ಕೆದಿಲ ಪಂಚಾಯತ್‌ ಮೂವರು ಬಿಜೆಪಿ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆ

0

ಪುತ್ತೂರು:ಕೆದಿಲ ಪಂಚಾಯತ್‌ ನ ಮೂವರು ಬಿಜೆಪಿ ಸದಸ್ಯರು ಕಾಂಗ್ರೆಸ್‌ ಮುಖಂಡ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ ರವರ ಮನೆಯಲ್ಲಿ ಆ.9ರಂದು ಬೆಳಿಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

ಕೆದಿಲ ಪಂಚಾಯತ್‌ ಬಿಜೆಪಿ ಸದಸ್ಯರಾದ ಹರೀಶ್‌, ಶ್ಯಾಮಲ ಮತ್ತು ದೇವಕಿ ಎಂಬವರು ಕಾಂಗ್ರೆಸ್‌ ಗೆ ಸೇರ್ಪಡೆಗೊಂಡವರು. ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರು ಮೂರು ಮಂದಿ ಬಿಜೆಪಿ ಸದಸ್ಯರನ್ನು ಪಕ್ಷದ ಧ್ವಜ ನೀಡಿ, ಕಾಂಗ್ರೆಸ್‌ ಶಾಲು ಹಾಕಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು.

ಬಳಿಕ ಮಾತನಾಡಿದ ಶಾಸಕರು ಕೆದಿಲ ಪಂಚಾಯತ್‌ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಅಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಸಲು ಸಂಪೂರ್ಣ ಸಹಕಾರ ನೀಡಲಾಗುವುದು. ಕಾಂಗ್ರೆಸ್‌ ಪಕ್ಷವನ್ನು ಮೆಚ್ಚಿ ಬಂದ ಸದಸ್ಯರು , ಜನರ ಅಭಿವೃದ್ದಿ ಕಡೆಗೆ ಸಹಕರಿಸುವಂತೆ ಕರೆ ನೀಡಿದರು.

ಕಾಂಗ್ರೆಸ್‌ ಸೇರ್ಪಡೆಗೊಂಡ ಹರೀಶ್‌ ಮಾತನಾಡಿ ಶಾಸಕರ ಕಾರ್ಯಕ್ರಮಗಳು, ಕಾಂಗ್ರೆಸ್‌ ಪಕ್ಷದ ಅಭಿವೃದ್ದಿಗಳನ್ನು ಮೆಚ್ಚಿ ನಾನು ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಲ್ಲರ ಸಹಕಾರವಿರಲಿ ಎಂದರು.

ಪಂಜಿಗುಡ್ಡೆ ಈಶ್ವರ ಭಟ್‌ ಮಾತನಾಡಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡ ಸದಸ್ಯರುಗಳು ನನ್ನ ಜೊತೆಗೆ ಹಾಗು ಕಾಂಗ್ರೆಸ್‌ ನಾಯಕರುಗಳ ಜೊತೆಗೆ ಉತ್ತಮ ಭಾಂಧವ್ಯವನ್ನು ಹೊಂದಿದ್ದು, ಶಾಸಕರ ಧೈಯವನ್ನು ಮೆಚ್ಚಿ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ ಅವರಿಗೆ ಒಳಿತಾಗಲಿ ಎಂದರು.

ವಿಟ್ಲ ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ.ರಾಜಾರಾಮ್‌ ಕೆ ಬಿ ಮಾತನಾಡಿ ಕಾಂಗ್ರೆಸ್‌ ಸೇರ್ಪಡೆಗೊಂಡ ಸದಸ್ಯರನ್ನು ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್‌ ನ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಾತನಾಡಿ ಕೆದಿಲ ಪಂಚಾಯತ್‌ ನ ಈ ಮೂರು ಮಂದಿ ಬಿಜೆಪಿ ಸದಸ್ಯರು ಸೇರ್ಪಡೆಗೊಳ್ಳಲು ಕಳೆದ ಹಲವಾರು ದಿನಗಳಿಂದ ನನ್ನ ಜೊತೆಗೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಾಂಗ್ರೆಸ್‌ ಮುಖಂಡ ಪಂಜಿಗುಡ್ಡೆ ಈಶ್ವರ ಭಟ್‌, ಉಮೇಶ್‌ ಶೆಟ್ಟಿ ಪೆರ್ನೆ ಮತ್ತೀತರ ನಾಯಕರುಗಳು ನೇತೃತ್ವ ವಹಿಸಿದ್ದರು ಎಂದರು.

ಈ ಸಂದರ್ಭದಲ್ಲಿ ಕೆದಿಲ ಪಂಚಾಯತ್‌ ನ ಮಾಜಿ ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಸದಸ್ಯರಾದ ಹಬೀಬ್‌ ಮೋಹಿಷಿನ್‌,ಉನೈಸ್‌,ಪಿ ಯೂಸುಫ್‌, ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಎಮ್‌ ಎಸ್‌ ಮಹಮ್ಮದ್‌,ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಚಂದ್ರ ಆಳ್ವಾ, ಉಮನಾಥ ಶೆಟ್ಟಿ ಪೆರ್ನೆ, ಶಿವರಾಮ ಆಳ್ವ ಕುರಿಯ,ಜೋಡುಕರೆ ಕಂಬಳದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ರೋಶನ್‌ ರೈ ಬನ್ನೂರು, ಆಸಿಫ್‌ ಕೆದಿಲ, ಅಬ್ದುಲ್ಲಾ ಕುಂಙ ಕೆದಿಲ, ಅಬ್ದುಲ್ಲಾ ಕೆದಿಲ, ಹಬೀಬ್‌ ಬಾಯಬೆ, ಶರೀಫ್ ಬಲ್ನಾಡ್‌, ನಗರಸಭಾ ಸದಸ್ಯ ಮೊಹಮ್ಮದ್‌ ರಿಯಾಝ್‌, ನ್ಯಾಯವಾದಿ ಸುಲೈಮಾನ್‌ ಕೆದಿಲ, ಲೊಕೇಶ್‌ ಗೌಡ, ಪ್ರಸನ್ನ ಭಟ್‌, ನಾರಾಯಣ ಕುಲಾಲ್‌, ರೋಹನ್‌, ಶೀನಪ್ಪ ಪೂಜಾರಿ, ರೂಪೇಶ್‌ ರೈ ಆಲಿಮಾರ್‌ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here