ಆಲಂಕಾರು:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ತಾಲೂಕು ಪಂಚಾಯತ್ ಪುತ್ತೂರು ಹಾಗೂ ಕಾಂಚನ ಶ್ರೀ ವೆಂಕಟಸುಬ್ರಹ್ಮಣ್ಯ ಸ್ಮಾರಕ ಪ್ರೌಢಶಾಲೆ ಕಾಂಚನ ಇದರ ಸಹಯೋಗದಲ್ಲಿ ಸೆ.22 ರಂದು ನಡೆದ ತಾಲೂಕು ಮಟ್ಟದ ಯುವಸಂಸತ್ತು ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿನ 10ನೇ ತರಗತಿ ವಿದ್ಯಾರ್ಥಿನಿ ಪ್ರಿಯಾಂಕ ಜಿಲ್ಲಾಮಟ್ಟದ ಯುವ ಸಂಸತ್ತು ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.
ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ ತಲಾ ಐದು ವಿದ್ಯಾರ್ಥಿಗಳ ಹಲವಾರು ತಂಡಗಳು ಭಾಗವಹಿಸಿರುವ ಈ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಆಯ್ಕೆಗೆ ಕೇವಲ ಐದು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ಐವರಲ್ಲಿ ಪ್ರಿಯಾಂಕ ರವರು ಒಬ್ಬರಾಗಿದ್ದಾರೆ. ಈಕೆ ನೆಕ್ಕಿಲು ಶ್ರೀಲಿಂಗಪ್ಪ ಹಾಗೂ ಶ್ರೀಮತಿ ವಿಮಲಾ ದಂಪತಿಗಳ ಪುತ್ರಿ. ಈಕೆಯನ್ನು ಸಮಾಜ ವಿಜ್ಞಾನ ಶಿಕ್ಷಕಿ ಲಲಿತಾ.ಕೆ ರವರು ತರಬೇತುಗೊಳಿಸಿ. ಯುವ ಸಂಸತ್ತು ಸಂಪನ್ಮೂಲ ವ್ಯಕ್ತಿ ಗುಡ್ಡಪ್ಪ ಬಲ್ಯರವರು ಮಾರ್ಗದರ್ಶನ ನೀಡಿ ಮುಖ್ಯ ಶಿಕ್ಷಕರಾದ ಹರಿಕಿರಣ್ ಕೆ ರವರು ಹಾಗೂ ಶಿಕ್ಷಕ ವೃಂದದವರು ತರಬೇತುಗೊಳಿಸಿದ್ದಾರೆ