ಪುತ್ತೂರು: ಪ್ರತಿಷ್ಠಿತ ವಿಘ್ನೇಶ್ ಮಡ್ ಆ್ಯಂಡ್ ಸಿಮೆಂಟ್ ಪ್ರೋಡಕ್ಟ್ ರವರ ಇಂಟರ್ ಲಾಕ್, ಹೋಲೋ ಬ್ಲಾಕ್ಸ್ ಉತ್ಪನ್ನಗಳ ತಯಾರಿಕ ಘಟಕವು ಚಿಕ್ಕಮುಡ್ನೂರು ಗ್ರಾಮದ ಕೊಪ್ಪಳದಲ್ಲಿ ಜು.16ರಂದು ಉದ್ಘಾಟನೆಗೊಂಡಿತು.
ಶಾಸಕ ಅಶೋಕ್ ಕುಮಾರ್ ರೈ ನೂತನ ಇಂಟರ್ ಲಾಕ್ ಘಟಕವನ್ನು ಉದ್ಘಾಟಿಸಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಸಂಸ್ಥೆಯ ಕಚೇರಿಯನ್ನು ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗುಣಮಟ್ಟ ಕಾಯ್ದುಕೊಂಡಾಗ ಉದ್ಯಮ ಯಶಸ್ವಿ: ಅಶೋಕ್ ಕುಮಾರ್ ರೈ
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಉದ್ಯಮಿ ಆಗುವ ಎಲ್ಲಾ ಲಕ್ಷಣ ಚಿದಾನಂದ ರೈ ಅವರಲ್ಲಿ ಇದೆ. ಯಾಕೆಂದರೆ ಎಜ್ಯುಕೇಶನ್, ಕ್ವಾಲಿಪಿಕೇಶನ್ ಮುಖ್ಯವಲ್ಲ. ಕೌಶಲ್ಯ ಅಗತ್ಯ. ಇವತ್ತು ಶಿಕ್ಷಣದಲ್ಲಿ ಮೂರು ಡಿಗ್ರಿ ಪಡೆದವರು ಪುಸ್ತಕಕ್ಕೆ ಮಾತ್ರ ಸೀಮಿತ ಆಗುತ್ತಾರೆ. ಅಂತಹ ಡಿಗ್ರಿಗಿಂತ ಕೌಶಲ್ಯ ಮತ್ತು ಗುಣಮಟ್ಟ ಕಾಯ್ದುಕೊಂಡಾಗ ಉದ್ಯಮ ಯಶಸ್ವಿಯಾಗುತ್ತದೆ ಎಂದ ಅವರು ಇವತ್ತು ನಮ್ಮದೇ ಸರಕಾರ ಇದೆ. ಹಲವು ಕಡೆ ಇಂಟರ್ ಲಾಕ್ ಕೆಲಸ ಅಗತ್ಯವಿದೆ. ನಾವು ಆರ್ಡರ್ ಕೊಡುತ್ತೇವೆ. ಕಮೀಷನ್ ಬೇಡ, ನೀವು ಗುಣಮಟ್ಟ ಕಾಯ್ದುಕೊಂಡರೆ ಸಾಕು ಎಂದರು.
ಜನರಿಗೆ ಬೇಕಾದ ಕೆಲಸವೇ ಬಹುದೊಡ್ಡ ಪದವಿ: ಶಕುಂತಳಾ ಶೆಟ್ಟಿ
ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಎಲ್ಲಾ ಕೆಲಸ ಮಾಡಲು ಪದವಿ ಅಗತ್ಯವಲ್ಲ. ಜನರಿಗೆ ಬೇಕಾದ ಕೆಲಸ ಮಾಡಿದಾಗ ಅದೇ ಬಹು ದೊಡ್ಡ ಪದವಿ ಎಂದರು.
ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಸಂಪ್ಯ ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು, ಮಹಾವೀರ ಮೆಡಿಕಲ್ ಸೆಂಟರ್ ನ ಡಾ.ಅಶೋಕ್ ಪಡಿವಾಳ್, ವಿಘ್ನೇಶ್ ಮಡ್ ಸಿಮೆಂಟ್ ಪ್ರೋಡಕ್ಟ್ ಮಾಲಕ ಚಿದಾನಂದ ರೈ ಮತ್ತು ಪತ್ನಿ ಕೃಷ್ಣವೇಣಿ ರೈ, ಚಿದಾನಂದ ರೈ ಅವರ ತಂದೆ ಸಂಜೀವ ರೈ, ತಾಯಿ ಗಿರೀಜಾ ರೈ ಸಂಪ್ಯದಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿದರು. ರಶ್ಮಿ ಪ್ರಾರ್ಥಿಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಾ.ರಾಜಾರಾಮ್, ಮಹಾಬಲ ರೈ ವಳತ್ತಡ್ಕ, ಯಕ್ಷಗಾನ ಕಲಾವಿದ ಸರಪ್ಪಾಡಿ ಆಶೋಕ್ ಶೆಟ್ಟಿ, ಮೌರೀಸ್ ಮಸ್ಕರೇನಸ್, ನಝೀರ್ ಮಠ, ಕಲಿಯುಗ ಸೇವಾ ಸಮಿತಿ ಜೈನ್, ಕೃಷ್ಣಪ್ರಸಾದ್ ಆಳ್ವ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.