ಕುಂತೂರುಪದವು ಹಾ.ಉ.ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

2.91 ಲಕ್ಷ ರೂ.ನಿವ್ವಳ ಲಾಭ; ಶೇ.10 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 31 ಪೈಸೆ ಬೋನಸ್ ಘೋಷಣೆ

ಪೆರಾಬೆ: ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ.22ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸೋಮಪ್ಪ ಗೌಡ ಎರ್ಮಾಳರವರು ಮಾತನಾಡಿ, ಸಂಘವು ವರದಿ ಸಾಲಿನಲ್ಲಿ 2,91,411 ರೂ.ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 31 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ಹೇಳಿದರು. ಹಾಲು ಉತ್ಪಾದನೆ ಕಡಿಮೆಯಾಗುತ್ತಿದ್ದು ಸದಸ್ಯರು ಹಾಲಿನ ಉತ್ಪಾದನೆ ಹೆಚ್ಚಳ ಮಾಡಬೇಕು. ನೂತನ ಕಟ್ಟಡ ರಚನೆ ಸಂದರ್ಭ ಸಹಕರಿಸಿದ ಸದಸ್ಯರಿಗೆ, ನಿರ್ದೇಶಕರಿಗೆ, ಕಟ್ಟಡ ಸಮಿತಿಯವರಿಗೆ ಸೋಮಪ್ಪ ಗೌಡರವರು ಕೃತಜ್ಞತೆ ಸಲ್ಲಿಸಿದರು.


ದ.ಕ.ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್‌ರವರು ಹೈನುಗಾರಿಕೆ, ಹಾಲಿನ ಗುಣಮಟ್ಟ ಹೆಚ್ಚಳದ ಕುರಿತು ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಪದ್ಮನಾಭ ಗೌಡ ಎರ್ಮಾಳ, ನಿರ್ದೇಶಕರಾದ ವಿ.ಯಂ.ತೋಮಸ್, ದಿನಕರ ಭಟ್ ಮೇರುಗುಡ್ಡೆ, ರಾಮಯ್ಯ ಗೌಡ, ಸಿ.ಎಚ್.ಸುರೇಶ್, ವಸಂತ ಕೆದ್ದೊಟ್ಟೆ, ವಿಜಯ, ವನಿತ ಕೇರ್ಪುಡೆ, ವನಿತಾ ಎನಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕುಂತೂರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪಾಧ್ಯಕ್ಷ ಪದ್ಮನಾಭ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ನೀಲಯ್ಯ ಗೌಡ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕಿ ವನಿತಾ ಕೇರ್ಪುಡೆ ವಂದಿಸಿದರು. ಹಾಲು ಪರೀಕ್ಷಕ ಶ್ರೇಯಸ್ ಎಂ.ಸಹಕರಿಸಿದರು. ಸಭೆಯಲ್ಲಿ ಕೆ.ವಿ.ಗಣಪತಿ ಭಟ್, ಗೋಪಾಲಕೃಷ್ಣ ಭಟ್, ರಘುನಾಥ ನಾಕ್, ಕೆ.ಎಸ್.ಬಾಬು, ಎ.ಚಂದ್ರಶೇಖರ, ಕೇಶವ ಕೆ., ಕೋಶಿ ಕೆ.ಎನ್., ಗಂಗಾಧರ ಕುಂಡಡ್ಕ, ಕೃ.ಗ.ಕಾರ್ಯಕರ್ತ ಮಂಜಪ್ಪ ಕೆ.ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಬಹುಮಾನ:
2022-23ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಸಿ.ಹೆಚ್.ಸುರೇಶ್ ಇಡಾಳ, ವಿಜಯ ಇಡಾಳ, ಗೋಪಾಲಕೃಷ್ಣ ಕೆದ್ದೊಟ್ಟೆ ಹಾಗೂ 360 ದಿನಕ್ಕಿಂತ ಹೆಚ್ಚು ದಿನ ಸಂಘಕ್ಕೆ ಹಾಲು ಪೂರೈಸಿದ 28 ಮಂದಿ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಕ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here