ರೂ.3,82,533.60 ಲಾಭ, ಶೇ.25 ಡೆವಿಡೆಂಡ್, 0.76 ಪೈಸೆ ಬೋನಸ್
ಪುತ್ತೂರು: ಕರ್ಕುಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ನಡೆಯಿತು. ದ.ಕ.ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಮಾಳತಿ ಪಿ. ಮಾತನಾಡಿ ಹಾಲಿನ ಉತ್ಪಾದನೆ ಹೆಚ್ಚು ಮಾಡಿ. ಈ ಸಂಘವು ಪ್ರಗತಿಯ ಹಂತದಲ್ಲಿದೆ. ಒಕ್ಕೂಟದಿಂದ ಸಿಗುವ ಪ್ರಯೋಜನಗಳನ್ನು ಸದಸ್ಯರು ಪಡೆದುಕೊಳ್ಳಿ ಎಂದು ಹೇಳಿದರು.
ಸಂಘದ ಅಧ್ಯಕ್ಷೆ ಸರೋಜಿನಿ ಕೆ.ಎಸ್. ಮಾತನಾಡಿ, ಸಂಘವು ಕಳೆದ ಸಾಲಿನಲ್ಲಿ ರೂ.3,82,533.60 ಪೈಸೆ ಲಾಭಾಂಶ ಪಡೆದುಕೊಂಡಿದೆ. ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡಲಾಗುವುದು. ಸದಸ್ಯರಿಗೆ ಪ್ರತೀ ಲೀ.ಗೆ 0.76 ಪೈಸೆ ಬೋನಸ್ ನೀಡಲಾಗುವುದು. ಸದಸ್ಯರು ಸಂಘಕ್ಕೆ ಗುಣಮಟ್ಟದ ಹಾಲಿನ ಪೂರೈಕೆ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಿ. ನಮ್ಮ ಸಂಘವು 2022-23ನೇ ಸಾಲಿನ ಉತ್ತಮ ಸಾಧನೆಗೆ ಎಸ್ಸಿಡಿಸಿಸಿ ಬ್ಯಾಂಕ್ನ ಪ್ರಶಸ್ತಿಗೆ ಆಯ್ಕೆ ಆಗಿದೆ ಎಂದು ಹೇಳಿದರು. ಸಂಘದ ಉಪಾಧ್ಯಕ್ಷೆ ಗೀತಾ ಜೆ.ಎಸ್., ನಿರ್ದೇಶಕರಾದ ರಾಜೀವಿ, ಪುಷ್ಪಾವತಿ, ಶಶಿಕಲಾ, ಜಯಶ್ರೀ, ಸರಸ್ವತಿ, ಕಮಲಾಕ್ಷಿ, ದಮಯಂತಿ, ಪೂರ್ಣಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕಿಯರಾದ ನಿರ್ದೇಶಕಿ ಜಯಂತಿ ಎಸ್. ಸ್ವಾಗತಿಸಿ ನಿರ್ದೇಶಕಿ ಶೋಭಾ ವಂದಿಸಿದರು. ಕಾರ್ಯದರ್ಶಿ ಕೆ.ನಳಿನಾಕ್ಷಿ, ಹಾಲು ಪರೀಕ್ಷಕಿ ನಳಿನಿ ಸಹಕರಿಸಿದರು.