





ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದಿಂದ ಮದ್ಲದಲ್ಲಿ ನಿರ್ಮಿಸಲಾದ ನೂತನ ಕಟ್ಟಡ ತುಡರ್ ಸದನದ ಉದ್ಘಾಟನಾ ಸಮಾರಂಭವು ಜೂ.30ರಂದು ಬೆಳಿಗ್ಗೆ ನಡೆಯಿತು.
ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯರವರ ಪೌರೋಹಿತ್ಯದಲ್ಲಿ ಗಣಹೋಮ, ಧಾರ್ಮಿಕ ವಿಧಿವಿಧಾನಗಳು ನಡೆಯಿತು.







ಬೆಳಿಗ್ಗೆ ಗಂಟೆ 7.55ರ ಶುಭಮುಹೂರ್ತದಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರಿಂದ ದೀಪಪ್ರಜ್ವಲನೆಯ ಮೂಲಕ ನೂತನ ಕಟ್ಟಡದ ಉದ್ಘಾಟನೆ ಮಾಡಲಾಯಿತು.





ಸುಬ್ರಾಯ ಬಲ್ಯಾಯರ ಛಲದಿಂದ ಕಟ್ಟಡ ನಿರ್ಮಾಣ ಸಾಧ್ಯ
ನೂತನ ಕಟ್ಟಡ ಉದ್ಘಾಟಿಸಿದ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ತುಡರ್ ಯುವಕ ಮಂಡಲಕ್ಕೆ ಬಹುಕಾಲದ ಬೇಡಿಕೆ ಈಡೇರಿದ ಸಂಭ್ರಮದ ಕ್ಷಣವಾಗಿದೆ. ಒಂದು ಸ್ವಂತ ಕಟ್ಟಡ ನಿರ್ಮಾಣ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಯುವಕ ಮಂಡಲ ಅನೇಕ ಅಡೆತಡೆಗಳನ್ನು ಎದುರಿಸಿದರೂ ಕಟ್ಟಡ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರ ಛಲ ಮತ್ತು ಸಮಾಜ ಸೇವೆಯ ಮನಸ್ಸಿನ ಜತೆಗೆ ದೇವರ ಅನುಗ್ರಹದಿಂದ ಸಂಘದ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ಗ್ರಾ.ಪಂ ನೀಡಿದ ಜಾಗವನ್ನು ಸದುಪಯೋಗಪಡಿಸುವಲ್ಲಿ ತುಡರ್ ಸಂಘ ಯಶಸ್ವಿಯಾಗಿದೆ ಎಂದು ಹೇಳಿದರು.
ಬೇಡಿಕೆ ಈಡೇರಿಸಿದ ತೃಪ್ತಿ-ಲೋಕೇಶ್ ಚಾಕೋಟೆ
ಅರಿಯಡ್ಕ ಗ್ರಾ.ಪಂ ಸದಸ್ಯ ಲೋಕೇಶ್ ಚಾಕೋಟೆ ಮಾತನಾಡಿ ನಾನು ಗ್ರಾ.ಪಂ ಸದಸ್ಯನಾಗಿ ಆಯ್ಕೆಯಾದ ಪ್ರಥಮ ಅವಧಿಯಲ್ಲೇ ತುಡರ್ ಯುವಕ ಮಂಡಲವು ಸ್ವಂತ ಜಾಗದ ಬೇಡಿಕೆಯನ್ನು ಮುಂದಿಟ್ಟಿದ್ದರು. ಆದರೆ ಅನೇಕ ಕಡೆ ಜಾಗ ಗುರುತು ಮಾಡಿದರೂ ಅಂತಿಮವಾಗಿ ಅವರ ಬೇಡಿಕೆಯಂತೆ ಮದ್ಲದಲ್ಲಿ ಸೂಕ್ತ ಜಾಗವನ್ನು ಗುರುತು ಮಾಡಿಕೊಡುವಲ್ಲಿ ಗ್ರಾ.ಪಂ ಯಶಸ್ವಿಯಾಯಿತು. ಹಾಗಾಗಿ ಯುವಕ ಸಂಘದ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನಮಗಿದೆ. ಈಗಾಗಲೇ ಸಮಾಜಮುಖಿ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ತುಡರ್ ಸಂಘ ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡದಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆದು ಬರಲಿ ಎಂದು ಶುಭಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾ.ಪಂ ಅಧ್ಯಕ್ಷೆ ಸೌಮ್ಯಬಾಲಸುಬ್ರಹ್ಮಣ್ಯ, ಸದಸ್ಯರಾದ ಹೇಮಾವತಿ ಚಾಕೋಟೆ, ಅನಿತಾ ಆಚಾರಿಮೂಲೆ, ಕಾವು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ, ಸದಸ್ಯರಾದ ಮಳಿ ರಾಮಚಂದ್ರ ಭಟ್, ನಿರ್ಮಲಾ ರೈ, ಮಾಡ್ನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿ, ಉಪಾಧ್ಯಕ್ಷ ಸುರೇಂದ್ರ ಬೋರ್ಕರ್ ನನ್ಯ, ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಮದಾಸ ರೈ ಮದ್ಲ, ಯುವಕ ಮಂಡಲದ ಹಿತೈಷಿಗಳಾದ ಲಕ್ಷ್ಮೀನಾರಾಯಣ ಭಟ್ ಪೆರ್ನಾಜೆ, ಶರತ್ ಕುಮಾರ್ ರೈ, ಡಾ. ನವೀನಶಂಕರ ಮಳಿ, ಶಿವಪ್ರಸಾದ್ ಕೊಚ್ಚಿ, ಶ್ರೀಧರ್ ರಾವ್ ನಿಧಿಮುಂಡ, ಹರೀಶ್ ಕುಂಜತ್ತಾಯ, ಪೂವಪ್ಪ ನಾಯ್ಕ, ರಮೇಶ್ ರಾವ್, ಸುಂದರ ಪೂಜಾರಿ ಕೆರೆಮಾರು, ಜಯಂತ ಗೌಡ ಪರನೀರು, ಚಂದ್ರಶೇಕರ ಪಾಟಾಳಿ, ವಿದ್ಯಾಧರ ರಾವ್, ಜಯಾನಂದ ಗೌಡ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಮನಮೋಹನ ಬನಾರಿ, ಶಿವಪ್ರಕಾಶ್ ಕೌಡಿಚ್ಚಾರ್, ಗೋಪಾಲಕೃಷ್ಣ ಭಟ್ ಕಮಲಡ್ಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ತುಡರ್ ಯುವಕ ಮಂಡಲದ ಅಧ್ಯಕ್ಷ ಜಗದೀಶ ನಾಯ್ಕ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸುಬ್ರಾಯ ಬಲ್ಯಾಯರವರು ಅತಿಥಿಗಳನ್ನು ಸತ್ಕರಿಸಿದರು. ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ ಸ್ವಾಗತಿಸಿ ವಂದಿಸಿದರು. ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದರು.
ಹಲವು ಪ್ರಮುಖರ ಭೇಟಿ
ಉದ್ಘಾಟನಾ ಕಾರ್ಯಕ್ರಮದ ಬಳಿಕ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಅರಿಯಡ್ಕ ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ, ಸದಸ್ಯರಾದ ದಿವ್ಯನಾಥ ಶೆಟ್ಟಿ, ಹರೀಶ್ ಕುಮಾರ್ ರೈ, ಮೋನಪ್ಪ ಪೂಜಾರಿ ಪಿಲಿಪಂಜರ, ಪಿಡಿಓ ಪದ್ಮಕುಮಾರಿ, ಅರಿಯಡ್ಕ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ಪಾಪೆಮಜಲು, ಅಮ್ಮಣ್ಣ ರೈ ಪಾಪೆಮಜಲು, ಅರಿಯಡ್ಕ ಗ್ರಾ.ಪಂ ಮಾಜಿ ಸದಸ್ಯರಾದ ರವೀಂದ್ರ ಪೂಜಾರಿ, ಹೊನ್ನಪ್ಪ ಪೂಜಾರಿ, ನವೀನ ಬಿ.ಡಿ, ಕಾವು ಲಯನ್ಸ್ ಕ್ಲಬ್ ನ ಪಾವನರಾಮ, ದೇವಣ್ಣ ರೈ, ಕುಶಾಲಪ್ಪ ಗೌಡ ಬದಿಯಡ್ಕ ಸೇರಿದಂತೆ ಅನೇಕರು ಭೇಟಿ ನೀಡಿ ಶುಭಹಾರೈಸಿದರು.









