ಸವಣೂರು: ಕಾಯಕಲ್ಪಕ್ಕೆ ಕಾಯುತ್ತಿದೆ ಪಾಳುಬಿದ್ದ ಗ್ರಾಮಕರಣಿಕರ ಕಚೇರಿ

0

ಸವಣೂರು: ಸರಕಾರಗಳು ಜನರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ವಿವಿಧ ಇಲಾಖೆಯನ್ನು ಗ್ರಾಮಮಟ್ಟದಲ್ಲಿ ತೆರೆಯುತ್ತದೆ. ಆದರೆ ನಿರ್ವಹಣೆಯಿಲ್ಲದೆ ಅವು ಉಪಯೋಗ ಶೂನ್ಯವಾಗಿ ಪಾಳುಬೀಳುವ ಸ್ಥಿತಿಗೆ ಬಂದಿದೆ.

ಕಡಬ ತಾಲೂಕಿನ ಸವಣೂರು ಗ್ರಾಮ ಪಂಚಾಯತ್ ಸಮೀಪವೇ ಇರುವ ಗ್ರಾಮಕರಣಿಕರ ಕಚೇರಿಯೊಂದು ಪಾಳುಬಿದ್ದಿದ್ದು ಕಾಯಕಲ್ಪಕ್ಕೆ ಕಾಯುತ್ತಿದೆ.
ಸವಣೂರು, ಪುಣ್ಚಪ್ಪಾಡಿ ಗ್ರಾಮಕರಣಿಕರ ಕಚೇರಿಯಾಗಿದ್ದ ಈ ಕಟ್ಟಡ ಈಗ ಪಾಳುಬಿದ್ದಿದೆ. ಈ ಕಚೇರಿಗೆ ಪೊದೆ, ಬಳ್ಳಿಗಳು ಆವರಿಸಿದ್ದು, ಕಟ್ಟಡದ ಒಂದು ಭಾಗದ ಮಾಡು ಮುರಿದುಬಿದ್ದು, ಹಂಚುಗಳು ನೆಲಕ್ಕುರುಳಿವೆ.
ಪ್ರಸ್ತುತ ಸವಣೂರು, ಪುಣ್ಚಪ್ಪಾಡಿ ಗ್ರಾಮಕರಣಿಕರ ಕಚೇರಿಯು ಸವಣೂರು ಗ್ರಾ.ಪಂ.ನ ಹಳೆಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸ್ವಂತಕಟ್ಟಡ ಇದ್ದರೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಬೇರೆ ಕಟ್ಟಡದಲ್ಲಿ ಇರುವಂತಾಗಿದೆ.
ಈ ಹಳೆಯ ಕಟ್ಟಡವನ್ನು ದುರಸ್ತಿ ಮಾಡಿ ಸರಕಾರದ ಆಸ್ತಿ ಮಣ್ಣು ಪಾಲಾಗದಂತೆ ಕಂದಾಯ ಇಲಾಖೆ ಮುತುವರ್ಜಿ ವಹಿಸಬೇಕಿದೆ.

ಸವಣೂರಿನಲ್ಲಿ ಕಂದಾಯ ಇಲಾಖೆಯ ಕಟ್ಟಡವೊಂದು ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಕೂಡಲೇ ಇದನ್ನು ಸಂಬಂಧಪಟ್ಟ ಇಲಾಖೆ ಗಮನಹರಿಸಿ ದುರಸ್ತಿ ಪಡಿಸಬೇಕಿದೆ.
– ಸತೀಶ್ ಬಲ್ಯಾಯ,
ಸಾಮಾಜಿಕ ಕಾರ್ಯಕರ್ತ

ಸವಣೂರು ಗ್ರಾ.ಪಂ.ನ ಹಿಂಬದಿಯಿರುವ ಕಂದಾಯ ಇಲಾಖೆಯ ಕಟ್ಟಡ ದುರಸ್ತಿ ಕುರಿತು ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಂಡು, ಆ ಕಟ್ಟಡವನ್ನು ಉಳಿಸಿಕೊಳ್ಳಬೇಕು.
– ರಾಜೀವಿ ಶೆಟ್ಟಿ
ಅಧ್ಯಕ್ಷರು ಸವಣೂರು ಗ್ರಾ.ಪಂ.

LEAVE A REPLY

Please enter your comment!
Please enter your name here