![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ನಗರದ ಹೊರವಲಯದ ಕಲ್ಲರ್ಪೆಯಲ್ಲಿ ಮುಂಜಾನೆ 7ಗಂಟೆ ಸುಮಾರಿಗೆ ಕಾರು ಹಾಗು ದ್ವಿಚಕ್ರ ವಾಹನ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ನೈತಾಡಿಯ ಉಸ್ಮಾನ್ ಮೃತಪಟ್ಟಿದ್ದಾರೆ. ಉಸ್ಮಾನ್ ಬೆಳಿಗ್ಗೆ ಕಲ್ಲರ್ಪೆಯಲ್ಲಿರುವ ತಮ್ಮ ಜಮೀನಿಗೆ ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಉಸ್ಮಾನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಅಪಘಾತದ ರಭಸಕ್ಕೆ ಸ್ಕೂಟರ್ ನಜ್ಜುಗುಜ್ಜಾಗಿದೆ.ಅಪಘಾತಕ್ಕೊಳಗಾದ ಮಡಿಕೇರಿ ನೊಂದಾಯಿತ ಕಾರಿನಲ್ಲಿದ್ದವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮೃತ ಉಸ್ಮಾನ್ ಪತ್ನಿ, ಮೂರು ಹೆಣ್ಣು ಮತ್ತು ಒಂದು ಗಂಡು ಮಕ್ಕಳನ್ನು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
![](https://puttur.suddinews.com/wp-content/uploads/2023/06/d221bbb1-7ad0-4b57-b922-a14e5067a514.jpg)
![](https://puttur.suddinews.com/wp-content/uploads/2023/06/aaa0d216-5f07-4a01-83a0-a6e8d23069e6.jpg)
![](https://puttur.suddinews.com/wp-content/uploads/2023/06/dee2ec47-f05c-4589-ae9c-c618cf4b0ac7.jpg)