ಉಪ್ಪಿನಂಗಡಿ: 2022-23ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿದ್ದು ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ತೋರಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿಯಾದ ಆಶಿಕಾ ಎಮ್ ಇವರು ಬಿ.ಎಸ್.ಸಿ ಅಗ್ರಿಕಲ್ಚರ್ ವಿಭಾಗದಲ್ಲಿ ರಾಜ್ಯಮಟ್ಟದ 159ನೇ ರ್‍ಯಾಂಕ್ ಗಳಿಸಿದ್ದಾರೆ. ಅಲ್ಲದೇ ಇವರು ಬಿ.ಎನ್.ವೈ.ಎಸ್ ವಿಭಾಗದಲಿ 276ನೇ ರ್‍ಯಾಂಕ್, ಬಿ.ವಿ.ಎಸ್.ಸಿ ಹಾಗೂ ಬಿ.ಎಸ್.ಸಿ ನರ್ಸಿಂಗ್ ವಿಭಾಗದಲ್ಲಿ 303ನೇ ರ್‍ಯಾಂಕ್, ಬಿ.ಫಾರ್ಮ್ ವಿಭಾಗದಲ್ಲಿ 428ನೇ ರ್‍ಯಾಂಕ್ ಮತ್ತು ಇಂಜಿನಿಯರಿಂಗ್‌ವಿಭಾಗದಲಿ 510ನೇ ರ್‍ಯಾಂಕ್ ಗಳಿಸಿದ್ದಾರೆ. ಇವರು ಉಪ್ಪಿನಂಗಡಿ ಸಮೀಪ ಬಾರ್ಯದ ಇ.ಮನೋಹರ್ ಮತ್ತು ಸವಿತಾ ಎಮ್ ದಂಪತಿಗಳ ಪುತ್ರಿಯಾಗಿದ್ದಾರೆ.
ಮತ್ತೋರ್ವ ವಿದ್ಯಾರ್ಥಿನಿ ಮನಸ್ವಿನಿ ಇವರು ಬಿ.ಎನ್.ವೈ.ಎಸ್ ವಿಭಾಗದಲಿ 1245ನೇ ರ್‍ಯಾಂಕ್, ಬಿ.ಎಸ್.ಸಿ ಅಗ್ರಿಕಲ್ಚರ್ ವಿಭಾಗದಲಿ 1465ನೇ ರ್‍ಯಾಂಕ್, ಬಿ.ವಿ.ಎಸ್.ಸಿ ಹಾಗೂ ಬಿ.ಎಸ್.ಸಿ ನರ್ಸಿಂಗ್ ವಿಭಾಗದಲಿ 1759ನೇ ರ್‍ಯಾಂಕ್ ಮತು ಇಂಜಿನಿಯರಿಂಗ್ ವಿಭಾಗದಲ್ಲಿ 4496ನೇ ರ್‍ಯಾಂಕ್ ಗಳಿಸಿದ್ದಾರೆ. ಇವರು ಬೆಳ್ತಂಗಡಿ ತಾಲೂಕಿನ ಮೊಗ್ರು ನಿವಾಸಿಗಳಾದ ಎನ್.ರಾಮಚಂದ್ರ ಭಟ್ ಮತ್ತು ಅನಿತಾ ಆರ್ ಭಟ್ ದಂಪತಿಗಳ ಪುತ್ರಿಯಾಗಿದ್ದಾರೆ. ವಿದ್ಯಾರ್ಥಿಯಾದ ಶ್ರೀಹರಿ ಐ ಬಿ ಇವರು ಬಿ.ಎಸ್.ಸಿ ಅಗ್ರಿಕಲ್ಚರ್ ವಿಭಾಗದಲಿ 3094ನೇ ರ್‍ಯಾಂಕ್, ಬಿ.ಎಸ್.ಸಿ ವಿಭಾಗದಲ್ಲಿ 3637ನೇ ರ್‍ಯಾಂಕ್ ಗಳಿಸಿದ್ದಾರೆ. ಇವರು ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ನಿವಾಸಿಯಾದ ಬಾಲಕೃಷ್ಣ ಭಟ್ ಐ ಮತು ಶಶಿಕಲಾ ದಂಪತಿಗಳ ಪುತ್ರರಾಗಿದ್ದಾರೆ.
ಪ್ರಸಕ್ತ ಶೈಕ್ಷಣಿಕ ಸಾಲಿನ ಸಿ.ಇ.ಟಿ ಫಲಿತಾಂಶವು ಅತ್ಯಂತ ಉತ್ತಮವಾಗಿದ್ದು ಕಾಲೇಜಿನ ತರಬೇತಿ ಹಾಗೂ ಬೋಧನ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಕಳೆದ ಆರು ವರ್ಷಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಂಗ್ ಹಾಗೂ ಇತರೇ ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆಗಳಲ್ಲಿ ನಿರಂತರವಾಗಿ ಸಫಲತೆಯನ್ನು ಕಾಣುತ್ತಿದ್ದು ಈ ವರ್ಷವೂ
ಮುಂದುವರೆದಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎಚ್.ಕೆ. ಪ್ರಕಾಶ್ ರವರು ಈ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಆಶಿಕಾ ಎಮ್ ಮನಸ್ವಿನಿ ಶ್ರೀಹರಿ ಐ ಬಿ