ಕೆದಿಲದಲ್ಲಿ ವಿವೇಕಾನಂದ ಕ.ಮಾ ಶಾಲೆಯ ವತಿಯಿಂದ ಗ್ರಾಮ ಸಂಜೀವಿನಿ ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಮಹಾತ್ವಾಕಾಂಕ್ಷೆ ಯೋಜನೆ ವಿವೇಕ ಸಂಜೀವಿನಿಯ ಶಾಲಾ ಅನುಷ್ಠಾನಿಕ ಭಾಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಶ್ರೀರಾಮ ಭಜನಾ ಮಂದಿರ ಕೆದಿಲ, ಊರ ನಾಗರಿಕರ ಸಹಯೋಗದಲ್ಲಿ ಗ್ರಾಮ-ಸಂಜೀವಿನಿ ಕಾರ್ಯಕ್ರಮ ನಡೆಯಿತು.

ಕೆದಿಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಂತಿ ಧನಂಜಯ ಶೆಟ್ಟಿ ಯೋಜನೆಗೆ ಚಾಲನೆ ನೀಡಿ ‘ಶಾಲೆಯಿಂದ ಗ್ರಾಮಗಳಲ್ಲಿ ನಡೆಯುತ್ತಿರುವ ಅನ್ಯಾನ್ಯ ಕಾರ್ಯಕ್ರಮಗಳಾದ ಬದು ನಿರ್ಮಾಣ, ಗದ್ದೆ ಕೊಯ್ಲು, ಭಜನಾ ಉತ್ಸವ, ಗ್ರಾಮ ಸಮೀಕ್ಷೆ- ಸ್ವಚ್ಛತೆ, ಆರೋಗ್ಯ ಮಾಹಿತಿ, ಯೋಗ ಪ್ರಾತ್ಯಕ್ಷಿಕೆಗಳು ಗ್ರಾಮದ ಜನರಿಗೆ ಸಹಕಾರಿಯಾಗಿದ್ದು ಶಾಲೆ ಹಾಗೂ ಕೆದಿಲ ಗ್ರಾಮದ ಜನರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲು ನೆರವಾಗಿದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಹಿರಿಯ ವಿದ್ಯಾರ್ಥಿ ಅಶ್ವಥ್ ಮಾತನಾಡಿ, ‘ಗ್ರಾಮದಲ್ಲಿ ಯಾವತ್ತೂ ಇಂತಹ ಉತ್ತಮ ಕಾರ್ಯಕ್ರಮಗಳಿಗೆ ನಮ್ಮ ಸಹಕಾರವಿದೆ’ ಎಂದರು. ಶಾಲಾ ಆಡಳಿತ ಮಂಡಳಿಯ ಸದಸ್ಯ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ಯೋಜನೆಯ ವಿವರವನ್ನು ನೀಡಿದರು. ಈ ಸಂದರ್ಭದಲ್ಲಿ ನಾಟಿ ವೈದ್ಯ ವಿಶ್ವನಾಥ ಪೂಜಾರಿ ಮುರುವ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶ್ರೀರಾಮ ಭಜನಾ ಮಂದಿರದ ಉಪಾಧ್ಯಕ್ಷ ಶಿವರಾಮ ಭಟ್ ಉಪಸ್ಥಿತರಿದ್ದರು. ಗ್ರಾಮ – ಸಂಜೀವಿನಿ ಕಾರ್ಯಕ್ರಮದ ಸಂಯೋಜಕ ಚಂದ್ರಶೇಖರ್ ಸುಳ್ಯಪದವು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ಗಿಡಗಳನ್ನು ನೆಡಲಾಯಿತು.

LEAVE A REPLY

Please enter your comment!
Please enter your name here