ಪುತ್ತೂರು: ಮೇ.13ರ ಶನಿವಾರ ಸಂಜೆ ಕಾಂಗ್ರೆಸ್ ಗೆಲುವಿನ ಶೋಭಾಯಾತ್ರೆ ಮತ್ತು ಸಂಭ್ರಮಾಚರಣೆ ನಡೆಯುತ್ತಿದ್ದು, ಆ ವೇಳೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಕಾರು ಆ ದಾರಿಯಾಗಿ ಆಗಮಿಸಿತು.
ಕಾಂಗ್ರೆಸ್ ಕಾರ್ಯಕರ್ತರು, ಪುತ್ತಿಲರಿಗೆ ಕೈ ಬೀಸಿ ತಮ್ಮ ಪ್ರೀತಿ ತೋರಿದರು. ಅರುಣ್ ಕುಮಾರ್ ಪುತ್ತಿಲ ಕೈ ಮುಗಿದು, ಅವರ ಪ್ರೀತಿಗೆ ತಲೆಬಾಗಿದರು. ಇನ್ನೂ ಕೆಲವರು ಪುತ್ತಿಲರಿಗೆ ಕೈ ಕುಲುಕಿ ತಮ್ಮ ಪ್ರೀತಿಯನ್ನು ತೋರಿದರು. ಒಟ್ಟಿನಲ್ಲಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಬಳಿಕ ಅರುಣ್ ಕುಮಾರ್ ಪುತ್ತಿಲ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಅರುಣ್ ಕುಮಾರ್ ಪುತ್ತಿಲ ಜನನಾಯಕ ಎನ್ನುವುದು ಮತ್ತೊಮ್ಮೆ ಸಾಬೀತಾಗುವ ಪ್ರಸಂಗಕ್ಕೆ ಈ ಘಟನೆ ಸಾಕ್ಷಿಯಾಯಿತು.