ಪುತ್ತೂರು: ಕುಡಿಪ್ಪಾಡಿ ಬಿಲ್ಲವ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ಉಚಿತ ಪುಸ್ತಕ ವಿತರಣೆಯು ಜೂ.25 ರಂದು ನಡೆಯಿತು.
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪುತ್ತೂರು ಬಿಲ್ಲವ ಸಂಘದಡಿಯಲ್ಲಿ 51 ಗ್ರಾಮ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದೆ. ಅದರಲ್ಲಿ ಕುಡಿಪಾಡಿ ಬಿಲ್ಲವ ಗ್ರಾಮ ಸಮಿತಿಯೂ ಒಂದಾಗಿದ್ದು, ಬಿಲ್ಲವ ಸಂಘದ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಪಾಡಿ ಗ್ರಾಮ ಸಮಿತಿಯು ಎಲ್ಲಾ ಸದಸ್ಯರ ಸಹಕಾರದಿಂದ ಅಭಿವೃದ್ಧಿಪಥದಲ್ಲಿ ಸಾಗಲಿ ಎಂದರು.
ಪುತ್ತೂರು ಬಿಲ್ಲವ ಸಂಘದ ಉಪಾಧ್ಯಕ್ಷೆ ಚಂದ್ರಕಲಾ ಮುಕ್ವೆ ಮಾತನಾಡಿ, ನಾರಾಯಣ ಗುರುಗಳು ಹೇಳಿದಂತೆ ಸಂಘಟನೆಯಿಂದ ಬಲಯುತರಾಗಿರಿ ಎಂಬಂತೆ ಸಂಘಟನೆಗಳು ಅದು ಪುರುಷ ಸಂಘಟನೆಯಾಗಲಿ, ಮಹಿಳಾ ಸಂಘಟನೆಯಾಗಲಿ, ಎಲ್ಲರೂ ಒಮ್ಮನಸಿನಿಂದ ಕೆಲಸ ಮಾಡಿದರೆ ಸಂಘವು ಬಲವರ್ಧನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಪುತ್ತೂರು ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ ಮಾತನಾಡಿ, ನಾರಾಯಣಗುರುಗಳ ಸಂದೇಶವಾಗಿರುವ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ಸಂದೇಶದಂತೆ ಪ್ರತಿಯೋರ್ವರೂ ವಿದ್ಯೆಯನ್ನು ಗಳಿಸುವಂತಾಗಬೇಕು ಆ ಮೂಲಕ ಸ್ವತಂತ್ರವಾಗಿ ಬದುಕಲು ಕಲಿಯುವವರಾಗಬೇಕು. ಸಂಘದ ಸದಸ್ಯರು ಅಧ್ಯಕ್ಷರೊಂದಿಗೆ ಕೈಜೋಡಿಸುತ್ತಾ ನಾರಾಯಣಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದರು.
ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ ಗೆಣಸಿನಕುಮೇರು ಮಾತನಾಡಿ, 51 ಬಿಲ್ಲವ ಗ್ರಾಮ ಸಮಿತಿಗಳು ವಿದ್ಯಾರ್ಥಿಗಳ ವಿದ್ಯೆಗೆ ಪ್ರೋತ್ಸಾಹವಾಗುವ ನಿಟ್ಟಿನಲ್ಲಿ ಪುಸ್ತಕಗಳ ವಿತರಣೆ ಕಾರ್ಯ ಆಗುತ್ತಿದೆ. ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡು ಸದುಪಯೋಗಪಡಿಸುವಂತಾಗಬೇಕು ಎಂದರು.
ವಲಯ ಸಂಯೋಜಕ ಕಿರಣ್ ಪೂಜಾರಿ ಬಲ್ನಾಡು ಮಾತನಾಡಿ, ಗ್ರಾಮ ಸಮಿತಿಯ ಅಧ್ಯಕ್ಷರಿಗೆ ಮಾತ್ರ ಜವಾಬ್ದಾರಿಯಲ್ಲ, ಎಲ್ಲಾ ಸದಸ್ಯರಿಗೂ ಇದು ಅನ್ವಯವಾಗುತ್ತದೆ. ಅದೇ ರೀತಿ ಪುಸ್ತಕ ವಿತರಣೆಯು ಗುರುಗಳ ಪ್ರಸಾದ ಎಂದು ಸ್ವೀಕರಿಸಬೇಕು ಎಂದರು.
ಜೆ.ಪಿ ಸಂತೋಷ್ ಮುರ ಸ್ವಾಗತಿಸಿ, ಸರೋಜಿನಿ ಅರ್ಕ ವಂದಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ..
ಕುಡಿಪಾಡಿ ಬಿಲ್ಲವ ಗ್ರಾಮ ಸಮಿತಿ ನೂತನ ಅಧ್ಯಕ್ಷರಾಗಿ ಕೇಶವ ಪೂಜಾರಿ ಪೆಲತ್ತಡಿ, ಉಪಾಧ್ಯಕ್ಷರಾಗಿ ಸುನೀತಾ ಕುಡಿಪಾಡಿ, ಕಾರ್ಯದರ್ಶಿಯಾಗಿ ಜಯರಾಮ್ ಪೂಜಾರಿ ಕುಡಿಪಾಡಿ, ಜೊತೆ ಕಾರ್ಯದರ್ಶಿಯಾಗಿ ಸಂಜೀವ ಪೂಜಾರಿ ಓಜಾಲ, ಕೋಶಾಧಿಕಾರಿಯಾಗಿ ರಾಧಾಕೃಷ್ಣ ಪೂಜಾರಿರವರು ಆಯ್ಕೆಯಾದರು
ಬಿಲ್ಲವ ಮಹಿಳಾ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ತೇಜಾಕ್ಸಿ ಹರಿಶ್ಚಂದ್ರ ಕುಡಿಪಾಡಿ, ಉಪಾಧ್ಯಕ್ಷರಾಗಿ ಸರೋಜಿನಿ ಅರ್ಕ, ಕಾರ್ಯದರ್ಶಿಯಾಗಿ ಸೌಮ್ಯ ಕೊಂಟ್ರುಪ್ಪಾಡಿ, ಕೋಶಾಧಿಕಾರಿಯಾಗಿ ಹಸ್ತವೇಣಿ ಕುಡಿಪಾಡಿ, ಜೊತೆ ಕಾರ್ಯದರ್ಶಿಯಾಗಿ ಪವಿತ್ರ ಪೆಲತ್ತಡಿರವರು ಆಯ್ಕೆಯಾಗಿರುತ್ತಾರೆ.