





ಪುತ್ತೂರು: ಪುತ್ತೂರು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾರವರು ಪ್ರಾಮಾಣಿಕ ಹಾಗೂ ನಿಷ್ಠಾವಂತ ಅಧಿಕಾರಿಯಾಗಿದ್ದಾರೆ ಎಂದು ಪುತ್ತೂರು ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಸಂಘದ ಪರವಾಗಿ ಸಂಘದ ಅಧ್ಯಕ್ಷೆ ಕಮಲ ಹಾಗೂ ಪದಾಧಿಕಾರಿಗಳು ಹೇಳಿದ್ದಾರೆ.
ಶ್ರೀಲತಾರವರು ಇಲಾಖೆಯಿಂದ ದೊರೆಯುವ ಸೌಲಭ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಾವುದೇ ಜಾತಿ, ಮತ, ಭೇದ, ಭಾವವಿಲ್ಲದೆ ನೀಡುವಂತೆ ನಮಗೆ ಮಾರ್ಗದರ್ಶನ ನೀಡುತ್ತಾರೆ. ಕಳೆದ ಮೂರು ವರ್ಷಗಳಿಂದ ನಮಗೆ ಗೌರವಧನ ಸರಿಯಾಗಿ ಪಾವತಿ ಆಗುತ್ತಿದೆ. ಇಲಾಖೆಯಿಂದ ನೀಡುತ್ತಿರುವ ಪೂರಕ ಪೌಷ್ಟಿಕ ಆಹಾರ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಇವರಿಗೆ ಸುದ್ದಿ ಪತ್ರಿಕೆ ನಡೆಸಿದ ಉತ್ತಮ ಅಧಿಕಾರಿ ಪ್ರಶಸ್ತಿಗೆ ಸಾರ್ವಜನಿಕರ ಅಭಿಪ್ರಾಯದಂತೆ ಉತ್ತಮ ಅಧಿಕಾರಿ ಎಂದು ಹೆಗ್ಗಳಿಕೆ ಕೂಡ ಬಂದಿದೆ. ಶಾಸಕರು ನಮ್ಮ ಅಧಿಕಾರಿಯ ವಿರುದ್ಧ ಆರೋಪ ಮಾಡಿರುವುದು ನಮ್ಮ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









