ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ನಿವೃತ ಸೈನಿಕ ಸೇಸಪ್ಪ ಗೌಡರವರು ಧ್ವಜಾರೋಹಣಗೈದು ಮಾತನಾಡಿ, ಶ್ರದ್ದೆ, ಪ್ರೀತಿ ಇಟ್ಟು ಕೆಲಸ ಮಾಡಿದ್ದಲ್ಲಿ ಯಶಸ್ಸು ಲಭಿಸುತ್ತದೆ. ಸೈನ್ಯಕ್ಕೆ ಸೇರಿ ತಾಯಿ ಭಾರತಾಂಬೆಯ ಸೇವೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತಾನು ಕಾರ್ಗಿಲ್ ಯುದ್ದಕ್ಕೆ ಹೋಗಿ ಭಾರತಾಂಭೆಯ ಸೇವೆ ಮಾಡಿ ಕೀರ್ತಿ ಪತಾಕೆಯನ್ನು ಹಾರಿಸಿದ ಸಂಭ್ರಮದ ಅನುಭವನ್ನು ವಿದ್ಯಾರ್ಥಿಗಳೊಂದಿಗೆ ಅವರು ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ. ಸೇಸಪ್ಪ ರೈಯವರು ಮಾತನಾಡಿ, ನಮ್ಮಲ್ಲಿ ಶಕ್ತಿ ಇದೆ, ಆತ್ಮವಿಶ್ವಾಸ ಹೃದಯವಂತಿಕೆ ಬೆಳಗಬೇಕು ಎಲ್ಲರೂ ನಮ್ಮವರೇ ಎನ್ನುವ ಭಾವ ನಮ್ಮಲ್ಲಿದ್ದರೆ ಸ್ವಾತಂತ್ರ್ಯೋತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ. ನಾವು ಯಾವತ್ತು ಒಗ್ಗಾಟ್ಟಾಗುತ್ತೇವೆ ಎಂಬ ಭಾವ ಹೃದಯದಲ್ಲಿ ಇದ್ದರೆ ದೇಶದ ಏಕತೆಯನ್ನು ಸಾಧಿಸುತ್ತೇವೆ ಎಂಬ ಶಪಥ ಮಾಡಬೇಕು. ನಮ್ಮ ದೇಶದ ಮಾನವ ಸಂಪತ್ತು ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಸದೃಢಗೊಂಡು ಭಾರತವನ್ನು ವಿಶ್ವಗುರುವಾಗಿ ವಿಜೃಂಭಿಸಲು ವಿಧ್ಯಾರ್ಥಿಗಳ ಪಾತ್ರ ಮಹತ್ವವಾದುದು ಎಂದು ನುಡಿದರು.
ಶಿಕ್ಷಕ ರಕ್ಷಕ ಸಂಘದ ಜೊತೆ ಕಾರ್ಯದರ್ಶಿ ಮೀನಾಕ್ಷಿ, ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ., ತಾಂತ್ರಿಕ ಸಲಹೆಗಾರ ಜಯೇಂದ್ರ ಬಿ., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ ಸೈನಿಕ ಸೇಸಪ್ಪ ಗೌಡ ದಂಪತಿಯನ್ನು ಗೌರವಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ರಾಷ್ಟ್ರಭಕ್ತಿ ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್ ಸ್ವಾಗತಿಸಿದರು. ಸಹಶಿಕ್ಷಕಿಯ ಸುನಂದ, ನವ್ಯ ಕಾರ್ಯಕ್ರಮ ನಿರೂಪಿಸಿದರು. ಶುಭರಾಣಿ ವಂದಿಸಿದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಲಾಯಿತು.