ಈದ್ ಮಿಲಾದ್ ಶಾಂತಿ ಸೌಹಾರ್ದತೆಯ ಸಂಕೇತವಾಗಿ ನಡೆಯಲಿ – ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್

0

ಪುತ್ತೂರು: ಭಾವೈಕ್ಯತೆ ಸಂದೇಶವಾಗಿರುವ ಈದ್ ಮಿಲಾದ್ ಶಾಂತಿ ಸೌಹಾರ್ದತೆಯಿಂದ ನಡೆಯಲಿ. ಆಯಾ ಮಸೀದಿಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಂಬಂಧಿಸಿ ಮೈಕ್ ಅನುಮತಿ ಪಡೆಯುವಂತೆ ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಹೇಳಿದರು.
ಸೆ.28ರಂದು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಈದ್ ಮಿಲಾದ್ ಹಬ್ದ ಕುರಿತು ಸೆ.23ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನಡೆದ ಆಯಾ ಮಸೀದಿ ಅಧ್ಯಕ್ಷರುಗಳ ಸಭೆಯಲ್ಲಿ ಅವರು ವಿವಿಧ ಸೂಚನೆಗಳನ್ನು ನೀಡಿದರು. ಮಸೀದಿ ಅಧ್ಯಕ್ಷರುಗಳು ತಮ್ಮ ತಮ್ಮ ಮಸೀದಿಗಳಲ್ಲಿ ನಡೆಯುವ ಕಾರ್ಯಕ್ರಮ ಮತ್ತು ಸಮಯಗಳ ಮಾಹಿತಿ ನೀಡಿದರು. ಈ ವೇಳೆ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಅವರು ಮಾತನಾಡಿ ಆಯಾ ಮಸೀದಿ ವ್ಯಾಪ್ತಿಯಲ್ಲಿ ನಡೆಯುವ ಮೆರವಣಿಗೆಗೆ ಮೈಕ್ ಅಳವಡಿಸಿದರೆ ಅದಕ್ಕೆ ಅನುಮತಿ ಪಡೆಯುವುದು ಕಡ್ಡಾಯ. ಕಾರ್ಯಕ್ರಮ ಶಾಂತಿ ಸುವ್ಯವಸ್ಥೆಯಿಂದ ನಡೆಯಲಿ ಎಂದರು. ಪುತ್ತೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿಗಳ ಪದಾಧಿಕಾರಿಗಳಾದ ಪಿ.ಎಅಬ್ದುಲ್ ಹಮೀದ್, ಎಸ್ ಮೊಹಮ್ಮದ್, ಅಬ್ದುಲ್ ಅಜೀಜ್ ಬೀಟಿಗೆ, ಪಿ.ಕೆ ಅಬ್ದುಲ್ ಖಾದರ್ ಪರ್ಲಡ್ಕ, ಮೊಹಮ್ಮದ್ ಹುಸೈನ್ ಬನ್ನೂರು, ಅಬ್ದುಲ್ ಹಮೀದ್ ಸಾಲ್ಮರ, ಎಲ್.ಟಿ.ಅಬ್ದುಲ್ ರಜಾಕ್ ಹಾಜಿ, ಕೆ.ಮೊಹಮ್ಮದ್, ಅಬ್ದುಲ್ ರಜಾಕ್ ಆರ್.ಪಿ, ಕೆ.ಎಮ್ ಅಜೀಜ್, ಅಬ್ದುಲ್ ಅಜೀಜ್, ಬಿ.ಎ.ಅಶ್ರಫ್, ಕೆ.ಉಮ್ಮಾರ್, ಡಿ.ಕೆ ಹಕೀಮ್, ಅಬ್ದುಲ್ ರಹಿಮಾನ್, ರಾಜಾಕ್, ರಫೀಕ್, ಯಂ.ಇಬ್ರಾಹಿಂ ಮುಲಾರು, ಇಸ್ಮಾಯಿಲ್ ಸಾಲ್ಮರ, ಶಬೀರ್ ಕೊಡಿಪ್ಪಾಡಿ, ಹಸೈನಾರ್ ಕೆ, ಮೊಹಮ್ಮದ್ ಆಲಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಪುತ್ತೂರು ಟೌನ್‌ಗೆ ಸಂಬಂಧಿಸಿ ಎಮ್.ಟಿ.ರಸ್ತೆಯಲ್ಲಿರುವ ಮಸೀದಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಬನ್ನೂರು, ಬಪ್ಪಳಿಗೆ, ಪಡೀಲ್, ಸಾಲ್ಮರ, ಮುಕ್ವೆ, ಮೊಟ್ಟೆತ್ತಡ್ಕ, ಕೆಮ್ಮಾಯಿ, ಮುಕ್ರಂಪಾಡಿ, ಕಬಕ, ಕೂರ್ನಡ್ಕ, ಕೆದುವಡ್ಕ, ಪಾಟ್ರಕೋಡಿ, ಬೀಟಿಗೆ, ಕೊಡಿಪ್ಪಾಡಿ, ಶಾಂತಿಗೋಡು, ಪುರುಷರಕಟ್ಟೆ ಮಸೀದಿಗಳಲ್ಲಿ ಪರಿಸರದಲ್ಲಿ ಈದ್ ಮೀಲಾದ್ ಮೆರವಣಿಗೆ ನಡೆಯಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಮಸೀದಿ ಪದಾಧಿಕಾರಿಗಳು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here