ಆಲಂಕಾರಿನಲ್ಲಿ ಶ್ರೀ ದುರ್ಗಾ ಡೋರ್ಸ್, ಪ್ಲೈವುಡ್, ಇಂಟಿರಿಯಲ್ ಡಿಸೈನ್ ಶುಭಾರಂಭ

0


ಆಲಂಕಾರು: ಆಲಂಕಾರು ಶ್ರೀ ದುರ್ಗಾ ಪ್ರಸಾದ್ ಕಾಂಪ್ಲೇಕ್ಸ್ ನಲ್ಲಿ ಶ್ರೀ ದುರ್ಗಾ ಡೋರ್ಸ್ , ಪ್ಲೈವುಡ್, ಇಂಟಿರಿಯಲ್ ಡಿಸೈನ್ ಸೆ.21 ರಂದು ಬೆಳಿಗ್ಗೆ ಶುಭಾರಂಭ ಗೊಂಡಿತು.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಕಣಿಯೂರು ಕನ್ಯಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮಿಜಿಗಳು ಆಶ್ರೀರ್ವಚನ ನೀಡಿ ಆಲಂಕಾರಿನಲ್ಲಿ ಆಲಂಕಾರಿಕವಾಗಿರುವ ಶ್ರೀ ದುರ್ಗಾಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ ಶ್ರೀ ದುರ್ಗಾ ಡೋರ್ಸ್, ಪ್ಲೈವುಡ್, ಇಂಟಿರಿಯಲ್ ಡಿಸೈನ್ ಪ್ರಾರಂಭಗೊಂಡಿದ್ದು ಬಹಳ ಸಂತಸದ ವಿಚಾರವಾಗಿದ್ದು ಅಭಿವೃದ್ಧಿ ಗೊಳ್ಳುತ್ತಿರುವ ಆಲಂಕಾರಿಕೆ ಪೂರಕವಾಗಿದೆ. ಹಿಂದೆ ಜನರು ತಮಗೆ ಬೇಕಾದ ವಸ್ತುಗಳನ್ನು ದೂರ ದೂರದ ಊರಿಗೆ ಹೋಗಿ ಖರೀದಿಸುತ್ತಿದ್ದರು ಈಗ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಜನರು ಹತ್ತಿರದಿಂದಲ್ಲೇ ವಸ್ತುಗಳ ಖರೀದಿಗೆ ಜನ ಸಂತೋಷ ಪಡುತ್ತಾರೆ. ವ್ಯಾಪಾರದಲ್ಲಿ ಶ್ರದ್ದೆ ಇರಬೇಕು ಹಾಗು ಗುಣ ಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ಮಿತದರದಲ್ಲಿ ನೀಡಿದಾಗ ಗ್ರಾಹಕರು ಸಂತೃಪಿಗೊಳ್ಳುತ್ತಾರೆ ಅಧುನಿಕತೆ ಬೆಳೆದಂತೆ ನಾವು ಕೂಡ ವ್ಯಾಪರದಲ್ಲಿ ಬದಲಾವಣೆಗಳನ್ನು ಕಾಣಬೇಕು, ವ್ಯಾಪಾರದಲ್ಲಿ ಯಾವತ್ತೂ ‌ಜಾತಿ, ಮತಗಳ ಭೇದಭಾವ, ರಾಜಕೀಯ ಮಾಡಬಾರದು ಹೆಚ್ಚು ಲಾಭ ಸಿಗುತ್ತದೆ ಆಂತಾ ಕಳಪೆ ಗುಣ ಮಟ್ಟದ ವಸ್ತುಗಳನ್ನು ಮಾಡಬಾರದು ಎಂದು ತಿಳಿಸಿ ಬರುವ ಮೊದಲ ವರ್ಷ ಸಂಭ್ರಮಚಾರಣೆಯಲ್ಲಿ ಇನ್ನೊಂದು ಶಾಖೆಯನ್ನು ಬೇರೆ ಕಡೆ ತೆರೆಯುವಂತಾಗಲಿ ಎಂದು ತಿಳಿಸಿ ಸಂಸ್ಥೆಗೆ ಶುಭಾಹಾರೈಸಿದರು.

ಪುತ್ತೂರು ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಉದ್ಘಾಟನೆಯನ್ನು ನೇರವೆರಿಸಿ ಮಾತನಾಡಿ, ಶ್ರೀ ದುರ್ಗಾ ಡೋರ್ಸ್, ಪ್ಲೈವುಡ್, ಇಂಟಿರಿಯಲ್ ಡಿಸೈನ್ ನ ಮಾಲಕರಾದ ನವೀನ್ ರವರು ತುಂಬಾ ವರ್ಷದ ಹಿಂದೆಯೆ ಅವರ ಪರಿಚಯ ನನಗಿದೆ. ನಮ್ಮ ಸಂಸ್ಥೆಯ ಆನೇಕ ಕೆಲಸ ಕಾರ್ಯಗಳನ್ನು ನವೀನ್ ರವರು ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದಾರೆ. ವ್ಯವಹಾರದಲ್ಲಿ ಪ್ರಾಮಾಣಿಕತೆ, ಸಮಯ ಪಾಲನೆ, ಲಾಭದ ದೃಷ್ಟಿ ನೋಡದೇ ಉತ್ತಮ ಗುಣಮಟ್ಟದ ವಸ್ತುಗಳನ್ನು ಜನರಿಗೆ ನೀಡುವ ಮೂಲಕ ಜನರ ಪ್ರೀತಿ, ವಿಶ್ವಾಸ ಗಳಿಸಬೇಕು ನಿಮ್ಮ ವ್ಯವಹಾರ ಇತರರಿಗೆ ಮಾದರಿಯಾಗಲಿ ನಿಮ್ಮ ಬೆನ್ನ ಹಿಂದೆ ಸದಾ ನಾನಿರುತ್ತೇನೆ ಎಂದು ತಿಳಿಸಿ ಶುಭಾಹಾರೈಸಿದರು.

ಅತೂರು ನೀರಾಜೆ ಮುದರಿಸ್ ಬಹು!ಆಶ್ರಫ್ ಮುಸ್ಲಿಯಾರ್ ಕೋಲ್ಪೆಯವರು ಮಾತನಾಡಿ ಒಬ್ಬ ಪ್ರಾಮಾಣಿಕ ವಾಗಿ ಕೆಲಸ ಮಾಡುವಾಗ ಆವರ ಬಗ್ಗೆ ಗುಣಗಾನ ಮಾಡುವವರ ಸಂಖ್ಯೆ ಬಹಳ ವಿರಳ. ಕಡಬದ ನಂತರ ವಾಣಿಜ್ಯವಾಗಿ ಬೆಳೆಯುತ್ತಿರುವ ಜಾಗವೆಂದರೆ ಅದು ಆಲಂಕಾರು.ಇಲ್ಲಿ ಎಲ್ಲಾರು ವ್ಯಾಪಾರ ಮಾಡುತ್ತಿದ್ದಾರೆ. ಕೊರೋನಾ ಸಂಧರ್ಭದಲ್ಲಿ ನನ್ನ ಸಹೋದರ ಧರ್ಮದ ಹಿಂದು ಬಾಂಧವರು ತುಂಬಾ ಸಹಾಯ ಮಾಡಿದ್ದಾರೆ. ನಾನು ಅದನ್ನು ಮೆರೆಯಲು ಸಾಧ್ಯವಿಲ್ಲ ಎಂದು ತಿಳಿಸಿ ಶ್ರೀ ದುರ್ಗಾ ಡೋರ್ಸ್, ಪ್ಲೈವುಡ್, ಇಂಟಿರಿಯಲ್ ಡಿಸೈನ್ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹೇಳಿ ಶುಭಾಹಾರೈಸಿದರು.

ಆಲಂಕಾರು ಗ್ರಾ.ಪಂ ಉಪಾಧ್ಯಕ್ಷ ರವಿ ಕುಂಞಲಡ್ಡ, ಆಲಂಕಾರು ಜೇಸಿಐ ಅಧ್ಯಕ್ಷ ಜೆ.ಸಿ ಹೆಚ್.ಜಿ.ಎಫ್ ಲಕ್ಷ್ಮಿನಾರಾಯಣ ಆಲೆಪ್ಪಾಡಿ ಸಂಧರ್ಬೋಚಿತವಾಗಿ ಮಾತನಾಡಿ ಶುಭಾಹಾರೈಸಿದರು. ಶ್ರೀ ದುರ್ಗಾ ಟವರ್ಸ್ ನ‌ ಮಾಲಕ ರಾಧಾಕೃಷ್ಣ ರೈ ಪರಾರಿಗುತ್ತು,‌ ಆಲಂಕಾರು ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ದಿನೇಶ್ ಕೇಪುಳು, ಶ್ರೀ ದುರ್ಗಾ ಕಾಂಪ್ಲೆಕ್ಸ್ ನ ಮಾಲಕ ನಾರ್ಣಪ್ಪ ಗೌಡ, ಕೋಟಿ ಚೆನ್ನಯ ಮಿತ್ರ ವೃಂದದ ಅಧ್ಯಕ್ಷ ಜಯಂತ್ ನೆಕ್ಕಿಲಾಡಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೇವಸ್ಥಾನ ಮಾಯಿಲ್ಗದ ಅಧ್ಯಕ್ಷರಾದ ಲಿಂಗಪ್ಪ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ದುರ್ಗಾ ಡೋರ್ಸ್, ಪ್ಲೈವುಡ್, ಇಂಟಿರಿಯಲ್ ಮಾಲಕರಾದ ನವೀನ್ ರವರು ಮಾತನಾಡಿ ಆಲಂಕಾರಿನಲ್ಲಿ ಮೊದಲು ವ್ಯವಹಾರವನ್ನು ಮಾಡುತ್ತಿದ್ದೆ ಆನಂತರ 8 ವರ್ಷಗಳ ಕಾಲ ನನ್ನ ಸಿಬ್ಬಂದಿಯರೊಂದಿಗೆ ಹೊರಗಡೆ ಕೆಲಸ ಕಾರ್ಯವನ್ನು ನಿರ್ವಹಿಸುತ್ತಿದೆ ಇದೀಗ ಎಲ್ಲಾರ ಪ್ರೀತಿ ವಿಶ್ವಾಸ ದಿಂದ ಆಲಂಕಾರಿನಲ್ಲಿ ಮತ್ತೆ ಉದ್ಯಮವನ್ನು ಪ್ರಾರಂಭಿಸಿದ್ದೇನೆ. ನನ್ನ ಏಳಿಗೆಗೆ ನನ್ನ ಸಿಬ್ಬಂದಿಗಳೇ ಕಾರಣ ಎಂದು ತಿಳಿಸಿ ನಮ್ಮಲ್ಲಿ ಪ್ಲೈವುಡ್, ಸ್ಕಿನ್ ಡೋರ್, ಲ್ಯಾಮಿನೇಟ್ ಪ್ಲಷ್ ಡೋರ್, ರೆಡಿಮೆಡ್ ವುಡ್ ಡೋರ್, ಡೋರ್ ಫಿಟ್ಟಿಂಗ್, ಪಿ.ವಿ.ಸಿ ಡೋರು, ಹಾರ್ಡ್ ವೇರ್ ಪುಡ್ ಬೀಡಿಂಗ್,‌ ಸೈಬರ್ ಬೀಡಿಂಗ್ ಕಟ್ಟಿಂಗ್ ಡ್ರೀಲ್ ಮೆಷಿನ್ ಹಾಗೂ ಇನ್ನೀತರ ಮೆಷಿನರಿ ಸಾಮಾಗ್ರಿಗಳ ಹಾಗೂ ಪ್ಲೈನ್ ಸಿಮೆಂಟ್ ಸೀಟುಗಳು ಲಭ್ಯವಿದೆ ಹಾಗು ವಾರ್ಡ್ ರೂಬ್ಸ್, ಟಿವಿ ಕ್ಯಾಬಿನೆಟ್, ಕಿಚನ್ ಕ್ಯಾಬಿನೆಟ್, ಅಪೀಸ್ ವರ್ಕ್ಸ್,‌ ಪವರ್ ಸೀಲಿಂಗ್, ಪಿ.ವೊ.ಪಿ, ಸಿಲಿಂಗ್ ಪೈಬರ್ ಸಿಲಿಂಗ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಸಂಸ್ಥೆಯ ಮಾಲಕ ನವೀನ್ ಕುಮಾರ್ ರವರ ಪತ್ನಿ ಗೀತಾ ಮಾಯಿಲ್ಗ, ಮಾ! ಆತ್ಮಿಕ್ ಮತ್ತು ಮಾ! ಮನ್ವಿಕ್ ರವರು ಸ್ವಾಮಿಜೀಯವರಿಗೆ ಹೂ ಫಲ ಪುಷ್ಪ ಸಮರ್ಪಿಸಿದರು ಹಾಗು ಅತಿಥಿಗಳಿಗೆ ಸ್ಮರಣಿಗೆ ನೀಡಿ ಗೌರವಿಸಿದರು. ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರಿನ ಕ್ರೀಡಾ ಕಾರ್ಯದರ್ಶಿ ಶಿವಪ್ರಸಾದ್ ನೂಚಿಲ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು, ಯುವ ವಾಹಿನಿ ಕಡಬ ಘಟಕದ ಅಧ್ಯಕ್ಷ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿ ರವಿ ಮಾಯಿಲ್ಗ, ರವಿ ಉದನೆ, ಹರ್ಷಿತ್ ಮಾಯಿಲ್ಗ, ನವೀನ್ ಕೊಂಬಾರು, ವಸಂತ ಪೂಜಾರಿ, ಬಿ.ಎಲ್ ಜನಾರ್ಧನ್, ಹರ್ಷಿತ್, ಲೋಹಿತ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸಂದೀಪ್, ಜನಾರ್ದನ, ಹರ್ಷಿತ್, ರಾಜೇಶ್, ಸುರೇಶ್, ಜಯಂತ, ರವಿ ನಾಣಿಲ, ರವಿ ಭಾಯ್, ರಾಧೇಶ್ಯಾಮ್ ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here