ಪುತ್ತೂರು: ಗಾಂಧಿ ಕಟ್ಟೆಯಲ್ಲಿ ಗಾಂಧಿ ಜಯಂತಿ ಆಚರಣೆ

0

ಪುತ್ತೂರು:ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧೀಕಟ್ಟೆ ಸಮಿತಿ, ವಿವಿಧ ರೋಟರಿ ಕ್ಲಬ್‌ಗಳು ಹಾಗೂ ಜೇಸಿಐಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ದಿನಾಚರಣೆಯು ಅ.2ರಂದು ಬಸ್ ನಿಲ್ದಾಣದ ಬಳಿಯ ಗಾಂಧೀ ಕಟ್ಟೆಯಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ದೇಶದ ಜನರನ್ನು ಒಟ್ಟು ಸೇರಿಸಿದವರು. ವಿವಿಧ ಚಳುವಳಿಗಳ ಮೂಲಕ ದೇಶಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವರು. ಇದರ ಬಗ್ಗೆ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು. ಸ್ವಚ್ಚತೆ ಬಾಷಣಕ್ಕೆ, ಒಂದು ದಿನಕ್ಕೆ ಅಥವಾ ಫೋಟೋಗೆ ಸೀಮಿತವಾಗಿರಬಾರದು. ಸ್ವಚ್ಚತೆ ಪ್ರತಿಯೊಬ್ಬರ ಮನಸ್ಸಿನಲ್ಲಿಬರಬೇಕು. ಮನಸ್ಸಿನಲ್ಲಿ ಸ್ವಚ್ಚತೆ ಆದಾಗ ದೇಶ ಸಚ್ಚತೆಯಾಗಲು ಸಾಧ್ಯ. ಮಹಾತ್ಮ ಗಾಂಧೀಜಿಯವರು ಹಾಕಿದ ಹೆಜ್ಜೆಗಳನ್ನು ಜೀವನದಲ್ಲಿ ಅಳವಡಿಸಬೇಕು. ಗಾಂಧೀಯವರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು. ಆಗ ದೇಶ ವಿಶ್ವ ಗುರುವಾಗಲಿದೆ. ಗಾಂಧಿಯವರ ಕೊಡುಗೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳವುದಲ್ಲದೆ ಎಲ್ಲಾ ಕಡೆ ಇಂತಹ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಯುವ ಪೀಳಿಗೆಗೆ ಪರಿಚಯಿಸಬೇಕು ಎಂದರು.


ಸಂಸ್ಮರಣಾ ಜ್ಯೋತಿ ಬೆಳಗಸಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ದೇಶಕ್ಕಾಗಿ ಮಹಾತ್ಮ ಗಾಂಧೀಜಿಯವರು ಮಾಡಿದ ತ್ಯಾಗ, ಬಲಿದಾನ ಇಂದಿಗೂ ಅವಿಸ್ಮರಣೀಯ. ಅವರು ಶಾಂತಿಯನ್ನು ವಿಶ್ವಕ್ಕೆ ಸಾರಿದವರು. ಅಂತಹ ವ್ಯಕ್ತಿ ಬಾರತದಲ್ಲಿ ಹುಟ್ಟಿ ಬೆಳೆದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಅವರು ವಿಶ್ವಕ್ಕೆ ಶ್ರೇಷ್ಠವಾದುದು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರು ಸರಳ ವ್ಯಕ್ತಗಳಾಗಿ ವಿಶ್ವಕ್ಕೆ ಸಂದೇಶ ಸಾರಿದವರು ಎಂದರು.


ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಮಾತನಾಡಿ, ಗಾಂಧೀಜಿಯವರ ಜೀವನ ಹಾಗೂ ಅವರು ಮಣ್ಣಿನ ನೀಡಿದ ಕೊಡುಗೆ ಮುಖ್ಯವಾಗಿದ್ದು ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಅವರ ಬದುಕುನ್ನು ತುಲನೆ, ವಿಮರ್ಷೆ ಮಾಡುವ ಆವಶ್ಯಕತೆ ಇದೆ ಎಂದರು.


ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜಯರಾಜ್ ಭಂಡಾರಿ, ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಪಶುಪತಿ ಶರ್ಮ, ಜೇಸಿಐ ಅಧ್ಯಕ್ಷ ಸುಹಾಸ್ ಮರಿಕೆ, ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಸುಂದರ ರೈ ಸಂದರ್ಭೋಚಿತವಾಗಿ ಮಾತನಾಡಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ಜೆ.ಶಿವಂಶಕರ್, ಶಿಕ್ಷಣ ಸಂಯೋಜಕ ಹರಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪೌರ ಕಾರ್ಮಿಕರಿಗೆ ಸನ್ಮಾನ:
ನಗರ ಸ್ವಚ್ಚತೆಗೆ ಕೊಡುಗೆ ನೀಡಿದ ಪೌರಕಾರ್ಮಿಕರಾದ ದಯಾನಂದ, ಸೀತಾ, ಗುಲಾಬಿಯವರನ್ನು ಸನ್ಮಾನಿಸಲಾಯಿತು. ಗಾಂಧೀ ಜಯಂತಿಯ ಅಂಗವಾಗಿ ನಗರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಗಾಂಧೀ ಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳ ವಿಭಾಗದಲ್ಲಿ ಡಾ.ಶಿವರಾಮ ಕಾರಂತ ಸರಕಾರಿ ಪ್ರೌಢಶಾಲಾ ರಕ್ಷಿತಾ(ಪ್ರ) ಯಜ್ಞೇಶ್(ದ್ವಿ) 5ನೇ ತರಗತಿ ವಿಭಾಗದಲ್ಲಿ ಸಂತ ಫಿಲೋಮಿನಾ ಹಿ.ಪ್ರಾ ಶಾಲಾ ಜಾನ್ವಿ(ಪ್ರ), ಕೆಮ್ಮಿಂಜೆ ಸ.ಹಿ.ಪ್ರಾ ಶಾಲಾ ರಾಮ್‌ಪ್ರಸಾದ್(ದ್ವಿ), ಇಎಸ್‌ಆರ್ ಶಾಲಾ ನಫೀಸಾ(ತೃ), 6ನೇ ತರಗತಿ ವಿಭಾಗದಲ್ಲಿ ಜಶ್ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯದ ಜಶ್(ಪ್ರ), ಸುದಾನ ಶಾಲಾ ಶಮಿತಾ(ದ್ವಿ), ಸಂತ ಫಿಲೋಮಿನಾ ಶಾಲಾ ಮನ್ಚಿತ್ ಜೆ.ಕೆ(ತೃ), 7ನೇ ತರಗತಿ ವಿಭಾಗದಲ್ಲಿ ಹಾರಾಡಿ ಶಾಲಾ ಸ್ಥುತಿ(ಪ್ರ), ವಿವೇಕಾನಂದ ಆಂಗ್ಲ ಮಾಧ್ಯಮದ ಅವನಿ ಎಸ್.ವಿ(ದ್ವಿ), ಸಂತ ಫಿಲೋಮಿನಾದ ಮಹಿನ್ ರೈ(ತೃ), 8ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮದ ನಿಲೀಕ್ಷಾ(ಪ್ರ), ಹಾರಾಡಿ ಶಾಲಾ ಯಜ್ಞೇಶ್(ದ್ವಿ), ಕೆಮ್ಮಾಯಿ ಹಿ.ಪ್ರಾ ಶಾಲಾ ಹಸನ್(ತೃ), 9ನೇ ತರಗತಿ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮದ ಅರ್ಜುನ್ ಡಿ(ಪ್ರ), ಫಿಲೋಮಿನಾದ ಮಧಸೂದನ್(ದ್ವಿ), ವಿವೇಕಾನಂದ ಕನ್ನಡ ಮಾಧ್ಯಮದ ಪೂಜಾ(ತೃ), 10ನೇ ತರಗತಿ ವಿಭಾಗದಲ್ಲಿ ರಾಮಕೃಷ್ಣ ಪ್ರೌಢಶಾಲಾ ಯಶಸ್(ಪ್ರ), ಪಾಂಗ್ಲಾಯ ಬೆಥನಿ ಆಂಗ್ಲ ಮಾಧ್ಯಮದ ಶಿವಾನಿ, ವಿವೇಕಾನಂದ ಕನ್ನಡ ಮಾಧ್ಯಮದ ಪಶ್ವತ್‌ರಾಜ್(ತೃ) ಬಹುಮಾನ ಪಡೆದುಕೊಂಡಿದ್ದಾರೆ.


ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳಾದ ಅವನಿ, ತೃಷಾ ಹಾಗೂ ಧತಿ ಸರ್ವಧರ್ಮ ಪ್ರಾರ್ಥನೆ ಮಾಡಿದರು. ಗಾಂಧೀಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷ ರಮೇಶ್ ಬಾಬು ವಂದಿಸಿದರು. ಕಾರ್ಯದರ್ಶಿ ಸಯ್ಯದ್ ಕಮಲ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ಕೌಟ್, ಗೈಡ್ಸ್ ಶಿಕ್ಷಕರಾ ಸುನೀತಾ ಹಾಗೂ ವೇದಾವತಿಯವರ ನೇತೃತ್ವದಲ್ಲಿ ರಾಮಕೃಷ್ಣ ಪ್ರೌಢಶಾಲಾ ಸುಮಾರು 60 ಮಂದಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಸಾಮೂಹಿಕ ಭಜನೆ ನೆರವೇರಿತು.

LEAVE A REPLY

Please enter your comment!
Please enter your name here