ಪುತ್ತೂರು: ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ರೈ ಸಾಂತ್ಯ ಮತ್ತು ಸುಜಾತ ರೈ ಎಚ್.ರವರ ದಾಂಪತ್ಯ ಜೀವನದ ಸುವರ್ಣ ಸಂಭ್ರಮ ಕಾರ್ಯಕ್ರಮ ಜು.2 ರಂದು ಸಾಂತ್ಯ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸನ್ಮಾನ, ಗೌರವಾರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರಿಗೆ ಗೌರವಾರ್ಪಣೆ ಮಾಡಲಾಯಿತು. ಶಾಲು, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ವೆಂಕಟರಮಣ ಭಟ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಗೌರವಾರ್ಪಣೆ ಸ್ವೀಕರಿಸಿದ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ, ಗಣೇಶ್ ರೈಯವರು ತನ್ನ ಮದುವೆಯ 50 ನೇ ವರ್ಷದ ಸಂಭ್ರಮವನ್ನು ಎಲ್ಲರೊಂದಿಗೆ ಹಂಚಿಕೊಂಡಿರುವುದು ಖುಷಿ ತಂದಿದೆ. ಒಂದು ಕೂಡುಕುಟಂಬದೊಂದಿಗೆ ಎಲ್ಲರೂ ಸೇರಿಕೊಂಡು ಸನ್ಮಾನ,ಗೌರವಾರ್ಪಣೆಯೊಂದಿಗೆ ಎಲ್ಲರಿಗೂ ಮಾದರಿಯಾಗುವಂತಹ ಕಾರ್ಯಕ್ರಮ ಇದಾಗಿದೆ. ಹಿರಿಯರಿಗೆ ಗೌರವ ಕೊಡುವ ಕೆಲಸದೊಂದಿಗೆ ಮಕ್ಕಳ ವಿದ್ಯಾರ್ಜನೆಗೆ ಪ್ರೋತ್ಸಾಹ ಕೊಡುವ ಕೆಲಸ ಕೂಡ ಮಾಡಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.
ಗಣೇಶ್ ರೈಯವರ ಅಣ್ಣ ವಿಶ್ವನಾಥ ರೈ, ಉಮೇಶ್ ರೈ ಮೊರಂಗಲ್ಲು ತರವಾಡುಮನೆ, ನೆಲ್ಲಿತ್ತಡ್ಕ ಬಾರಿಕೆಯ ಕಮಲಮ್ಮರವರುಗಳನ್ನು ಗೌರವಿಸಲಾಯಿತು. ಎಂಕಾಂನಲ್ಲಿ ಹತ್ತನೇ ರ್‍ಯಾಂಕ್ ಗಳಿಸಿದ ಹರ್ಷಿತಾ ರೈ ಮತ್ತು ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗೌರವಿಸಲಾಯಿತು. ಗಣೇಶ್ ರೈಯವರು ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಗಣೇಶ್ ರೈಯವರ ಪುತ್ರ ಪ್ರವೀಣ್ ರೈ ಸ್ವಾಗತಿಸಿದರು, ಸೊಸೆ ಸೌಮ್ಯರವರು ಗಣೇಶ್ ರೈಯವರ ಸಾಧನೆ ಬಗ್ಗೆ ಹೇಳಿದರು. ಶಿಕ್ಷಕಿ ರಮ್ಯ ಸನ್ಮಾನಿತರ ಪಟ್ಟಿ ವಾಚಿಸಿದರು. ನಿವೃತ್ತ ಶಿಕ್ಷಕ, ಗಣೇಶ್ ರೈಯವರ ಸಹೋದರ ಆನಂದ ರೈ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ರೈಯವರ ಪುತ್ರಿ ಮಮತಾಮಣಿ, ಅಳಿಯ ವೆಂಕಪ್ಪ ರೈ ಹಾಗೂ ಗಣೇಶ್ ರೈಯವರ ಸಹೋದರ, ಸಹೋದರಿಯರು, ಮೊಮ್ಮಕ್ಕಳು ಸಹಕರಿಸಿದ್ದರು. ಸಾಂತ್ಯ ನೆಲ್ಲಿತ್ತಡ್ಕ ಕುಟುಂಬಸ್ಥರು, ಮೊರಂಗಲ್ಲು ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರು ಉಪಸ್ಥಿತರಿದ್ದರು.