ಬೆಳ್ಳಾರೆ ಪೇಟೆಯಲ್ಲಿ ವಾಹನ ಸವಾರರಿಗೆ  ಕಂಟಕವಾಗಿದೆ ಆಡುಗಳ ಹಿಂಡು 

0

ಬೆಳ್ಳಾರೆ: ಬೆಳ್ಳಾರೆ ಪೇಟೆಯ ರಸ್ತೆಯಲ್ಲಿ ಆಡುಗಳ ಸಂಚಾರ ಹೆಚ್ಚಾಗಿದ್ದು ವಾಹನ ಸವಾರರಿಗೆ ಅಪಾಯಕಾರಿ ಸಮಸ್ಯೆ ಸೃಷ್ಟಿಯಾಗಿದೆ. ರಸ್ತೆಯಲ್ಲಿ ಓಡಾಡುವ ಆಡುಗಳಿಂದ ಬೈಕ್ ಸವಾರರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಕೂಡ ನಡೆದಿದೆ. ಸಾಕುಪ್ರಾಣಿಗಳನ್ನು ಬೀದಿಗೆ ಬಿಡುವುದು ಅಪರಾಧವಾಗಿದ್ದು, ಇತ್ತೀಚೆಗೆ ಮಡಿಕೇರಿಯಲ್ಲಿ ಸಾಕು ನಾಯಿಯೊಂದು ದಾಳಿ ನಡೆಸಿದಕ್ಕಾಗಿ ನಾಯಿಯ ಮಾಲಕನ ಮೇಲೆ ಕೇಸುದಾಖಲಾಗಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಆಡುಗಳನ್ನು ಬಿಡುವುದರಿಂದ ಅಂಗಡಿಯವರಿಗೂ ಸಮಸ್ಯೆಯಾಗುತ್ತಿದೆ. ಈ ಕುರಿತು ಸಾರ್ವಜನಿಕರು ಗ್ರಾ.ಪಂ.ಗೆ ಮನವಿ ನೀಡಿದ್ದು, ಸಮಸ್ಯೆ ಪರಿಹರಿಸುವಂತೆ ವಿನಂತಿಸಿದ್ದಾರೆ. ಪ್ರಾಣಾಪಾಯ ಸಂಭವಿಸುವ ಮೊದಲು ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಳ್ಳಬೇಕಿದೆ.

LEAVE A REPLY

Please enter your comment!
Please enter your name here