ಅ.8; ನಿಡ್ಪಳ್ಳಿಯಲ್ಲಿ 8 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

0

ನಿಡ್ಪಳ್ಳಿ; ನವರಾತ್ರಿ ಉತ್ಸವ ಸಮಿತಿ ಮತ್ತು ಆಡಳಿತ ಮಂಡಳಿ ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇವರ ವತಿಯಿಂದ ನವರಾತ್ರಿ ಉತ್ಸವ- 2023 ಪ್ರಯುಕ್ತ ಶ್ರೀ ಶಾಂತದುರ್ಗಾ ದೇವಸ್ಥಾನದ ವಠಾರದಲ್ಲಿ ಹಿಂದೂ ಬಾಂಧವರ 8 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಅ.8 ರಂದು ನಡೆಯಲಿದೆ.

  ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು ಪಂದ್ಯಾಟ ಉದ್ಘಾಟಿಸಲಿರುವರು.ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ ಅಧ್ಯಕ್ಷತೆ ವಹಿಸಲಿದ್ದು ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಪಂಚಾಯತ್ ಸದಸ್ಯೆ ಗೀತಾ.ಡಿ, ಪ್ರಗತಿ ಪರ ರೈತ ಆನಂದ ರೈ ನರೈಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here