ಸರಕಾರಿ ಶಾಲೆಗಳಲ್ಲಿ ಕೊರತೆಗಳನ್ನು ನೀಗಿಸುವ ಕೆಲಸವನ್ನು ಸರಕಾರ ಮಾಡಲಿದೆ: ಅಶೋಕ್ ರೈ
ಪುತ್ತೂರು: ಪಾಪೆಮಜಲು ಹಿ ಪ್ರಾ ಶಾಲೆ ವಿವೇಕ ತರಗತಿ ಉದ್ಘಾಟನಾ ಕಾರ್ಯಕ್ರಮ ಆ.30ರಂದು ನಡೆಯಿತು. ಪುತ್ತೂರು ತಾಲೂಕು ಶಾಸಕ ಅಶೋಕ್ ಕುಮಾರ್ ರೈ ವಿವೇಕ ತರಗತಿ ಮತ್ತು ಶಾಲಾ ಕೈತೊಳೆಯುವ ಘಟಕವನ್ನು ಉದ್ಘಾಟಿಸಿ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಗುಣ ಮಟ್ಟದ ಶಿಕ್ಷಣ ದೊರಕಬೇಕು. ಶಿಕ್ಷಕರ ನೇಮಕಾತಿ, ಕೆ.ಪಿ.ಎಸ್ ಶಾಲೆಗಳು ಮತ್ತು ವಿಷಯವಾರು ತರಬೇತಿಗಳು ನಡೆಯಬೇಕು ಎಂದರು.
ಬೀಳ್ಕೊಡುಗೆ ಸಮಾರಂಭ: ಶಾಲೆಯಲ್ಲಿ 16 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕಿಗೆ ವರ್ಗಾವಣೆಗೊಂಡ ಉಮಾ ನಾಯ್ಕ್ ರವರನ್ನು ಬೀಳ್ಕೊಡಲಾಯಿತು. ಕಟ್ಟಡ ನಿರ್ಮಾಣ ಮಾಡಿದ ಆಶಿಕ್‌ಯುದ್ದೀನ್, ದಾನಿಗಳಾದ ದಿನೇಶ್‌ದ, ಹೆರಾಲ್ಡ್ ಮಾಡ್ತ, ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಪಾಪೆಮಜಲು ಪ್ರೌಢಶಾಲಾ ಕಾರ‍್ಯಧ್ಯಕ್ಷ ಇಕ್ಬಾಲ್ ಹುಸೇನ್, ಅಕ್ಷರದಾಸೋಹ ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.


ಬಡವಿದ್ಯಾರ್ಥಿಗಳೂ ಇಂಗ್ಲೀಷ್ ಮಾತನಾಡಬೇಕು
ನಿಮ್ಮ ಮಕ್ಕಳು ಇಂಗ್ಲೀಷ್‌ನಲ್ಲಿ ಮಾತನಾಡುವುದನ್ನು ಕಲಿಯಬೇಕು, ಕನ್ನಡದ ಜೊತೆಗೆ ಇಂಗ್ಲೀಷ್‌ಗೂ ಹೆಚ್ಚಿನ ಒತ್ತು ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಕಷ್ಟವಿದೆ. ಈಗಾಗಲೇ ಒಟ್ಟು 13 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಲಾಗಿದೆ. ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ಮಕ್ಕಳಿಗೆ ನೀಡಬೇಕಾದ ಅವಶ್ಯಕತೆ ಇದೆ ಎಂದು ಶಾಸಕರು ಹೇಳಿದರು. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಲ್ಲಿ ಮುಂದೆ ಇದ್ದು ಅದಕ್ಕೆ ಇನ್ನಷ್ಟು ಪ್ರೋತ್ಸಾಹವನ್ನು ಕೊಡಬೇಕು ಎಂದು ಹೇಳಿದರು. ಕಷ್ಟ ಎಂದು ಯಾವುದನ್ನೂ ತಿರಸ್ಕಾರ ಮಾಡಬೇಡಿ, ಕಷ್ಟ ಎಲ್ಲೆಲ್ಲೂ ಇದೆ ಕಷ್ಟವಿಲ್ಲದೆ ಯಾವುದನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಮನವಿ: ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಕುಮಾರ್ ಶಾಲಾ ಸಭಾಭವನದ ನಿರ್ಮಾಣಕ್ಕೆ ಅನುದಾನ ಮತ್ತು ರೈ ಚಾರಿಟೇಬಲ್ ಟ್ರಸ್ಟ್ ನ ಕೌಡಿಚಾರ್ ಬಳಗದ ಸದಸ್ಯರಾದ ರಾಜೇಶ್ ಮತ್ತು ಜನಾರ್ಧನರವರು ಕೌಡಿಚಾರು ತಿರುವಿನಲ್ಲಿ ಸರ್ಕಲ್ ನಿರ್ಮಾಣಗೊಳ್ಳಬೇಕು ಎಂಬ ಮನವಿಯನ್ನು ಶಾಸಕರಿಗೆ ಸಲ್ಲಿಸಿದರು.
ಶಾಸಕರ ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ, ಉಪಾಧ್ಯಕ್ಷೆ ಮೀನಾಕ್ಷಿ ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್ ಆರ್, ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ವೇಗಸ್, ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ನವೀನ್, ದೈ,ಶಿ.ಶಿ ಸಂಘದ ಅಧ್ಯಕ್ಷ ಸೀತಾರಾಮ ಗೌಡ, , ಪಿಡಿಓ ಪದ್ಮಕುಮಾರಿ, ಮುಖ್ಯಗುರು ತೆರೇಜ್ ಎಂ. ಸಿಕ್ವೇರಾ, ಶಿಕ್ಷಕಿ ಉಮಾ ನಾಯ್ಕ್, ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್‌ಕುಮಾರ್, ಉಪಾಧ್ಯಕ್ಷೆ ವಿನೀತಾ, ಗ್ರಾಪಂ ಸದಸ್ಯರಾದ ಅನಿತಾ, ವಿನುತಾ, ನಾರಾಯಣ ನಾಯ್ಕ, ಭಾರತಿ, ಗ್ರಾಪಂ ಮಾಜಿ ಅಧ್ಯಕ್ಷೆ ಸೌಮ್ಯಾ, ಜಾರತ್ತಾರು ಹರೀಶ್ ರೈ, ಮಾಜಿ ಕಾರ್ಯಾಧ್ಯಕ್ಷ ಅಮ್ಮಣ್ಣ ರೈ ಮಾಜಿ ಕಾರ್ಯಾಧ್ಯಕ್ಷ ತಿಲಕ್ ರೈ ಕುತ್ಯಾಡಿ, ಕಾರ್ಯಾಧ್ಯಕ್ಷ ಇಕ್ವಾಲ್ ಹುಸೇನ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ತೆರೆಸಾ ಸಿಕ್ವೆರಾ ಸ್ವಾಗತಿಸಿದರು. ಪುಷ್ಪಲತಾ ನಿರೂಪಿಸಿದರು. ಮೇಬಲ್ ಡಿ’ಸೋಜ ವಂದಿಸಿದರು. ಜಯಲತಾ, ರಜನಿ ಕೆ.ಆರ್, ಕುಸುಮಾ ಸಹಕರಿಸಿದರು.