ಯುವಕ ಮಂಡಲದಿಂದ ಸಮಾಜದಲ್ಲಿ ಗೌರವ- ಸುರೇಶ್ ರೈ
ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ 2022-23 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂ.24 ರಂದು ಸವಣೂರು ಯುವ ಸಭಾಭವನದಲ್ಲಿ ಜರಗಿತು.
ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ ಸವಣೂರು ಯುವಕ ಮಂಡಲದ ಅಧ್ಯಕ್ಷನಾಗಿ ಸಮಾಜಮುಖಿ ಕಾರ್‍ಯದ ಮೂಲಕ ನನಗೆ ಸಮಾಜದಲ್ಲಿ ಗೌರವ ಪ್ರಾಪ್ತವಾಗಿದೆ. ನಮ್ಮ ಯುವಕ ಮಂಡಲಕ್ಕೆ ಒಳ್ಳೆಯ ಹೆಸರು ಇದೆ. ಅದನ್ನು ನಿರಂತರವಾಗಿ ಉಳಿಸುವಲ್ಲಿ ಪ್ರಾಮಾಣಿಕವಾದ ಕೆಲಸವನ್ನು ಯುವಕ ಮಂಡಲದ ಪದಾಧಿಕಾರಿಗಳು ಮಾಡಬೇಕು ಎಂದು ಹೇಳಿದರು
ಯುವಕ ಮಂಡಲದಿಂದ ಏಕತೆ- ಶಿವಪ್ರಸಾದ್ ರೈ
ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಭೋಧಿಸಿದ ಕಡಬ ತಾಲೂಕು ಯುವ ಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿಯವರು ಮಾತನಾಡಿ ಯುವಕರನ್ನು ಒಗ್ಗೂಡಿಸಲು ಯುವಕ ಮಂಡಲದಿಂದ ಮಾತ್ರ ಸಾಧ್ಯವಾಗಿದೆ, ನಮ್ಮಲ್ಲಿ ಏಕತೆ ಬೆಳೆಸಲು ಸಹಕಾರಿ ಆಗಲಿ ಎಂದರು.
ಯುವ ಶಕ್ತಿ ಬೆಳಕಿಗೆ ಬರಬೇಕು- ದಿನೇಶ್ ಮೆದು
ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದುರವರು ಮಾತನಾಡಿ ಯುವ ಶಕ್ತಿ ಬೆಳಕಿಗೆ ಬರಲು ಯುವಕ ಮಂಡಲದಿಂದ ಮಾತ್ರ ಸಾಧ್ಯವಾಗಲಿದೆ ಎಂದು ಹೇಳಿದರು.
ಮಾದರಿ ಯುವ ಸಂಘಟನೆ- ರಾಕೇಶ್ ರೈ ಕೆಡೆಂಜಿ
ಅಕ್ರಮ-ಸಕ್ರಮ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿಯವರು ಮಾತನಾಡಿ ಸವಣೂರು ಯುವಕ ಮಂಡಲ ಮಾದರಿ ಸಂಘಟನೆಯಾಗಿದೆ ಎಂದು ಹೇಳಿದರು.
ಸಹಕಾರಕ್ಕೆ ಕೃತಜ್ಞತೆ- ಪ್ರಕಾಶ್ ಮಾಲೆತ್ತಾರು
ಅಧ್ಯಕ್ಷತೆ ವಹಿಸಿದ್ದ ಸವಣೂರು ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರುರವರು ತನ್ನ ಅವಧಿಯಲ್ಲಿ ಸಹಕಾರವನ್ನು ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಪೂರ್ಣ ಸಹಕಾರ ಬೇಕು-ಜಿತಾಕ್ಷ
ಸವಣೂರು ಯುವಕ ಮಂಡಲದ ನೂತನ ಅಧ್ಯಕ್ಷ ಜಿತಾಕ್ಷರವರು ಮಾತನಾಡಿ ಯುವಕ ಮಂಡಲದ ಬೆಳವಣಿಗೆಯಲ್ಲಿ ಎಲ್ಲರ ಪೂರ್ಣ ಸಹಕಾರ ಬೇಕು ಎಂದು ಹೇಳಿದರು.
ಸನ್ಮಾನ
ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಮಹೇಶ್ ಕೆ.ಸವಣೂರುರವರನ್ನು ಸವಣೂರು ಯುವಕ ಮಂಡಲದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್‍ಯದರ್ಶಿ ಕೀರ್ತನ್ ಕೋಡಿಬೈಲು ವಂದಿಸಿದರು. ಜಗದೀಶ್ ಇಡ್ಯಾಡಿ ಪ್ರಾರ್ಥನೆಗೈದರು. ವೀರಮಂಗಲ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಕಾರ್‍ಯಕ್ರಮ ನಿರೂಪಿಸಿದರು.
ಸವಣೂರು ಯುವಕ ಮಂಡಲದ ಮಾರ್ಗದರ್ಶಕರಾದ ಗಿರಿಶಂಕರ್ ಸುಲಾಯ ದೇವಸ್ಯ, ಮಾಜಿ ಅಧ್ಯಕ್ಷರುಗಳಾದ ತಾರಾನಾಥ ಕಾಯರ್ಗ, ಸುಪ್ರೀತ್ ರೈ ಖಂಡಿಗ,ಗಂಗಾಧರ್ ಸುಣ್ಣಾಜೆ, ಸವಣೂರು ಗ್ರಾ.ಪಂ. ಸದಸ್ಯ ತೀರ್ಥರಾಮ್ ಕೆಡೆಂಜಿ, ರಾಮಕೃಷ್ಣ ಪ್ರಭು, ಬಾಲಚಂದ್ರ ಕನ್ನಡಕುಮೇರು, ಚೇತನ್ ಕುಮಾರ್ ಕೋಡಿಬೈಲು, ರಾಜ್‌ದೀಪಕ್ ಶೆಟ್ಟಿ ಮಠ, ಸತೀಶ್ ಬಲ್ಯಾಯ ಕನಡಕುಮೇರು, ದಯಾನಂದ ಮೆದು, ತೇಜಸ್ ಬೇರಿಕೆ, ವಿನಯ್, ಪ್ರೇiಚಂದ್ರ ಮೆದು, ಭಾಸ್ಕರ್ ಗೌಡ ಅಡೀಲು, ಬಾಬು ದೇವಸ್ಯ ಸಹಿತ ನೂರಾರು ಮಂದಿ ಭಾಗವಹಿಸಿದರು.