ಫಿಲೋಮಿನಾ ಪಿಯು ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಜಯಂತ್ ನಡುಬೈಲು

0

ಪುತ್ತೂರು: ಮಾಯಿದೆ ದೇವುಸ್ ಸಮೂಹ ಸಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್, ಉದ್ಯಮಿಯಾಗಿರುವ ಜಯಂತ್ ನಡುಬೈಲುರವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ಅಂಚಿತ್ ನಡುಬೈಲುರವರ ತಂದೆಯವರಾದ ಜಯಂತ್ ನಡುಬೈಲುರವರವರನ್ನು ಕಾಲೇಜಿನ ಸಂಚಾಲಕರಾದ ಲಾರೆನ್ಸ್ ಮಸ್ಕರೇನ್ಹಸ್‌ರವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಕಳೆದ ಸಾಲಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿದ್ದ ಮಾಮಚ್ಚನ್ ಎಂ.ರವರು ತನ್ನ ಹುದ್ದೆಯನ್ನು ನೂತನ ಅಧ್ಯಕ್ಷ ಜಯಂತ್ ನಡುಬೈಲುರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟರವರು ಉಪಸ್ಥಿತರಿದ್ದರು.
1971ರಲ್ಲಿ ಪುತ್ತೂರು ತಾಲೂಕು ಮುಂಡೂರು ಗ್ರಾಮದ ನಡುಬೈಲ್‌ಗುತ್ತಿನ ನಾರಾಯಣ ಸಾಲಿಯಾನ್ ಹಾಗೂ ಅಪ್ಪಿರವರ ಪುತ್ರನಾಗಿ ಜನಿಸಿದ ಜಯಂತ್ ನಡುಬೈಲುರವರು 1993ರಲ್ಲಿ ಸಂತ ಫಿಲೋಮಿನಾ ಕಾಲೇಜ್‌ನಲ್ಲಿ ಬಿ.ಕಾಂ ಪದವಿಯನ್ನು ಗಳಿಸಿಕೊಂಡರು. ಬಳಿಕ ಖಾಸಗಿ ಕಂಪೆನಿಗಳಲ್ಲಿ ದುಡಿಯುವ ಮೂಲಕ ಉದ್ಯೋಗ ಜೀವನ ಆರಂಭಿಸಿದ ಇವರು 2002ರಲ್ಲಿ ಉದ್ಯಮ ಜೀವನಕ್ಕೆ ಕಾಲಿಟ್ಟರು. ಜಯಂತ್‌ರವರು ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷರಾಗಿ, ಪುತ್ತೂರಿನ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷರಾಗಿ, ಹಲವು ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ, ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಕೋಟಿ-ಚೆನ್ನಯರ ಮೂಲಸ್ಥಾನವಾದ ‘ಗೆಜ್ಜೆಗಿರಿ ನಂದನ ಬಿತ್ತಿಲ್’ನ ಅಧ್ಯಕ್ಷರಾಗಿ, ಆತ್ಮಶಕ್ತಿ ಸೊಸೈಟಿ ಮತ್ತು ಆಸ್ಪತ್ರೆ ಟ್ರಸ್ಟ್‌ನ ಗೌರವಾನ್ವಿತ ಟ್ರಸ್ಟಿಯಾಗಿ ಉದ್ಧೇಶಿತ ಆತ್ಮಶಕ್ತಿ ಮೆಡಿಕಲ್ ಕಾಲೇಜ್‌ನ ಪ್ರವರ್ತಕರಾಗಿ ಸೇವೆ ಸಲ್ಲಿಸಿರುತ್ತಾರೆ. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರ ಸಾಧನೆಗಾಗಿ ಹಲವು ಸಂಘ-ಸಂಸ್ಥೆಗಳ ಗೌರವಕ್ಕೆ ಭಾಜನರಾಗಿರುತ್ತಾರೆ ಅಲ್ಲದೆ ಜೆ.ಸಿ.ಐ ಸಂಸ್ಥೆ ಅವರ ಸೇವಾ ಕಾರ್ಯಗಳನ್ನು ನೋಡಿ ‘ಸಾಧನಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ವರ್ಷವೊಂದಕ್ಕೆ ಸುಮಾರು 50ರಷ್ಟು ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಿ ಅದರ ಸಂಪೂರ್ಣ ಖರ್ಚು ವೆಚ್ಚ ನೋಡಿಕೊಳ್ಳುತ್ತಿದ್ದು ಪ್ರಸ್ತುತ ಸಂಪ್ಯದಲ್ಲಿ ಅಕ್ಷಯ ಕಾಲೇಜ್‌ನ್ನು ಮುನ್ನೆಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here