ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ ಆಚರಣೆ

0

ಪುತ್ತೂರು: ನೆಟ್ಟಣಿಗೆ ಮುಡ್ನೂರು ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ಶಾಲಾ ಪೋಷಕರು ಮತ್ತು ದಾನಿಗಳ ನೆರವಿನಿಂದ ಶಾಲಾ ಆವರಣದಲ್ಲಿ ತೆಂಗಿನ ಸಸಿ ಮತ್ತು ಇನ್ನಿತರ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಕರ್ನೂರು ಗುತ್ತು ಶ್ರೀರಾಂ ಪಕ್ಕಳ, ಕಾಡು ನಾಶವಾಗುತ್ತಿರುವ ಈ ಪರ್ವ ಕಾಲದಲ್ಲಿ ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಸುತ್ತಮುತ್ತ ಪ್ರತೀ ವರ್ಷ ಗಿಡಗಳನ್ನು ನೆಡುವುದರ ಮುಖಾಂತರ ನಾಶವಾಗುತ್ತಿರುವ ಪ್ರಕೃತಿಯನ್ನು ಉಳಿಸಿ ಸುಂದರವಾಗಿಸಲು ಪ್ರಯತ್ನಿಸಬೇಕಿದೆ ಎಂದು ಹೇಳಿದರು. ಶಾಲಾ ಮುಖ್ಯಗುರುಗಳಾದ ಪ್ರೇಮ್‌ ಕುಮಾರ್‌ ವನಮಹೋತ್ಸವ ಔಚಿತ್ಯದ ಬಗ್ಗೆ ತಿಳಿಯ ಪಡಿಸಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ಸೂಫಿ ಬಾಂಟಡ್ಕ, ಮಹಮ್ಮದ್‌ ಪಳ್ಳತ್ತೂರು, ಸದಾಶಿವ ರೈ ನಡುಬೈಲು, ಶಶಿಕಲಾ ಅಡ್ಡನತ್ತಡ್ಕ, ದೇವಕಿ ಗುತ್ತು, ಝುಬೈದಾ ಪಳ್ಳತ್ತೂರು ಉಪಸ್ಥಿತರಿದ್ದರು. ಶಿಕ್ಷಕರಾದ ದೇವಿ ಪ್ರಕಾಶ್ ಶೆಟ್ಟಿ ‌, ಉದಯ, ಇಂದಿರಾ, ಯಶೋಧ, ದಮಯಂತಿ ಸಹಕರಿಸಿದರು.

LEAVE A REPLY

Please enter your comment!
Please enter your name here