ಸವಣೂರು ಶಾಲೆಯಲ್ಲಿ ಯೋಗ ದಿನಾಚರಣೆ

0

ಪುತ್ತೂರು: ಒಂಭತ್ತನೇ ವಿಶ್ವ ಯೋಗ ದಿನಾಚರಣೆಯನ್ನು ಸವಣೂರು. ಸ ಉ. ಹಿ. ಪ್ರಾ ಶಾಲೆಯಲ್ಲಿ ಆರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಮಹಮ್ಮದ್ ಹನೀಫ್ ವಹಿಸಿದ್ದರು.

ಉದ್ಘಾಟನೆಯನ್ನು ಎಸ್ ಡಿ ಸಿ ಸಿ ಬ್ಯಾಂಕ್ ಸವಣೂರು ಶಾಖೆಯ ಅಧಿಕಾರಿ ಮಲ್ಲಿಕಾರವರು ನೆರವೇರಿಸಿದರು.ವೇದಿಕೆಯಲ್ಲಿ ಎಸ್ ಡಿ ಎಮ್ ಸಿ ಯ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಸತೀಶ್ ಬಲ್ಯಾಯ, ಉಮ್ಮರ್ ಅಬಾಬಿಲ್ ಮತ್ತು ಅಶ್ರಫ್ ಜನತಾ,ಶಾಲಾ ಅಧ್ಯಾಪಕರುಗಳಾದ ತುಳಸಿ ಎಚ್, ಮೇಬಲ್ ರೋಡ್ರಿಗಸ್, ಆಶಾಲತಾ ಅಂಬುಲ, ಮಲ್ಲಿಕಾ ಬಿ, ಅಶಾ ಎಮ್, ಅತಿಥಿ ಶಿಕ್ಷಕಿಯರಾದ ಮೋಕ್ಷ ಜೆ ರೈ, ಹರ್ಷಿಣಿ ಮತ್ತು ಗೌರವ ಶಿಕ್ಷಕಿ ಅಶ್ವಿನಿ ಎಸ್ ಉಪಸ್ಥಿತರಿದ್ದರು. ಯೋಗ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಶಾಲಾ ಮುಖ್ಯ ಗುರು ಬಾಲಕೃಷ್ಣ ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಅಶ್ವಿನಿ ವಂದಿಸಿದರು.

LEAVE A REPLY

Please enter your comment!
Please enter your name here