ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ, ಶಿಕ್ಷಕ- ಶಿಕ್ಷಕೇತರ ವೃಂದ ,ಶಾಲಾ ವಿದ್ಯಾರ್ಥಿ ಬಳಗ ಹಾಗೂ ಪೋಷಕರೊಂದಿಗೆ 154ನೇ ವರ್ಷದ ಗಾಂಧಿ ಜಯಂತಿಯನ್ನು ಅ.2ರಂದು ಆಚರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಲೋರಾ ಪಾಯ್ಸ್ ಇವರು ದೀಪ ಬೆಳಗಿಸುವುದರೊಂದಿಗೆ ಈ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಪ್ರಾರಂಭಿಸಿದರು. ಇವರೊಂದಿಗೆ ಬಾಪೂಜೀಯ ಭಾವಚಿತ್ರಕ್ಕೆ ಶಾಲಾ ಶಿಕ್ಷಕವೃಂದ, ಶಾಲಾ ನಾಯಕಿ ಹಾಗೂ ಪೋಷಕರು ಪುಷ್ಪಾರ್ಚನೆಗೈದರು.ಶಿಕ್ಷಕಿ ಪ್ರಿಯಾರವರು ದಿನದ ಮಹತ್ವದ ಕುರಿತು ತಿಳಿಸಿದರು.
ಶಾಲಾ ಭಾರತ್ ಸ್ಕೌಟ್-ಗೈಡ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಬಳಗ ಪ್ರಾರ್ಥಿಸಿ, 7ನೇ ತರಗತಿಯ ವಿದ್ಯಾರ್ಥಿಯಾದ ಮಾಸ್ಟರ್ ಕ್ಲೈವ್ ರೇಗನ್ ಪಿಂಟೊ ರವರು ಕಾರ್ಯಕ್ರಮ ನಿರ್ವಹಿಸಿದರು.
ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ರಾಷ್ಟ್ರಪಿತ ಶ್ರೀ ಮಹಾತ್ಮ ಗಾಂಧೀಜಿ ಜಯಂತಿ ದಿನಾಚರಣೆಯ ಪ್ರಯುಕ್ತ 5ರಿಂದ 10ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಪೆನ್ಸಿಲ್ ನಿಂದ ಗಾಂಧೀಜಿಯವರ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ7ನೇ ತರಗತಿಯ ಮಾಹಿನ್ ರೈ ,6ನೇ ತರಗತಿಯ ಮನ್ವಿತ್ ಹಾಗೂ 5ನೇ ತರಗತಿಯ ಜಾನವಿ ಇವರು ಸ್ಪರ್ಧೆಯ ವಿಜೇತರಾಗಿರುತ್ತಾರೆ. ಅಕ್ಟೋಬರ್ 2 ರಂದು ಪುತ್ತೂರು ಗಾಂಧಿ ಕಟ್ಟೆಯಲ್ಲಿ ನಡೆದ ತಾಲೂಕು ಮಟ್ಟದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.