ರೂ.153.52ಕೋಟಿ ವ್ಯವಹಾರ, ರೂ.49.73ಲಕ್ಷ ಲಾಭ, ಶೇ.14 ಡಿವಿಡೆಂಡ್
ಪುತ್ತೂರು:ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು 2022-23ನೇ ಸಾಲಿನಲ್ಲಿ ರೂ.153.52ಕೋಟಿ ವ್ಯವಹಾರ ನಡೆಸಿ ರೂ.49,73,971 ಲಾಭ ಗಳಿಸಿದೆ. ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.23ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎ ತರಗತಿ ಸದಸ್ಯರಿಂದ ರೂ.98,89,900, ಬಿ ತರಗತಿ ಸದಸ್ಯರಿಂದ ರೂ.1,10,500 ಹಾಗೂ ಸಿ ತರಗತಿ ಸದಸ್ಯರಿಂದ ರೂ.56,105 ಪಾಲು ಬಂಡವಾಳ ಹೊಂದಿದೆ. ರೂ.32,16,38,823.26 ವಿವಿಧ ರೂಪದ ಠೇವಣಿ, ರೂ.1,71,71,300.42 ಕ್ಷೇಮ ನಿಧಿಯನ್ನು ಹೊಂದಿದೆ. ಸದಸ್ಯರಿಗೆ ವಿವಿಧ ರೂಪದಲ್ಲಿ ವಿತರಿಸಲಾದ ಸಾಲಗಳ ಪೈಕಿ ರೂ.25,03,12,155 ಸಾಲ ಹೊರಬಾಕಿಯಿರುತ್ತದೆ. ವಿವಿಧ ಬ್ಯಾಂಕ್ಗಳಲ್ಲಿ ರೂ.11,11,28,115ನ್ನು ವಿನಿಯೋಗಿಸಲಾಗಿದೆ. ಸಂಘದಲ್ಲಿ ರೂ.32,01,306 ನಗದು ಶಿಲ್ಕು ಹಾಗೂ ರೂ.1,34,28,547.13 ಬ್ಯಾಂಕ್ ಶಿಲ್ಕು ಹೊಂದಿದೆ. ಲೆಕ್ಕ ಪರಿಶೋಧನೆಯಲ್ಲಿ ಸಂಘವು ಸತತವಾಗಿ ಎ ಶ್ರೇಣಿಯನ್ನು ಪಡೆದುಕೊಂಡಿದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದರು.
ಸಂಘಕ್ಕೆ ಸ್ವಂತ ಕಟ್ಟಡ:
ಪುತ್ತೂರಿನಲ್ಲಿ ಕೇಂದ್ರ ಕಚೇರಿಯ ಮೂಲಕವೇ ವ್ಯವಹಾರ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಸಂಘದ ಸ್ವಂತ ಕಟ್ಟಡ ನಿರ್ಮಿಸಲಾಗುವುದು. ಪುತ್ತೂರು ನಗರ ಹೊರತು ಪಡಿಸಿ ಇತರ ಕಡೆಗಳಲ್ಲಿ ಸಂಘದ ಶಾಖೆಗಳನ್ನು ತೆರೆಯಲಾಗವುದು. ಕೇಂದ್ರ ಕಚೇರಿಗೆ ಶೀಘ್ರದಲ್ಲಿಯೇ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದು ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದರು.
ಮುಂದಿನ ಯೋಜನೆಗಳು:
ಸಂಘವು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಸಂಘದ ಪ್ರಧಾನ ಕಚೇರಿಗೆ ಜಾಗ ಖರೀದಿಸಿ, ಸ್ವಂತ ಕಟ್ಟಡ ನಿರ್ಮಿಸುವುದು. ಸದಸ್ಯರ ಬೇಡಿಕೆಯಂತೆ ಬೆಳ್ತಂಗಡಿಯಲ್ಲಿ ಸಂಘದ ಶಾಖೆಯನ್ನು ತೆರೆಯಲಾಗುವುದು. ಜೊತೆಗೆ 500 ಹೊಸ ಸದಸ್ಯರ ಸೇರ್ಪಡೆಯೊಂದಿಗೆ ಪಾಲು ಬಂಡವಾಳವನ್ನು ರೂ.1.25ಕೋಟಿಗೆ ಏರಿಕೆ ಮಾಡುವುದು, ರೂ.37ಕೋಟಿ ಠೇವಣಿ ಸಂಗ್ರಹ ಹಾಗೂ ರೂ.32ಕೋಟಿ ಸಾಲ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಬ್ಯಾಂಕ್ಗೆ ಕೋರ್ ಬ್ಯಾಂಕಿಂಗ್ ಸಾಫ್ಟ್ವೇರ್ ಅಳವಡಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.ಪಿ ತಿಳಿಸಿದರು.
ಪ್ರತಿಭಾ ಪುರಸ್ಕಾರ:
ವರದಿ ಸಾಲಿನಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇ.೮೫ಕ್ಕಿಂತ ಅಧಿಕ ಅಂಕಗಳಿಸಿದ ಶಿಶಿರ್ ಪಿ.ನಾಕ್, ನಿಶಾ, ನಂದನ್ ನಾಕ್, ಲಿಖ ಕೆ.ಎಸ್., ಪಿಯುಸಿಯಲ್ಲಿ ಶೇ.75ಕ್ಕಿಂತ ಅಧಿಕ ಅಂಕಗಳಿಸಿದ ಸ್ನೇಹಿಲ್ ಎಸ್.ನಾಕ್, ಶಷ್ಮಾ ಪಿ., ಪುನೀತ್ ಎಂ.ಜಿ., ಯಶ್ವಿನಿ, ತ್ರಿನಾಲಿ ಪಿ.ಜಿ., ಆಶ್ರಿತಾ ಪಿ.ಆರ್., ಅಂಜಲಿ, ಋದ್ದಿ ಎಮ್.ವಿ., ಯಶ್ವಿತ್ ಕೆ., ಶಿವನೀತ್ ನಾಕ್ ಪಿ., ಉಜ್ವಲ್ ಯು.ನಾಕ್, ಶಶಾಂಕ್ ಬಿ.ನಾಕ್ ಹಾಗೂ ಅನಿತೇಜ್ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಿರ್ದೇಶಕರಾದ ರಘುನಾಥ ನಾಕ್, ಕೊಡಂಗೆ ಬಾಲಕೃಷ್ಣ ನಾಕ್, ಕೆ.ರತ್ನಾಕರ ನಾಕ್, ಸುದೇಶ್ ಕುಮಾರ್ ಕೆ., ಟಿ.ಸದಾಶಿವ ನಾಕ್, ಸತೀಶ್ ನಾಕ್, ರಾಕೇಶ್ ಕುಮಾರ್, ಹೇಮಲತಾ ಎಸ್. ನಾಕ್, ಗುಲಾಬಿ ಕೆ., ಸುನೀತಾ ಎಸ್., ಹಾಗೂ ದಿನೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಗ್ಮಿ ಸಂಗ್ರಾಹಕ ರಾಜೇಶ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಕೆ.ಶಂಕರ್ ನಾಕ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.ಪಿ ಲೆಕ್ಕಪರಿಶೋಧನಾ ವರದಿ, ಲಾಭಾಂಶ ವಿಂಗಡನೆಯ ಮಾಹಿತಿ ನೀಡಿದರು. ಸಿಬಂದಿಗಳಾದ ತನುಜಾ, ಪ್ರೀತಮ್, ಜಯಲಕ್ಷ್ಮೀ, ಜಲಜಾಕ್ಷಿ, ಪ್ರತಿಭಾ, ಸಂದೇಶ್, ಶುತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶುತಿಕಾ ಕೆ.ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಗೋಪಾಲ್ ನಾಕ್ ವಂದಿಸಿದರು. ಸಿಬಂದಿಗಳಾದ ಪ್ರೇಮಾನಂದ ನಾಕ್, ಕಾರ್ತಿಕ್, ಪಿಗ್ಮಿ ಸಂಗ್ರಾಹಕರಾದ ಪ್ರವೀಣ್, ಮನೋರಮಾ, ಬಬಿತಾ, ಅಭಿಲಾಷ್, ಪ್ರದೀಪ್, ಹೇಮಲತಾ ಹಾಗೂ ಅವಿನಾಶ್ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.