ಪುತ್ತೂರು ಶಾಸಕರ ಸರಕಾರಿ ಆಪ್ತ ಸಹಾಯಕರಾಗಿ ತಾ.ಪಂ ಸಹಾಯಕ ಲೆಕ್ಕಾಧಿಕಾರಿ ಪ್ರದೀಪ್ ಕುಮಾರ್ ನೇಮಕ

0

ಶಾಸಕರ ಆಪ್ತ ಸಹಾಯಕ ಬಹು ಭಾಷಾ ನಿಪುಣ

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರ ಸರಕಾರಿ ಆಪ್ತ ಸಹಾಯಕರಾಗಿ ತಾ.ಪಂ ಸಹಾಯಕ ಲೆಕ್ಕಾಧಿಕಾರಿ ಪ್ರದೀಪ್ ಕುಮಾರ್ ಅವರು ನೇಮಕಗೊಂಡಿದ್ದಾರೆ. ಇವರು ಬಹು ಭಾಷಾ ನಿಪುಣರಾಗಿದ್ದಾರೆ.

ಶಾಸಕ ಅಶೋಕ್ ಕುಮಾರ್ ರೈ ಅವರು ಜು22 ರಂದು ಆದೇಶ ಪತ್ರ ಹಸ್ತಾಂತರಿಸಿದರು. ಸುಳ್ಯ ಪೈಚಾರಿನವರಾದ ಪ್ರದೀಪ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಅಕ್ಷರ ದಾಸೋಹ (ಪ್ರಧಾನ ಮಂತ್ರಿ ಪೋಷಣೆ ಶಕ್ತಿ ನಿರ್ಮಾಣ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಗಿ 2015 ಮೇ ನಲ್ಲಿ ನೇಮಕಗೊಂಡಿದ್ದರು. 2 ವರ್ಷ ಅಕ್ಷರ ದಾಸೋಹ ಕಚೇರಿಯ ಕರ್ತವ್ಯದ ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸಿದ್ದರು. 5 ವರ್ಷ ಅಕ್ಷರ ದಾಸೋಹ ಕಚೇರಿಯ ಪ್ರಥಮ ದರ್ಜೆ ಸಹಾಯಕರ ಹುದ್ದೆಯ ಜೊತೆಗೆ ತಾಲೂಕು ಪಂಚಾಯಿತಿನಲ್ಲಿ ವಿಷಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದಾರೆ. 2022-23 ನೇ ಸಾಲಿನಲ್ಲಿ ಅಕ್ಷರ ದಾಸೋಹ ಕಚೇರಿ ಹುದ್ದೆಯ ಜೊತೆಗೆ ವಿಷಯ ನಿರ್ವಾಹಕರ ಹುದ್ದೆಯ ಜೊತೆಗೆ ತಾಲೂಕು ಪಂಚಾಯತಿನ ಸಹಾಯಕ ಲೆಕ್ಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಇದೀಗ ಶಾಸಕರ ಆಪ್ತ ಸಹಾಯಕರಾಗಿದ್ದಾರೆ. ಪ್ರದೀಪ್ ಕುಮಾರ್ ಅವರು ಶಿಕ್ಷಕ ಶಿವಲಿಂಗಮ್ ಮತ್ತು. ದಿ.ಯಮುನಾ ದಂಪತಿ ಪುತ್ರ.

ಪ್ರದೀಪ್ ಕುಮಾರ್ ಅವರು 2017-18, 2018-19, 2022-23 ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಹಾಯಕ ಆಯುಕ್ತರ ಕಚೇರಿ ಪುತ್ತೂರು ಇಲ್ಲಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸಿದ್ದರು. 2022 ನೇ ಸಾಲಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘವು ನಡೆಸುವ ಕ್ರೀಡಾಕೂಟದಲ್ಲಿ ಭಾಗವಹಿಸಿ ಟೇಬಲ್ ಟೆನ್ನಿಸ್ ಆಟದಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಬಹು ಭಾಷ ನಿಪುಣ
ಶಾಸಕರ ಆಪ್ತ ಸಹಾಯಕ ಪ್ರದೀಪ್ ಕುಮಾರ್ ಅವರು ಬಹು ಭಾಷ ನಿಪುಣರಾಗಿದ್ದಾರೆ. ಇವರಿಗೆ ತಮಿಳು, ತೆಲುಗು, ಮಳಿಯಾಳ, ಹಿಂದಿ, ಇಂಗ್ಲಿಷ್, ಕನ್ನಡ, ತುಳು ಎಳು ಭಾಷೆ ತಿಳಿದಿದೆ.

LEAVE A REPLY

Please enter your comment!
Please enter your name here