ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ರಥಬೀದಿಯಲ್ಲಿದ್ದ ಜಾನುವಾರೊಂದನ್ನು ಶಿಫ್ಟ್ ಕಾರೊಂದರಲ್ಲಿ ತುಂಬಿಸಿ ಕಳವುಗೈದಿರುವ ಘಟನೆ ಆ.6ರಂದು ತಡರಾತ್ರಿ ನಡೆದಿದೆ.
ರಾತ್ರಿ ಸುಮಾರು 12.45ರ ವೇಳೆಗೆ ಶಿಫ್ಟ್ ಕಾರಿನಲ್ಲಿ ಬಂದವರು ರಥಬೀದಿಯಲ್ಲಿದ್ದ ಜಾನುವಾರೊಂದನ್ನು ಕಾರಿಗೆ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಮನೆಯವರು ಬೀಟ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ರಾತ್ರಿಯೇ ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.