ವಿವೇಕವಂತರಾಗಲು ವಿದ್ಯೆಯ ಹಿಂದೆ ಸಾಗಬೇಕು-ಎಸ್.ಬಿ ದಾರಿಮಿ
ಉಪ್ಪಿನಂಗಡಿ; ಪ್ರತೀ ನಿಮಿಷವು ಜಗತ್ತು ಬದಲಾವಣೆಯತ್ತ ದಾಪುಗಾಲು ಹಾಕುತ್ತಿದ್ದು ಒಂದು ಸಮಾಜವು ಈ ಬದಲಾವಣೆಯನ್ನು ಅರ್ಥ ಮಾಡಿಕೊಂಡು ವಿನೂತನ ಆವಿಷ್ಕಾರಗಳ ಮೂಲಕ ಬದಲಾವಣೆಗೆ ಒಡ್ಡಿಕೊಂಡು ತಮ್ಮ ಸಮಾಜವನ್ನು ರಕ್ಷಿಸಿ ಕೊಳ್ಳಬೆಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದು ಕೆಮ್ಮಾರ ಶಂಸುಲ್ ಉಲಮಾ ಎಜುಕೇಶನ್ ಟ್ರಸ್ಟ್ ಇದರ ಅಧ್ಯಕ್ಷ ಎಸ್.ಬಿ ದಾರಿಮಿ ಹೇಳಿದರು.
ಅವರು ಕೆಮ್ಮಾರ ಶಕ್ತಿ ನಗರದ ವುಮೆನ್ಸ್ ಶರೀಹತ್ ಕಾಲೇಜಿನ ವಿಧ್ಯಾರ್ಥಿನಿಯರಿಗಾಗಿ ಮೀಲಾದ್ ಪ್ರಯುಕ್ತ ಹಮ್ಮಿಕೊಂಡ “ಮನಾರ” ಕಲಾ ಸಾಂಸ್ಕೃತಿಕ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತಾನಾಡಿದರು. ಹಿಂದಿನ ಕಾಲದಲ್ಲಿ ನಮ್ಮ ಮಹಿಳೆಯರು ಅಡಿಗೆ ಮನೆಗೆ ಸೀಮಿತವಾಗಿದ್ದರು. ಆದರೆ ಇಂದು ’ಸಮಸ್ತದ ಉಲಮಾಗಳ ಉತ್ತಮ ಕಾರ್ಯವೈಖರಿಯಿಂದಾಗಿ ಮುಸ್ಲಿಂ ಮಹಿಳೆಯರು ಕೂಡಾ ವೈಧ್ಯಕೀಯ, ಶೈಕ್ಷಣಿಕ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದು ಪ್ರತಿಭಾವಂತರಾಗಿ ಮುಂದಿನ ತಲೆಮಾರನ್ನೂ ವಿದ್ಯಾವಂತರನ್ನಾಗಿಸುವಲ್ಲಿ ಸಫಲರಾಗುತ್ತಿದ್ದಾರೆ.ಇದು ಉತ್ತಮ ಬೆಳವಣಿಗೆಯಾಗಿದ್ದು, ಮುಸ್ಲಿಮರು ಕಾಲದ ಕರೆಯನ್ನು ಸ್ವೀಕರಿಸುವುದಿಲ್ಲ ಎನ್ನುವವರಿಗೆ ಇದು ತಕ್ಕ ಉತ್ತರ ಕೂಡಾ ಆಗಿದೆ ಎಂದು ನುಡಿದರು. ಪೆರಿಯಡ್ಕ ಖತೀಬರಾದ ಅಬ್ದುಲ್ ರಹಿಮಾನ್ ಪೈಝಿ ಕಾರ್ಯಕ್ರಮ ಉದ್ಗಾಟಿಸಿದರು.
ಟ್ರಸ್ಟಿ ಸದಸ್ಯರಾದ ಉಮರ್ ಹಾಜಿ ಕೋಡಿಯಾಡಿ,ಬಶೀರ್ ಹಾಜಿ ದಾರಂದಕುಕ್ಕು,ಹಸೈನಾರ್ ಹಾಜಿ ಕೊಯಿಲ,ರಶೀದ್ ಹಾಜಿ ಪರ್ಲಡ್ಕ,ಇಸಾಕ್ ಕೆಮ್ಮಾರ,ಅಬ್ದುಲ್ಲ ಉಸ್ತಾದ್ ಕೆಮ್ಮಾರ,ಇಬ್ರಾಹಿಂ ಬಡಿಲ, ಯುನಿಕ್ ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು, ಕೆ.ಎಂ.ಎ ಕೊಡುಂಗೈ ಸ್ವಾಗತಿಸಿ, ವಂದಿಸಿದರು.