊಂಡಿತು. ಕ್ಷೇತ್ರದ ಪುರೋಹಿತ ಶ್ರೀಪತಿ ಭಟ್ ಕೆಯ್ಯೂರುರವರ ನೇತೃತ್ವದಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡಿತು.
ಬೆಳಗ್ಗೆ ಗಣಹೋಮ, ನಾಗಬ್ರಹ್ಮ ತಂಬಿಲ ಸೇವೆ, ಮುಡಿಪು ಪೂಜೆ, ಹರಿಸೇವೆ, ಮಧ್ಯಾಹ್ನ ಮಹಾಕಾಳಿ ದೈವದ ತಂಬಿಲ ಸೇವೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆದು ಬಳಿಕ ದೈವಗಳಿಗೆ ಕಾಲಾವಧಿ ತಂಬಿಲ, ಸಂಜೆ ಭಂಡಾರ ತೆಗೆದು, ಎಣ್ಣೆ ವೀಲ್ಯ ಸಮರ್ಪಣೆಯ ನಂತರ ಅನ್ನಸಂತರ್ಪಣೆ ನಡೆಯಿತು. ಆ ಬಳಿಕ ಮಹಾಕಾಳಿ, ಸತ್ಯದೇವತೆ ಮತ್ತು ವರ್ಣರ ಪಂಜುರ್ಲಿ ದೈವಗಳ ನೇಮೋತ್ಸವ ನೆರವೇರಿತು.
ಕುಟುಂಬದ ಆಡಳಿತ ಮುಖ್ಯಸ್ಥ ಕೋಚಣ್ಣ ಪೂಜಾರಿ ಎಂಡೆಸಾಗು, ಕೊಂಬರಡ್ಕ ಮನೆ ಯಜಮಾನ ಮೋನಪ್ಪ ಪೂಜಾರಿ, ಕುಟುಂಬದ ಯಜಮಾನರಾದ ಗೋವಿಂದ ಪೂಜಾರಿ ಕೂರೇಲು ಹಾಗೂ ಕೃಷ್ಣಪ್ಪ ಪೂಜಾರಿ ಎಂಡೆಸಾಗು, ಸೇಸಪ್ಪ ಗಾಳಿಗುಡ್ಡೆ, ಸೀತಾ ಕೊಂಬರಡ್ಕ, ಗಿರಿಯಪ್ಪ ಪೂಜಾರಿ ಕೋರಿಕ್ಕಾರ್, ಸುಂದರ ಪೂಜಾರಿ ಸಿದ್ಧಕಟ್ಟೆ, ಬಂಟ್ವಾಳ ತಾ. ಪಂ. ಸದಸ್ಯೆ ಗೀತಾ-ಚಂದ್ರಶೇಖರ್ ಗೋಳಿಕಟ್ಟೆ ಅನಂತಾಡಿ, ಗೆಜ್ಜೆಗಿರಿ ಕ್ಷೇತ್ರದ ಆಡಳಿತ ಸಮಿತಿ ಅನುವಂಶಿಕ ಮೊಕ್ತೇಸರ ಸದಸ್ಯರಾದ ಮಹಾಬಲ ಪೂಜಾರಿ, ಆಡಳಿತ ಸಮಿತಿ ಉಪಾಧ್ಯಕ್ಷರಾದ ಬಾಲಕೃಷ್ಣ ದೋಳ, ಪ್ರಧಾನ ಕಾರ್ಯಾದರ್ಶಿ ಭಾಸ್ಕರ ಕೋಡಿ, ಕಾರ್ಯದರ್ಶಿ ವಿಠಲ ಹಳೆನೇರೆಂಕಿ, ದೈವಸ್ಥಾನದ ಪ್ರಧಾನ ಪಾತ್ರಿ ಸುರೇಂದ್ರ ಪೂಜಾರಿ ಪೆದಮಲೆ, ಸಹಾಯಕ ಪಾತ್ರಿಗಳಾದ ರಾಮಣ್ಣ ಪೂಜಾರಿ ಪಯಂದೂರು, ಉಮೇಶ ತ್ಯಾಗರಾಜನಗರ, ಸಂಕಪ್ಪ ಸಾಂತ್ಯ, ವಿಕ್ಕಿ ಬಂಟ್ವಾಳ, ಪ್ರವೀಣ ಕಾಪುತಡ್ಕ, ರಾಜೇಶ್ ಮಂಗಳೂರು, ಜಗದೀಶ ಮುರ್ಕೆತ್ತಿ, ಹರೀಶ್ ಕಾಪುತ್ತಡ್ಕ, ಬೆಳಿಯಪ್ಪ ಕಂಪ, ಸೇಸಪ್ಪ ದೋಳ, ಮಹಿಳಾ ಸದಸ್ಯರಾದ ಗೀತಾ ಚಂದ್ರಶೇಖರ್ ಗೊಳಿಕಟ್ಟೆ, ಜಾನಕಿ ಬಾಲಕೃಷ್ಣ ಗಾಳಿಮುಖ, ಗುಲಾಬಿ ಸಂಕಪ್ಪ, ಸುಚೇತ ಸಂತೋಷ್, ಕಮಲ ಕೃಷ್ಣಪ್ಪ ಮುರ್ಕೆತ್ತಿ, ಪ್ರಮೀಳಾ ಕಲ್ಲರ್ಪೆ ಹಾಗೂ ಮಮತ ವಿಟ್ಲ ಸಹಿತ ಊರ ಪರವೂರ ಭಕ್ತಾದಿಗಳು ಹಾಜರಿದ್ದರು.
ನಾಳೆ ದೈವಸ್ಥಾನದಲ್ಲಿ…
ಮೇ.3ರಂದು ದೈವಗಳಿಗೆ ತಂಬಿಲ, ಭಂಡಾರ ತೆಗೆದು ಎಣ್ಣೆ ವೀಲ್ಯ ಸಮರ್ಪಣೆ, ಆ ಬಳಿಕ ಅನ್ನಸಂತರ್ಪಣೆ ನಂತರ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಮಂತ್ರದೇವತೆ ಹಾಗೂ ಗುಳಿಗ ದೈವಗಳಿಗೆ ನೇಮ ನಡೆಯಲಿದೆ.
ಕೊನೆಯ ದಿನ ಮೇ 4 ರಂದು ಕುರಿ ತಂಬಿಲ ಸೇವೆ, ರಾಹುವಿಗೆ ಅಗೇಲು ಸೇವೆ ಬಳಿಕ ಹಿರಿಯರಿಗೂ ಕೂಡ ಅಗೇಲು ಸೇವೆ ನಡೆಯಲಿದೆ.