ಡಾ.ಎಂ.ಸೈಯದ್ ನಝೀರ್‌ರವರಿಗೆ`ಹಿಂದುಸ್ತಾನ್ ರತ್ನ’ ಪ್ರಶಸ್ತಿ ಪ್ರದಾನ

0

ಪುತ್ತೂರು: ವಾಣಿಜ್ಯೋದ್ಯಮಿ ಪುತ್ತೂರಿನ ಡಾ. ಎಂ.ಸೈಯದ್ ನಝೀರ್ ಅವರಿಗೆ ಪ್ರತಿಷ್ಠಿತ ಹಿಂದುಸ್ತಾನ್ ರತ್ನ ಪ್ರಶಸ್ತಿ-2023 ಅನ್ನು ನೀಡಿ ಗೌರವಿಸಲಾಗಿದೆ. ಇವರ ಸಮಾಜ ಸೇವಾ ಕಾರ್ಯದಲ್ಲಿನ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.

ಮುಂಬೈ ಗ್ಲೋಬಲ್ ಪ್ರಸ್ತುತರವರು ಮುಂಬೈಯ ಅಂದೇರಿಯ ದಿ.ಕ್ಲಬ್‌ನಲ್ಲಿ ಹಿಂದುಸ್ತಾನ್ ರತ್ನ ಅವಾರ್ಡ್ ಅನ್ನು ಡಾ. ಎಂ.ಎಸ್ ನಝೀರ್ ಮುರ ಸಿನೆಮಾ ಕ್ಷೇತ್ರದ ಸಾಧಕರಿಗೆ ಪ್ರದಾನ ಮಾಡಲಾಯಿತು. ಡಾ.ಎಂ.ಎಸ್ ನಝೀರ್ ಅವರು ಜಲಸಂರಕ್ಷಣೆಗಾಗಿ ಕಾಮಗಾರಿ ಕೈಗೊಂಡು ಕರ್ನಾಟಕ, ಮಹಾರಾಷ್ಟ್ರದಲ್ಲಿ ಅನೇಕ ಪಾಳು ಬಿದ್ದ ಕೆರೆ, ಹಳ್ಳ, ನದಿಗಳ ಜೀರ್ಣೋದ್ದಾರ ಮಾಡಿದ್ದು, ಪರಿಸರ ಸಂರಕ್ಷಣೆಗಾಗಿ ಅನೇಕ ಕಾರ್ಯಕ್ರಮ ಆಯೋಜಿಸಿದ್ದರು. ಡಾ.ಎಂ.ಎಸ್ ನಝೀರ್ ಅವರ ಬಹುಮುಖ ಪ್ರತಿಭೆ ಮತ್ತು ಸಾಮಾಜಿಕ ಕಳಕಳಿಯನ್ನು ಗುರುತಿಸಿ ಹಿಂದುಸ್ತಾನ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ನೃತ್ಯ ಸಂಯೋಜಕ ಹಾಗೂ ಸಿನೆಮಾ ನಿರ್ದೇಶಕರಾದ ರೇಮೋ ಡಿ’ಸೋಜ, ಡಾ. ಬು.ಅಬ್ದುಲ್ಲಾ ದುಬೈ, ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಲ್ ಮಂದಿರದ ಡಾ. ರಮಣ ತ್ರಿವೇದಿ ಸಹಿತ ಹಲವು ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುತ್ತೂರು ಮುರ ನಿವಾಸಿ, ಪ್ರಿಯಾ ಟ್ರಾನ್ಸ್‌ಪೋರ್ಟ್‌ನ ಮಾಲಕ, ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ಡಾ. ಎಂ.ಸೈಯದ್ ನಝೀರ್ ಅವರು ವಾಣಿಜ್ಯೋದ್ಯಮದ ಜೊತೆಗೆ ಸಮಾಜ ಸೇವೆ ಮತ್ತು ಪರಿಸರ ಹಾಗೂ ಹಸಿರುಕರಣ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ಇವರ ವಿಶೇಷ ಸಾಧನೆಗಾಗಿ ದಾದಾ ಸಾಹೇಬ್ ಪಾಲ್ಕೆ, ಐಕೋನ್ ಅವಾರ್ಡ್, ಪಿಲ್ಮ್ ಆರ್ಗೋನೈಷೇಶನ್ ಪ್ರಶಸ್ತಿ, ಛತ್ರಪತಿ ಶಿವಾಜಿ ಮಹಾರಾಜ್ ಗೌರವ ಪ್ರಶಸ್ತಿ, 9ನೇ ಫಿಲಾಸಫಿಕಲ್ ಮುಂಬೈ ಪ್ರೆಸ್ ಮೀಡಿಯಾ ಅವಾರ್ಡ್-2022 ಮತ್ತು ಪ್ರತಿಷ್ಠಿತ ಬ್ಯುಸಿನೆಸ್ ಲೀಡರ್ ಶಿಫ್ ಪ್ರಶಸ್ತಿ ಇವರಿಗೆ ಸಂದಿದೆ. ಜೆಮ್ಸ್‌ಗೇಟ್ ಜ್ಯುವೆಲ್ಲರ್‍ಸ್ (ಆಸ್ಟ್ಟ್ರೋ ಜೇಮ್ಸ್) ಮತ್ತು ಅಲ್‌ಕೀಝಾರ್ ಪರ್ಫ್ಯುಮು ಬ್ರಾಂಡ್‌ನ ಮಾಲಕರಾಗಿರುವ ಇವರು ಒಳನಾಡು ಮೀನುಗಾರಿಕೆ, ಮೀನು ತಳಿಗಳ ಅಭಿವೃದ್ಧಿಯಲ್ಲಿ ಅಂತರಾಷ್ಟ್ರೀಯ ಪರಿಣಿತರಾಗಿದ್ದಾರೆ. ಸುಗಂಧ ದ್ರವ್ಯಗಳ ಸಲಹೆಗಾರ ಮತ್ತು ಹರ್ಮಲ್ ಬಾಕೂರ್ ವಿಜ್ಞಾನಿ. ಕಳೆದ 43 ವರ್ಷಗಳಿಂದ ಪರಿಸರ, ಘನತ್ಯಾಜ್ಯ ನಿರ್ವಹಣೆ, ಬೋಟಿಂಗ್ ಮತ್ತು ಮೀನುಗಾರಿಕೆ, ಪ್ಲಾಸ್ಟಿಕ್ ಮುಕ್ತ ಪರಿಸರ, ಮರಗಳ ಹಾಗೂ ನೀರು ಸಂರಕ್ಷಣೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ. ಎಂ.ಎಸ್ ನಝೀರ್ ಸಾಹೇಬ್‌ರವರು 150ಕ್ಕೂ ಹೆಚ್ಚು ಕೆರೆಗಳು ಮತ್ತು ಕೊಳಗಳನ್ನು ಸ್ವಚ್ಛಗೊಳಿಸಿದ್ದಾರೆ. ಗಿಡಗಳ ನೆಡುವಿಕೆ, ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರ ಹೆಚ್ಚುಸುವಿಕೆ ಜಾಗತಿಕ ತಾಪಮಾನ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಡಾ.ಎಂ.ಎಸ್ ನಝೀರ್ ಸಾಹೇಬ್‌ರವರು.

LEAVE A REPLY

Please enter your comment!
Please enter your name here