ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್, ಬಂಟ್ವಾಳ ಇದರ ಮಾಸಿಕ ಸಭೆ

0

ಬಡಗನ್ನೂರುಃ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ಮಾಸಿಕ ಸಭೆಯು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಅ.14 ರಂದು ನಡೆಯಿತು.
ಸಭಾ ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ಶಂಕರಿ ಹಾಗೂ  ನಾರಾಯಣ ಪಾಟಾಳಿ ದಂಪತಿಗಳು ಪಟ್ಟೆ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಿ ಶುಭ ಹಾರೈಸಿದರು.

ಜೀವನದಲ್ಲಿ ಪಕ್ವತೆಯನ್ನು ಪಡೆಯಬೇಕು-   ನಾರಾಯಣ ಭಟ್ ಕೆಯ್ಯೂರು.:-
ಸಭಾಧ್ಯಕ್ಷತೆ ವಹಿಸಿದ  ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಕೇಂದ್ರ ಸಮಿತಿ ಸ್ಥಾಪಕಾಧ್ಯಕ್ಷ ನಾರಾಯಣ ಭಟ್ ಕೆಯ್ಯೂರು ಮಾತನಾಡಿ  ಹಿರಿಯ ಜೀವನವು ಆತ್ಮಗೌರವದೊಂದಿಗೆ ಅವರಲ್ಲಿರುವ ಚೈತನ್ಯದ ಅನಾವರಣವಾಗಬೇಕೆಂಬ ಉದ್ದೇಶದಿಂದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್, ಬಂಟ್ವಾಳ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. 

50 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಈ ಪ್ರತಿಷ್ಠಾನದ ಸದಸ್ಯರಾಗಿ ತಮ್ಮ ಕ್ಷೇತ್ರದ ಅನುಭವವನ್ನು ಪರಸ್ಪರ ಹಂಚಿಕೊಳ್ಳಲು ಅವಕಾಶಗಳಿವೆ. ಪ್ರತೀ ತಿಂಗಳು 2ನೇ ಶನಿವಾರದ  ಕೇಂದ್ರ ಸಮಿತಿಯ ಸಭೆಯು ಜಿಲ್ಲೆಯ ಬೇರೆ ಸ್ಥಳಗಳಲ್ಲಿ ನಡೆಯುತ್ತಿದ್ದು, ಹಿರಿಯರು ಭಾಗವಹಿಸಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರತಿಷ್ಠಾನದ ಘಟಕಗಳನ್ನು ಆರಂಭಿಸಲಾಗಿದ್ದು ಅದರ ಪ್ರಾಥಮಿಕ ಉದ್ದೇಶಗಳನ್ನು ಈಡೇರಿಸುವಲ್ಲಿ ಹೆಜ್ಜೆಯನ್ನು ಇರಿಸಿದೆ. ಕೃಷಿ, ಆರೋಗ್ಯ, ಪರಿಸರ ಸಂರಕ್ಷಣೆ, ಸಂಸ್ಕಾರ ಶಿಕ್ಷಣಕ್ಕೆ ಮಹತ್ವವನ್ನು ನೀಡಿದೆ. ಹಿರಿಯ ಸಾಧಕರನ್ನು ಗೌರವಿಸುವುದು ಅಶಕ್ತರಿಗೆ ನೆರವು, ರಕ್ತದಾನ ಶಿಬಿರ, ಯಕ್ಷಗಾನ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದೆ. ಹಿರಿಯರ ಅಪೇಕ್ಷೆ ಮತ್ತು ಅವರ ಸಾಮಾಜಿಕ ಅಗತ್ಯಗಳನ್ನು ಪೂರೈಸುಲಾಗುತ್ತಿದೆ.

ಸನಾತನ ಸಂಸ್ಕೃತಿ ಮತ್ತು ಕುಟುಂಬ ಜೀವನದ ಸಂಬಂಧಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಕಾಸರಗೋಡು ಜಿಲ್ಲೆಯು ಸೇರಿದಂತೆ ವಿಸ್ತರಿಸುವ ಯೋಜನೆ ಇದೆ. ಕರ್ನಾಟಕ ವ್ಯಾಪ್ತಿಯಲ್ಲಿ ಸಂಘಟನೆಯನ್ನು ಸಮಾಜದ ಒಳಿತಿಗೆ ಕರ್ತವ್ಯ ರೂಪದ ಕೊಡುಗೆಯನ್ನು ನೀಡಲು ಸೇವಾ ಮನೋಭಾವದ ಹಿರಿಯ ಬಂಧುಗಳು ಪ್ರತಿಷ್ಠಾನದೊಂದಿಗೆ ಕೈಜೋಡಿಸಿ ಸರ್ವ ರೀತಿಯ ಸಹಕಾರ ನೀಡುವಂತೆ ಹೇಳಿದ ಅವರು.ಪಡುಮಲೆ ಈ ಭಾಗದಲ್ಲೂ ಹಿರಿಯರು ಹೆಚ್ಚು ಮಂದಿ ಪ್ರತಿಷ್ಠಾನದ ಸದಸ್ಯತ್ವ ಪಡೆದು ಪ್ರತಿಷ್ಠಾನದ ಚಾಪೂ  ಹರಡಿಸಿ  ಆ ಮೂಲಕ  ಜೀವನದಲ್ಲಿ ಪಕ್ವತೆಯನ್ನು ಪಡೆಯಬೇಕು ಎಂದು ಹಿರಿಯ ಸೇವಾ ಪ್ರತಿಷ್ಠಾನ ಜಿಲ್ಲಾ ಮಟ್ಟದ ಸ್ಥಾಪಕ ಅಧ್ಯಕ್ಷ ನಾರಾಯಣ ಭಟ್ ಕೆಯ್ಯೂರು ಹೇಳಿದರು.

ಪ್ರತಿಷ್ಠಾನದ ಸದಸ್ಯ  ಜಯರಾಮ ಪೂಜಾರಿ  ಪಡುಮಲೆ ಇತಿಹಾಸ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿ ಮಾತನಾಡಿ, ಕೊಡಗಿನಲ್ಲಿ ತಿರುಮಲೆ, ಕೇರಳದಲ್ಲಿ ಶಬರಿಮಲೆ, ಕರ್ನಾಟಕದಲ್ಲಿ ಪಡುಮಲೆ ಇವು  ಸಮಾನವಾದ ಐತ್ಯವುಳ್ಳ ಕ್ಷೇತ್ರ..ಪಡುಮಲೆ  ವಿಶೀಷ್ಥ  ಮತ್ತು ವಿಭಿನ ಕ್ಷೇತ್ರವಾಗಿದೆ ಎಂದು ಹೇಳಿದರು

ಜಿಲ್ಲಾಡಳಿತಕ್ಕೆ  ಮನವಿ 
ಪುತ್ತೂರು ತಾಲೂಕು ಘಟಕದ ಉಪಾಧ್ಯಕ್ಷ ಚಂದ್ರಶೇಖರ ಆಳ್ವ ಪುತ್ತೂರು ಸರಕಾರಿ ಬಸ್ ನಿಲ್ದಾಣದಿಂದ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಸಮಾಜ ಸೇವಕ ಸುಧಾಕರ ಶೆಟ್ಟಿ ನೆಲ್ಲಿಕಟ್ಡೆರವರ ಹೆಸರು ಇಡುವ ಬಗ್ಗೆ  ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು  ಈ ಬಗ್ಗೆ ಕೇಂದ್ರ ಸಮಿತಿ ಸದಸ್ಯರು ಹಾಗೂ ತಾಲೂಕು ಘಟಕ ಸಮಿತಿ ಸದಸ್ಯರು ಚರ್ಚಿಸಿ  ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು  ನಿರ್ಣಯ ಕೈಗೊಳ್ಳಲಾಯಿತು.

 ಪೌರಭಿವಂದನಾ ಕಾರ್ಯಕ್ರಮ,:- ಸಮಾಜ ಸೇವೆ ಮೂಲಕ  ಸಮಾಜಕ್ಕಾಗಿ ಕಳೆದುಕೊಂಡ ವ್ಯಕ್ತಿಗಳನ್ನು  ಸೌತಡ್ಕದಲ್ಲಿ ನಡೆಯುವ ವಾರ್ಷಿಕ  ಸಮಾರಂಭದಲ್ಲಿ  ಮುಕ್ತಿವಾಯಿನಿ ನಿಧಿವತಿಯಿಂದ ಪೌರಭಿವಂದನೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಸಮಿತಿ  ಸಂಚಾಲಕ  ಲೋಕೇಶ್ ಹೆಗ್ಡೆ ಯು, ಉಪಾಧ್ಯಕ್ಷರಾದ  ಯು ಜಯರಾಮ ಭಂಡಾರಿ, ದುಗ್ಗಪ್ಪ ಎನ್,ಕೃಷ್ಣ ನಗರ ಪುತ್ತೂರು,ಸಹ ಸಂಚಾಲಕ ಬಾಸ್ಕರ ಬರ್ಯಾ, ಪುತ್ತೂರು  ತಾಲೂಕು ಸಮಿತಿ ಅಧ್ಯಕ್ಷ ಮಹಾಬಲ ರೈ ಒಳತಡ್ಕ, ಉಪಾಧ್ಯಕ್ಷ ಚಂದ್ರಶೇಖರ ಆಳ್ವ ಉಪಸ್ಥಿತರಿದ್ದರು.

 ಸಭೆಯಲ್ಲಿ , ಕೆ ಉದಯಶಂಕರ ರೈ ಬಯುಲುಗುತ್ತು, ಪುಣಚ, ಸೀತಾರಾಮ ರೈ ಕೆಂಬರ್ಜೆ ಉಜಿರೆ, ಭವಾನಿ ಶಂಕರ ಶೆಟ್ಟಿ,  ಜಯರಾಮ ಪೂಜಾರಿ ಕಲ್ಲಡ್ಲ, ಕೆ ರಾಮಕೃಷ್ಣ ನಾಯಕ್ ಕೋಕಳ,  ಕೆ ಕೃಷ್ಣ ಶರ್ಮ, ಸುಬ್ರಾಯ ಮಡಿವಾಳ್ ಬಿಸಿರೋಡ್,ಸುಮಿತ್ರಾ ಸುಬ್ರಾಯ ಮಡಿವಾಳ‌ ಬಿಸಿರೋಡ್,ಶಂಕರಿ ಪಟ್ಟೆ, ಸುಬ್ಬಯ್ಯ ರೈ ಹಲಸಿನಡಿ, ನಾರಾಯಣ ಪಾಟಾಳಿ ಪಟ್ಟೆ, ಪದ್ಮನಾಭ ರೈ ಅರೆಪ್ಪಾಡಿ, ರಘುರಾಮ ಪಾಟಾಳಿ ಶರವು, ಉದಯ ಕುಮಾರ್ ಶರವು, ಬಾಲಕೃಷ್ಣ ರೈ ಏರಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here