ಕುದ್ಮಾರಿನಲ್ಲಿ ಬಾರ್ ಎಂಡ್ ರೆಸ್ಟೊರೆಂಟ್ ತೆರೆಯುವುದಕ್ಕೆ ಅವಕಾಶ ಮಾಡಿಕೊಡಬೇಡಿ -ಕಡಬ ತಾಲೂಕು ಜನಜಾಗೃತಿ ವೇದಿಕೆಯಿಂದ ಬೆಳಂದೂರು ಗ್ರಾ.ಪಂ.ಗೆ ಮನವಿ

0

ಕಾಣಿಯೂರು: ಬೆಳಂದೂರು ಗ್ರಾ. ಪಂ ಗೆ ಒಳಪಡುವ ಕುದ್ಮಾರು ಗ್ರಾಮದ ಕುದ್ಮಾರು ಶಾಲಾ ಸಮೀಪ ತೆರೆಯಲು ಉದ್ದೇಶಿಸಿರುವ ಬಾರ್ ಎಂಡ್ ರೆಸ್ಟೊರೆಂಟ್‌ಗೆ ಆಕ್ಷೇಪ ವ್ಯಕ್ತಪಡಿಸಿ, ಬಾರ್ ತೆರೆಯಲು ಪರವಾನಿಗೆ ನೀಡಬಾರದು ಎಂದು ಕಡಬ ತಾಲೂಕು ಜನಜಾಗೃತಿ ವೇದಿಕೆ ವತಿಯಿಂದ ಬೆಳಂದೂರು ಗ್ರಾಮ ಪಂಚಾಯತ್ ಗೆ ಆ 28ರಂದು ಮನವಿ ಮಾಡಲಾಗಿದೆ.

ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ, ಅಭಿವೃದ್ಧಿ ಅಧಿಕಾರಿ ನಾರಾಯಣ್ ಅವರು ಮನವಿ ಸ್ವೀಕರಿಸಿದರು.
ಕುದ್ಮಾರು ಸ.ಉ.ಹಿ.ಪ್ರಾ.ಶಾಲಾ ಸಮೀಪದಲ್ಲಿಯೇ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಖಾಲಿ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ಕಟ್ಟಡದಲ್ಲಿ ಬಾರ್ ಎಂಡ್ ರೆಸ್ಟೊರೆಂಟ್ ತೆರೆಯುವುದಕ್ಕೆ ಉದ್ದೇಶಿಸಿಲಾಗಿದೆ ಎಂಬ ಮಾಹಿತಿಯು ಲಭ್ಯವಾಗಿದ್ದು, ಕಟ್ಟಡದ ಎದುರಿನಲ್ಲಿಯೇ ಶಾಲೆಯಿದ್ದು, ಬಾರ್ ತೆರೆದರೆ
ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ, ಮಾನಸಿಕ ಮತ್ತು ಸಾಮಾಜಿಕ ಭಾವನೆಗಳಿಗೆ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಯಾವುದೇ ಬಾರ್ ತೆರೆಯಲು ಪರವಾನಿಗೆ ನೀಡಬಾರದೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕೆ ಸವಣೂರು, ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು, ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು,ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಸವಣೂರು ವಲಯದ ಮಾಜಿ ಅಧ್ಯಕ್ಷ ವೇಣುಗೋಪಾಲ್ ಕಳುವಾಜೆ, ಬೆಳಂದೂರು ಒಕ್ಕೂಟದ ಅಧ್ಯಕ್ಷ ಶೇಸಪ್ಪ ಅಬೀರ,ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳಾದ ಚಂದ್ರಶೇಖರ್ ಬರೆಪ್ಪಾಡಿ, ಲೋಕನಾಥ್ ವಜ್ರಗಿರಿ, ಕಾಣಿಯೂರು ಗ್ರಾ.ಪಂ ಸದಸ್ಯ ವಸಂತ ಪೆರ್ಲೋಡಿ, ಕಾಣಿಯೂರು ಶಾಲಾ ಎಸ್.ಡಿ. ಎಂ. ಸಿ ಅಧ್ಯಕ್ಷ ಪರಮೇಶ್ವರ ಅನಿಲ, ಭರತ್ ಕುಮಾರ್, ಶಿವರಾಮ ಗೌಡ, ರಿತೇಶ್, ಕೇಶವ ಮರಕ್ಕಡ ಮತ್ತಿತರರು ಮನವಿ ಸಲ್ಲಿಕೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕುದ್ಮಾರು ಪರಿಸರದಲ್ಲಿ ಮೂರು ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲಿದೆ ಎಂಬ ಮಾಹಿತಿಗಳು ಕೇಳಿಬರುತ್ತಿದ್ದು, ಒಂದು ವೇಳೆ ಬಾರ್ ತೆರೆದುಕೊಂಡಲ್ಲಿ ಪ್ರತಿ ಮನೆಯಲ್ಲಿಲ್ಲೂ ಅಶಾಂತಿ ಉಂಟಾಗುವುದಲ್ಲದೆ, ಅದೆಷ್ಟೋ ಯುವಕ, ಯುವತಿಯರು ದುಶ್ಚಟಕ್ಕೆ ಬಲಿಯಾಗುತ್ತಾರೆ. ಈ ನಿಟ್ಟಿನಲ್ಲಿ ಬಾರ್ ತೆರೆಯಲು ಪರವಾನಿಗೆ ನೀಡಬಾರದು.
ಮಹೇಶ್ ಕೆ ಸವಣೂರು
ಅಧ್ಯಕ್ಷರು, ಜನಜಾಗೃತಿ ವೇದಿಕೆ ಕಡಬ ತಾಲೂಕು

LEAVE A REPLY

Please enter your comment!
Please enter your name here