ವೈಯಕ್ತಿಕ ಲಾಭಕ್ಕಿಂತ, ಸಮಾಜಕ್ಕೆ ನೀಡುವ ಕೊಡುಗೆ ಮುಖ್ಯ-ಡಾ.ಗೀತಪ್ರಕಾಶ್
ಪುತ್ತೂರು:ಹಣ ಅನ್ನುವುದು ಒಳ್ಳೆಯ ಸೇವಕ ಹಾಗೆಯೇ ಕೆಟ್ಟ ಯಜಮಾನ. ಹಣವನ್ನು ಒಳ್ಳೆಯ ರೀತಿಯಲ್ಲಿ ಸಮಾಜಕ್ಕೆ ಉಪಯೋಗಿಸಿದಾಗ ಅದು ಒಳ್ಳೆಯ ಸೇವಕನೆನಿಸಿಕೊಳ್ಳುವುದು. ಇಲ್ಲದಿದ್ದರೆ ಕೆಟ್ಟ ಯಜಮಾನನಂತೆ ದುಷ್ಪರಿಣಾಮಕ್ಕೆ ಒಳಗಾಗಬಲ್ಲುದು. ಆದ್ದರಿಂದ ಸದಸ್ಯರು ನಮ್ಮ ಲಾಭಕ್ಕಿಂತ, ಸಮಾಜಕ್ಕೆ ನೀಡುವ ಕೊಡುಗೆ ಬಹಳ ಮುಖ್ಯವಾಗುತ್ತದೆ ಎಂದು ಪಿಎಂಜೆಎಫ್ ಡಾ.ಗೀತಪ್ರಕಾಶ್ರವರು ಹೇಳಿದರು.
ಅಂತರ್ರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಡಿ, ಪ್ರಾಂತ್ಯ 6, ವಲಯ ಒಂದರ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಹಾಗೂ ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಜು.9 ರಂದು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಜರಗಿದ್ದು, ಈ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು. ಕ್ಲಬ್ನಲ್ಲಿ ಹೆಚ್ಚೆಚ್ಚು ಸದಸ್ಯರ ಸೇರ್ಪಡೆಯ ಬದಲು ಒಳ್ಳೆಯ ಗುಣಮಟ್ಟದ, ಸಮಾನ ಮನಸ್ಕ ಚಿಂತನೆಯ ಸದಸ್ಯರಿದ್ದರೆ ಸಾಕು. ಸದಸ್ಯರಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಾ, ಕಾರ್ಯಕ್ರಮವನ್ನು ಹಮ್ಮಿಕೊಂಡು ಕಾರ್ಯಕ್ರಮದಲ್ಲಿ ಸಕ್ರಿಯರಾಗುವುದು, ಕ್ಲಬ್ಗೆ ಯಾವ ಉದ್ಧೇಶವನ್ನಿಟ್ಟುಕೊಂಡು ಬಂದಿದ್ದೇವೆ ಎಂಬ ಆತ್ಮಾವಲೋಕನೆ ಮಾಡಿಕೊಳ್ಳುವುದು ಅತೀ ಅಗತ್ಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾಜಿ ರೀಜನ್ ಚೇರ್ಮ್ಯಾನ್ ಕಾವು ಹೇಮನಾಥ ಶೆಟ್ಟಿರವರು ಚಾರ್ಟರ್ ನೈಟ್ ಅನ್ನು ನಡೆಸಿಕೊಟ್ಟು ಮಾತನಾಡಿ, ಅಂತರ್ರಾಷ್ಟ್ರೀಯ ಸಂಸ್ಥೆಯಾಗಿರುವ ಈ ಲಯನ್ಸ್ ಸಂಸ್ಥೆಯಲ್ಲಿ ಸದಸ್ಯರಾಗಿದ್ದವರನ್ನು ಸಮಾಜ ಗುರುತಿಸುತ್ತದೆ. ಲಯನ್ಸ್ ಕ್ಲಬ್ ಮುಖಾಂತರ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಆತ್ಮಸಂತೋಷ ಲಭಿಸುತ್ತದೆ. ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಸಂಸ್ಥೆಯು ಉತ್ತಮ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಅನೇಕ ಪ್ರಶಸ್ತಿಗಳನ್ನು ಪಡೆದಿರುವುದು ಶ್ಲಾಘನೀಯವಾಗಿದೆ ಎಂದರು.
ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ನಿರ್ಗಮನ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಆರಂಭಗೊಂಡ ಕ್ಲಬ್ ನಮ್ಮದಾಗಿದ್ದರೂ, ಸಮಾಜಮುಖಿ ಚಟುವಟಿಕೆಗಳನ್ನು ಮಾತ್ರ ನಿರಂತರ ಮಾಡುತ್ತಾ ಬಂದಿದ್ದೇವೆ. ಈ ವರ್ಷ ಪುತ್ತೂರು ಬಸ್ಸುನಿಲ್ದಾಣ ಬಳಿ ರಿಕ್ಷಾ ತಂಗುದಾಣ, ಮೂರು ಮನೆಗಳಿಗೆ ವಿದ್ಯುತ್, ಡೆಂಟಲ್ ಕ್ಯಾಂಪ್, ಮೆಡಿಕಲ್ ಕ್ಯಾಂಪ್, ಸ್ವಾತಂತ್ರೋತ್ಸವದ ಸಂದರ್ಭ ಸ್ವಚ್ಛತಾ ಕಾರ್ಯಕ್ರಮ ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಏಳನೇ ಅವಾರ್ಡ್, ಉತ್ತಮ ಅಧ್ಯಕ್ಷ, ಉತ್ತಮ ಕಾರ್ಯದರ್ಶಿ, ಉತ್ತಮ ಕೋಶಾಧಿಕಾರಿ ಪ್ರಶಸ್ತಿ ಪಡೆದಿರುತ್ತೇವೆ. ಈ ಪ್ರಶಸ್ತಿಗಳ ಹಿಂದೆ ನಮ್ಮ ಕ್ಲಬ್ನ ಸದಸ್ಯರ ಸಹಕಾರವನ್ನು ಹೃದಯಾಂತರಾಳದಿಂದ ಸ್ಮರಿಸುತ್ತೇನೆ ಹಾಗೂ ನೂತನ ತಂಡಕ್ಕೆ ಶುಭ ಹಾರೈಸುತ್ತಾ ತನ್ನ ಅವಧಿಯಲ್ಲಿ ಸಹಕರಿಸಿದ ಸದಸ್ಯರಿಗೆ ಕಿರು ಕಾಣಿಕೆ ನೀಡಿ ಗೌರವಿಸಿದರು.
ನೂತನ ಸದಸ್ಯರ ಸೇರ್ಪಡೆ:
ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತುಗೆ ಕ್ಲಾಸಿಕ್ಲಿಕ್ಸ್ ಸ್ಟುಡಿಯೋ ಮಾಲಕ, ಬಪ್ಪಳಿಗೆ ನಿವಾಸಿ ರೋಶನ್ ಡಾಯಸ್, ಅನಿಲ್ ಆಂಟನಿ ಮಸ್ಕರೇನ್ಹಸ್ ಸಾಮೆತ್ತಡ್ಕ, ಬೆದ್ರಾಳ ನಿವಾಸಿ, ಸ್ಪಂದನ ಸಹಾಯನಿಧಿ ಸೇವಾ ಟ್ರಸ್ಟ್ ನ ಸುಮಿತ್ರ ಎಸ್. ಲಿಯೋ ಕ್ಲಬ್ಗೆ ಅಕ್ಷಯ್ರವರನ್ನು ಪದಪ್ರದಾನ ಅಧಿಕಾರಿ ಡಾ.ಗೀತಪ್ರಕಾಶ್ರವರು ಲಯನ್ ಪಿನ್ ತೊಡಿಸಿ ಕ್ಲಬ್ಗೆ ಬರಮಾಡಿಕೊಂಡರು. ರಂಜಿನಿ ಶೆಟ್ಟಿ, ಚಂದ್ರಶೇಖರ್ ಪಿ, ವತ್ಸಲಾ ಶೆಟ್ಟಿ, ಸುನಿತ್ ಪಟೇಲ್ರವರು ನೂತನ ಸದಸ್ಯರ ಪರಿಚಯವನ್ನು ಮಾಡಿದರು.
ಸನ್ಮಾನ:
ಪದಪ್ರದಾನ ಅಧಿಕಾರಿ ಪಿಡಿಜಿ ಡಾ.ಗೀತಪ್ರಕಾಶ್, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಸ್ಥಾಪನೆಗೆ ಕಾರಣಕರ್ತರಾದ ಕಾವು ಹೇಮನಾಥ ಶೆಟ್ಟಿ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ನಿರ್ಗಮನ ಅಧ್ಯಕ್ಷ ಕೇಶವ ಪೂಜಾರಿ, ಕಾರ್ಯದರ್ಶಿ ಮೋಹನ್ ನಾಯಕ್, ಕೋಶಾಧಿಕಾರಿ ರವಿಚಂದ್ರ ಆಚಾರ್ಯ, ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ವಲಯ ಅಧ್ಯಕ್ಷೆ ವಿನ್ನಿ ಮಸ್ಕರೇನ್ಹಸ್, ಲಿಯೋ ಜಿಲ್ಲಾಧ್ಯಕ್ಷೆ ರಂಜಿತಾ ಶೆಟ್ಟಿ, ಲಿಯೋ ಜಿಲ್ಲಾ ಕೋಶಾಧಿಕಾರಿ ಲೆರಿಸ್ಸ ಪ್ರಿನ್ಸಿ ಮಸ್ಕರೇನ್ಹಸ್, ಎಂ.ಆರ್.ಪಿ.ಎಲ್ನ ಸೀತಾರಾಮ ರೈ, ಪಡೀಲು ಚೈತನ್ಯ ಮಿತ್ರವೃಂದದ ಅಧ್ಯಕ್ಷ ಪುರಂದರ ಪಡೀಲು, ಲಯನ್ಸ್ ಕ್ಲಬ್ ಬ್ರಾಂಡ್ ಅಂಬಾಸಡರ್ ಗಣೇಶ್ ಶೆಟ್ಟಿರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಧನಸಹಾಯ ವಿತರಣೆ;
ಸಾಮೆತ್ತಡ್ಕ ನಿವಾಸಿ, ಆಟೋ ಚಾಲಕರಾಗಿರುವ ವಾಲ್ಟರ್ ಲೋಬೊರವರ ವೈದ್ಯಕೀಯ ಖರ್ಚಿಗೆ, ಲಯನ್ಸ್ ಜ್ಯೋತಿ ಹೆಸರಿನಲ್ಲಿ ಫಲಾನುಭವಿ ದಿನೇಶ್ ಪೂಜಾರಿ ಬೆದ್ರಾಳರವರಿಗೆ, ವಿದ್ಯಾರ್ಥಿನಿಯರಾದ ಭೂಮಿಕಾ, ಪವಿಶ್ರೀರವರ ಶಾಲಾ ಶುಲ್ಕಕ್ಕೆ ಧನಸಹಾಯವನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ವಲಯ ಅಧ್ಯಕ್ಷೆ ವಿನ್ನಿ ಮಸ್ಕರೇನ್ಹಸ್, ಲಿಯೋ ಕ್ಲಬ್ ಪುತ್ತೂರ್ದ ಮುತ್ತು ನಿರ್ಗಮನ ಅಧ್ಯಕ್ಷೆ ರಂಜಿತಾರವರು ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಪದಪ್ರದಾನ ಅಧಿಕಾರಿ ಡಾ.ಗೀತಪ್ರಕಾಶ್ ರವರ ಪತ್ನಿ ಗಾಯತ್ರಿ ಪ್ರಕಾಶ್, ಲಯನ್ ವಲಯಾಧ್ಯಕ್ಷ ಪಾವನ ರಾಮ್ ಉಪಸ್ಥಿತರಿದ್ದರು. ವತ್ಸಲ ಶೆಟ್ಟಿ ಪ್ರಾರ್ಥಿಸಿದರು. ರಂಜಿನಿ ಶೆಟ್ಟಿ ಧ್ವಜ ವಂದನೆ ಹಾಗೂ ಲಯನ್ಸ್ ನೀತಿ ಸಂಹಿತೆಯನ್ನು ಭಾಗ್ಯೇಶ್ ರೈ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಶ್ವ ಶಾಂತಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನಿರ್ಗಮನ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್ ನಾಯಕ್ ರವರು ವರದಿ ಮಂಡಿಸಿ, ವಂದಿಸಿದರು. ಸದಸ್ಯರಾದ ರವೀಂದ್ರ ಪೈ, ಅಬೂಬಕ್ಕರ್ ಮುಲಾರ್, ವಿಕ್ರಂ ಶೆಟ್ಟಿ, ವತ್ಸಲಾ ಪದ್ಮನಾಭ ಶೆಟ್ಟಿ, ಮಂಜುನಾಥ್ ಎಂ, ಚಂದ್ರಶೇಖರ್ ಬಿ, ರಂಜಿತಾ ಶೆಟ್ಟಿ, ಪವಿತ್ ರೈಯವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಪ್ರಿಯಲತಾ ಡಿ’ಸಿಲ್ವರವರು ಪದಪ್ರದಾನ ಅಧಿಕಾರಿಯ ಪರಿಚಯ ಮಾಡಿದರು. ಸದಸ್ಯರಾದ ಚಂದ್ರಶೇಖರ್ ಪಿ, ವಿಕ್ರಂ ಶೆಟ್ಟಿ ಅಂತರ, ಮಂಜುನಾಥ್ ಎಂ.ರವರು ನೂತನ ಪದಾಧಿಕಾರಿಗಳ ಪರಿಚಯ ಮಾಡಿದರು. ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪದಾಧಿಕಾರಿಗಳಿಗೆ ಪದಪ್ರದಾನ…
ನೂತನ ಪದಾಧಿಕಾರಿಗಳಾದ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷ ರವೀಂದ್ರ ಪೈ, ಕಾರ್ಯದರ್ಶಿ ಮೋಹನ್ ನಾಯಕ್ ಎಸ್, ಕೋಶಾಧಿಕಾರಿ ಮೊಹಮದ್ ಹನೀಫ್ ಎಸ್, ನಿಕಟಪೂರ್ವ ಅಧ್ಯಕ್ಷರ ಕೇಶವ ಪೂಜಾರಿ ಬೆದ್ರಾಳ, ಪ್ರಥಮ ಉಪಾಧ್ಯಕ್ಷ ವಿಕ್ರಂ ಶೆಟ್ಟಿ ಅಂತರ, ದ್ವಿತೀಯ ಉಪಾಧ್ಯಕ್ಷ ಮಂಜುನಾಥ ಎಂ, ಮೆಂಬರ್ ಶಿಪ್ ಚೇರ್ ಪರ್ಸನ್ ಚಂದ್ರಶೇಖರ ಪಿ, ಎಲ್.ಸಿ.ಐ.ಎಫ್ ಸಂಯೋಜಕ ರವಿಪ್ರಸಾದ್ ಶೆಟ್ಟಿ ಕೆ, ಸರ್ವಿಸ್ ಚೇರ್ ಪರ್ಸನ್ ಭಾಗ್ಯೇಶ್ ರೈ, ಮಾರ್ಕೆಟಿಂಗ್ ಚೇರ್ ಪರ್ಸನ್ ವತ್ಸಲ ಪದ್ಮನಾಭ ಶೆಟ್ಟಿ, ಪಿ.ಆರ್.ಓ ರಂಜಿನಿ ಶೆಟ್ಟಿ, ಟೇಮರ್ ಅಬೂಬಕ್ಕರ್ ಮುಲಾರ್, ನಿರ್ದೇಶಕರುಗಳಾದ ಲ್ಯಾನ್ಸಿ ಮಸ್ಕರೇನ್ಹಸ್, ಪ್ರಿಯಲತಾ ಡಿ’ಸಿಲ್ವ, ಇಂದಿರಾ ಮೋಹನ್ ನಾಯಕ್, ಸಿಲ್ವೆಸ್ತರ್ ಡಿ’ಸೋಜ, ರವಿಚಂದ್ರ ಆಚಾರ್ಯ, ಭಾಸ್ಕರ್ ಸುವರ್ಣ ಹಾಗೂ ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷೆ ಲೆರಿಸ್ಸ ಪ್ರಿನ್ಸಿ ಮಸ್ಕರೇನ್ಹಸ್, ಕಾರ್ಯದರ್ಶಿ ಸುನಿತ್ ಪಟೇಲ್, ಕೋಶಾಧಿಕಾರಿ ಪವಿತ್ ಯು.ರೈ, ಉಪಾಧ್ಯಕ್ಷ ಲ್ಯಾನ್ಸನ್ ಪ್ರೀತ್ ಮಸ್ಕರೇನ್ಹಸ್, ನಿರ್ದೇಶಕರುಗಳಾದ ರಂಜಿತಾ ಶೆಟ್ಟಿ, ಬಿ.ದಿವಿತ್ ಯು ರೈ, ಧಿರೆನ್, ರೆನಿಟ ಜ್ಯೋತಿ ಮೋನಿಸ್, ಫ್ಲವಿಟ ಕ್ಯಾರಲ್ ಡಿ’ಸೋಜ, ಶ್ರೀಕರ್ ಶೆಣೈ ಹಾಗೂ ಲಿಯೋ ಕ್ಲಬ್ ಮಾರ್ಗದರ್ಶಕ ರವಿಪ್ರಸಾದ್ ಶೆಟ್ಟಿಯವರಿಗೆ ಪದಪ್ರದಾನ ಅಧಿಕಾರಿ ಪಿಎಂಜೆಎಫ್ ಡಾ.ಗೀತಪ್ರಕಾಶ್ರವರು ಪದಪ್ರದಾನ ನೆರವೇರಿಸಿದರು.
ಡಾ.ಅಜಯ್ರವರಿಗೆ ಸನ್ಮಾನ..
ವೈದ್ಯ ವೃತ್ತಿಯಲ್ಲಿ ಉತ್ತಮ ಸೇವೆ ನೀಡುತ್ತಾ ಜನರ ಅಚ್ಚುಮೆಚ್ಚಿನ ಡಾಕ್ಟರ್, 24*7 ಡಾಕ್ಟರ್ ಎಂದೇ ಪ್ರಸಿದ್ಧರಾದ ಪುತ್ತೂರು ಸರಕಾರಿ ಆಸ್ಪತ್ರೆಯ ಎಲುಬು ತಜ್ಞ ಡಾ.ಅಜಯ್ರವರಿಗೆ ರಾಜ್ಯ ಸರಕಾರದಿಂದ ಉತ್ತಮ ಅರ್ಥೊಪೆಡಿಕ್ ಸರ್ಜನ್ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಡಾ.ಅಜಯ್ರವರ ಸೇವೆಯನ್ನು ಪರಿಗಣಿಸಿ ಅವರನ್ನು ಈ ಸಂದರ್ಭದಲ್ಲಿ ಕ್ಲಬ್ನಿಂದ ಸನ್ಮಾನಿಸಲಾಯಿತು.
ನಿಸ್ವಾರ್ಥ ಸೇವೆಗೊಂದು ಅವಕಾಶ…
ತಾನು ಇತರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರೂ ತನ್ನ ಸೇವಾ ವ್ಯಾಪ್ತಿಯನ್ನು ಹೆಚ್ಚಿಸಲು ಲಯನ್ಸ್ ಕ್ಲಬ್ಗೆ ಸೇರ್ಪಡೆಯಾದೆ ಮಾತ್ರವಲ್ಲ ಕ್ಲಬ್ನ ಮೂರನೇ ವರ್ಷದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಕ್ಕೆ ತುಂಬಾ ಸಂತೋಷಗೊಂಡಿದ್ದೇನೆ. ನಿಸ್ವಾರ್ಥ ಮನೋಭಾವದಿಂದ ಸಮಾಜಕ್ಕೆ ಸೇವೆ ನೀಡಲು ನನಗೊಂದು ಅವಕಾಶವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಹಾಯಹಸ್ತ ನೀಡಬೇಕೆನ್ನುವ ಕಾಳಜಿಯೊಂದಿಗೆ ಕ್ಲಬ್ ಸದಸ್ಯ ಪೂರ್ಣಪ್ರಮಾಣದ ಸಹಕಾರವನ್ನು ಆಶಿಸುತ್ತೇನೆ.
-ರವೀಂದ್ರ ಪೈ, ನೂತನ ಅಧ್ಯಕ್ಷರು, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು