ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಗುರುಪೂರ್ಣಿಮೆಯನ್ನು ಜು.3ರಂದು ಆಚರಿಸಲಾಯಿತು.ಜಗದ್ಗುರುಗಳಾದ ಶ್ರೀ ವೇದವ್ಯಾಸ ಮಹರ್ಷಿಗಳ ಭಾವಚಿತ್ರಕ್ಕೆ ಎಲ್ಲರಿಂದ ಪುಷ್ಪಾರ್ಚನೆ ಗಯ್ಯಲಾಯಿತು.
ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ಮಾತನಾಡಿ ನಮ್ಮ ಜೀವನದಲ್ಲಿ ದಾರಿದೀಪವಾದವರೇ ನಮ್ಮ ಗುರು. ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥ ವಾಗಿ ವ್ಯಕ್ತಿಯನ್ನು ಫಲಾಫಕ್ಷೆ ಗಳಿಲ್ಲದೆ ಸಾರ್ಥಕ ವ್ಯಕ್ತಿಯನ್ನಾಗಿ ಮಾಡುವವರು ಗುರುಗಳು. ಅಂತಹ ಗುರುವಿಗೆ ವಿದ್ಯಾರ್ಥಿಗಳು ತಲೆಬಾಗಬೇಕು ಎಂದರು.
ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ ಮಹಾಭಾರತ ವನ್ನು ಸಂಪೂರ್ಣ ವಾಗಿ ಅರ್ಥೈಸುವಂತೆ ತಿಳಿಸಿದ ವ್ಯಾಸರನ್ನು ಜಗತ್ ಗುರು ಎಂದು ಒಪ್ಪಿಕೊಂಡಿದ್ದೇವೆ. ಉತ್ತಮ ವಿಚಾರದಲ್ಲಿ ಒಳ್ಳೆಯದನ್ನು ಅನುಸರಿಸಿ ಬೆಳೆಯಬೇಕು ಎಲ್ಲರೂ ಜ್ಞಾನಿ ಗಳಾಗಿ, ಪುಸ್ತಕ ಓದುವವರಾಗಿ, ಗುರು ಹಿರಿಯನ್ನು ಗೌರವಿಸಿ ಎಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿಎನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ,ಶ್ವೇತಾ ಕಾರ್ಯಕ್ರಮ ನಿರೂಪಿಸಿ, ವಾಣಿ ಧನ್ಯವಾದ ಗೈದರು.ಸದಸ್ಯರುಗಳಾದ ಪ್ರಸನ್ನ ಭಟ್, ಹರೀಶ್ ಪುತ್ತೂರಾಯ, ಶಿಕ್ಷಕ ಶಿಕ್ಷಕೇತರ ವೃoದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.