





ಕಾಣಿಯೂರು: ಕಾಣಿಯೂರು ಗ್ರಾಮದ ಬಂಡಾಜೆ ಅಂಗನವಾಡಿ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕಾಣಿಯೂರು ಗ್ರಾ. ಪಂ ಸದಸ್ಯ ರಾಮಣ್ಣ ಗೌಡ ಮುಗರಂಜ ಧ್ವಜಾರೋಹಣ ನೆರವೇರಿಸಿದರು. ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸವಿತಾ ತಾರನಾಥ ನಾವೂರು ಉಪಸ್ಥಿತರಿದ್ದರು. ಕಾರ್ಯಕರ್ತೆ ಸುಮಿತ್ರಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಬಂಡಾಜೆ ವಂದಿಸಿದರು. ಸಹಾಯಕಿ ಸಹಕರಿಸಿದರು.












