





ಕಾವು: ತನ್ನ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲಿಗೆ ಮರ ಬಿದ್ದು, ಮೊಣಕಾಲು ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಡ್ನೂರು ಗ್ರಾಮದ ಪರನೀರು ನಿವಾಸಿ ತಮ್ಮಣ್ಣ ಗೌಡರವರಿಗೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದಿಂದ ಧನಸಹಾಯ ನೀಡಲಾಯಿತು.


ಯುವಕ ಮಂಡಲದ ತುರ್ತು ಪರಿಹಾರ ನಿಧಿ ಯೋಜನೆಯ ಮೂಲಕ ರೂ.8,000/- ದ ಚೆಕ್ ನ್ನು ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆಯವರು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ನನ್ಯ, ಉಪಾಧ್ಯಕ್ಷ ಶ್ರೀಕುಮಾರ್ ಬಲ್ಯಾಯ, ಜತೆ ಕಾರ್ಯದರ್ಶಿ ತಿರುಮಲೇಶ ಮಿನೋಜಿಕಲ್ಲು, ಕೋಶಾಧಿಕಾರಿ ಹರೀಶ್ ಕೆರೆಮೂಲೆ, ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಕಾರ್ಯದರ್ಶಿ ಲಿಂಗಪ್ಪ ನಾಯ್ಕ ನನ್ಯ, ಯುವಕ ಮಂಡಲದ ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ, ಸದಸ್ಯರಾದ ನಿರಂಜನ ರಾವ್, ರಾಜೇಶ್ ಬಿ, ಭವಿತ್ ರೈ ಮದ್ಲರವರು ಪಾಲ್ಗೊಂಡಿದ್ದರು.















