





ಸವಣೂರು; ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಮಾಂತೂರು ಅಂಬೇಡ್ಕರ್ ಭವನದ ಬಳಿ ನಡೆಯಿತು. ಸವಣೂರು ಗ್ರಾಮ ಸಮಿತಿ ಉಪಾಧ್ಯಕ್ಷ ಎಸ್ ಹಂಝ ಸರ್ವೆ ಅಧ್ಯಕ್ಷತೆ ವಹಿಸಿದ್ದರು.



ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ ಧ್ವಜಾರೋಹಣ ಗೈದರು. ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಫೀಕ್ ಎಂ.ಎ. ಸಂದೇಶ ಭಾಷಣ ನೀಡಿದರು.





ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಚಾಪಲ್ಲ ಅಧ್ಯಕ್ಷ ಝಕರಿಯಾ ಮಾಂತೂರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು, ಅತಿಥಿಗಳಾಗಿ ಬದ್ರಿಯಾ ಜುಮಾ ಮಸ್ಜಿದ್ ಚಾಪಲ್ಲ ಅಧ್ಯಕ್ಷ ಉಮ್ಮರ್ ಹಾಜೀ ಕೆನರಾ, ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಬಾಬು ಎನ್., ಸವಣೂರು,ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಚೆನ್ನು, ಪಣೆಮಜಲು ಮಸೀದಿ ಆಡಳಿತ ಸಮಿತಿ ಸದಸ್ಯರುಗಳಾದ ಯೂಸುಫ್ ಹಾಜಿ ಬೇರಿಕೆ ಹಾಗೂ ಸುಲೈಮಾನ್ ಪಲ್ಲತ್ತಮೂಲೆ ಸೇರಿದಂತೆ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ಪ್ರದಾನ ಕಾರ್ಯದರ್ಶಿ ರಫೀಕ್. ಪಿ ಸ್ವಾಗತಿಸಿ ಕೋಶಾಧಿಕಾರಿ ಅಶ್ರಫ್ ಊರುಸಾಗ್ ವಂದಿಸಿದರು.






