ಪುತ್ತೂರು: ತೀಯಾ ಸಮಾಜ ಸೇವಾ ಸಮಿತಿಯ ವತಿಯಿಂದ ಆಟಿಡೊಂಜಿ ದಿನ ಗಮ್ಮತ್ತ್ದ ಒಟ್ಟು ಸೇರಿಗೆ ಕಾರ್ಯಕ್ರಮವು ರೋಟರಿ ಮನಿಷಾ ಸಭಾಭವನದಲ್ಲಿ ಜು.23ರಂದು ಜರಗಿತು.
ಕಾರ್ಯಕ್ರಮವನ್ನು ಗೌರವಾಧ್ಯಕ್ಷ ನಾರಾಯಣ ಸಾಲ್ಮರ ದೀಪ ಪ್ರಜ್ವಲನೆ ಮಾಡುವುದರೊಂದಿಗೆ ಹಾಗೂ ಹಿರಿಯರಾದ ತಾರ ಮತ್ತು ಪದ್ಮಿನಿಯವರು ಚನ್ನೆಮನೆ ಆಟ ಆಡುವುದರೊಂದಿಗೆ ಉದ್ಘಾಟಿಸಿದರು.
ಲೋಕೇಶ್ ಬೆಳ್ಳಿಗೆ ಆಟಿಯ ಮಹತ್ವದ ಕುರಿತು ಮಾಹಿತಿ ನೀಡಿದರು. ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಸಂಧ್ಯಾ ರಾಜೇಶ್, ಕೋಶಾಧಿಕಾರಿ ಬಿ.ಎಂ. ಶ್ರೀಧರ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ವಿಶಿಷ್ಟವಾದ ಕೆಲವೊಂದು ಆಟೊಟ ಸ್ಪರ್ಧೆಗಳನ್ನು ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಸಂತೋಷ್ ಮುಕ್ರಂಪಾಡಿ ಸ್ವಾಗತಿಸಿ,ಪ್ರಭಾವತಿ ರಾಜೀವ್ ವಂದಿಸಿದರು. ಮಲ್ಲಿಕಾ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು. ಸುವರ್ಣ ಚಂದ್ರಿಕಾ ಮತ್ತು ಆಶಾಮನು ಪಂಜ ರವರು ಸಹಕರಿಸಿದರು. ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ಮಾಜಿ ಗೌರವಾಧ್ಯಕ್ಷ ಯತೀಂದ್ರನಾಥ ಸಂಟ್ಯಾರು ಹಾಗೂ ಎಲ್ಲ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಟಿಯ ವಿಶಿಷ್ಟ ತಿಂಡಿ ತಿನಿಸುಗಳನ್ನು ಒಳಗೊಂಡಂತಹ ಸುವ್ಯವಸ್ಥಿತ ಭೋಜನ ವ್ಯವಸ್ಥೆ ನಡೆಯಿತು.