ಯೋಗ: ಫಿಲೋಮಿನಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ

0


ಪುತ್ತೂರು : ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ (ರಿ.) ವತಿಯಿಂದ ಮೈಸೂರಿನಲ್ಲಿ 27/8/2023 ರಂದು ನಡೆದ ‘ಮೈಸೂರು ಜಿಲ್ಲಾವಾರು ಯೋಗಾಸನ ಕ್ರೀಡಾ ಸ್ಪರ್ಧೆ 2023-24 ಇದರಲ್ಲಿ 14 ರಿಂದ 19ರ ವಯೋಮಿತಿಯ ಯೋಗಾಸನ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ನಿಖಿಲ್ ಬಿ. ಕೆ. ಇವರು ಟ್ರೆಡಿಶನಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಆರ್ಟಿಸ್ಟಿಕ್ಸ್ ಸಿಂಗಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಇವರು ನರಿಮೊಗರು ನಿವಾಸಿ ಬಾಲಚಂದ್ರ ಕೆ ಹಾಗೂ ಪ್ರಮೀಳ ಜಿ ದಂಪತಿಗಳ ಪುತ್ರನಾಗಿದ್ದು, ಬೆಳ್ಳಾರೆಯ ನವೀನ್ ಕುಮಾರ್ ತರಬೇತಿಯನ್ನು ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here