ಜು. 30: ಮಿತ್ತಡ್ಕದಲ್ಲಿ ‘ಏನೇಲ್’ ಕೆಸರ್‌ಡ್ ಒಂಜಿ‌ ದಿನ – ಪ್ರಪ್ರಥಮ ಬಾರಿಗೆ ಕೆಸರು ಗದ್ದೆ ಕ್ರೀಡಾಕೂಟ

0

ಬೆಟ್ಟಂಪಾಡಿ: ಕೇಸರಿ ಮಿತ್ರವೃಂದ ಕೇಸರಿನಗರ ಮಿತ್ತಡ್ಕ ಇದರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಕೆಸರುಗದ್ದೆ ಕ್ರೀಡಾಕೂಟ ಜು. 30 ರಂದು ಮಿತ್ತಡ್ಕ ಗುರಿಯಡ್ಕ ಶ್ರೀಮತಿ ಪುಷ್ಪಾವತಿ ಆರ್. ರವರ ಗದ್ದೆಯಲ್ಲಿ ಆಯೋಜಿಸಲಾಗಿದೆ.


ಕಬಡ್ಡಿ ಪಂದ್ಯಾಟ, ಹಗ್ಗಜಗ್ಗಾಟ ಕೂಟಗಳನ್ನು ನಡೆಸುತ್ತಿರುವ ಕೇಸರಿ ಮಿತ್ರವೃಂದ ಈ ಬಾರಿ ಕೆಸರು ಗದ್ದೆಯಲ್ಲಿ ಹೊಸ ಪ್ರಯೋಗಕ್ಕೆ ಇಳಿದಿದೆ. ಹಲವು ಮನರಂಜನಾತ್ಮಕ ಕ್ರೀಡೆಗಳು ಮತ್ತು ಮುಕ್ತ ಹಗ್ಗಜಗ್ಗಾಟ ಕ್ರೀಡಾಕೂಟದ ವಿಶೇಷ ಆಕರ್ಷಣೆಯಾಗಿರಲಿದೆ. ನಿವೃತ್ತ ಸಹಮುಖ್ಯಶಿಕ್ಷಕ ಗುಣಕರ ರೈ ತೋಟದಮೂಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿವಿಧ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


‘ಏನೇಲ್’ ವಿನೂತನ ಹೆಸರು
ಕೆಸರುಗದ್ದೆ ಕ್ರೀಡಾಕೂಟವು ಗ್ರಾಮೀಣ ಭತ್ತದ ಬೇಸಾಯಕ್ಕೆ ಉತ್ತೇಜನ, ಮತ್ತು ಬೇಸಾಯ ಪದ್ದತಿ ಸಂಪ್ರದಾಯವನ್ನು ಯುವಪೀಳಿಗೆಗೆ ನೆನಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ಹಾಗಾಗಿ ಕ್ರೀಡಾಕೂಟಕ್ಕೆ ಭತ್ತದ ಬೇಸಾಯದ ಕಾಲಕ್ರಮವಾದ ತುಳು ಭಾಷೆಯ ‘ಏನೇಲ್’ (ವರ್ಷದ ಮೊದಲ ಬೇಸಾಯ) ಎಂಬ ಹೆಸರನ್ನು ಇಡಲಾಗಿದೆ ಎಂದು ಮಿತ್ರವೃಂದದ ಅಧ್ಯಕ್ಷ ಎಂ.ಎಸ್. ಗಂಗಾಧರ್ ಹೇಳಿದರು.


ಎತ್ತು ಉಳುಮೆ
ಕ್ರೀಡಾಕೂಟದಲ್ಲಿ ಸಾಂಪ್ರದಾಯಿಕ ಉಳುಮೆ ಕ್ರಮವಾದ ಎತ್ತುಗಳ ಉಳುಮೆ ನಡೆಯಲಿರುವುದು ವಿಶೇಷತೆಯಾಗಿದೆ.

LEAVE A REPLY

Please enter your comment!
Please enter your name here