ಕುದ್ಮಾರು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

0

ಕಾಣಿಯೂರು: ಕುದ್ಮಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 50ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಮಕ್ಕಳು ಕರ್ನಾಟಕ ಭೂಪಟದ ರಂಗೋಲಿಯನ್ನು ಹಳದಿ ಕೆಂಪು ಬಣ್ಣದಲ್ಲಿ ಬಿಡಿಸಿ ಸಂಭ್ರಮಿಸಿದರು. ನಾಡಗೀತೆಯೊಂದಿಗೆ ಕನ್ನಡದ ಹಾಡುಗಳನ್ನು ಹಾಡಲಾಯಿತು.ಸಹ ಶಿಕ್ಷಕರಾದ ಸಂತೋಷ್ ದಿನದ ಮಹತ್ವದ ಬಗ್ಗೆ ಮಾತನಾಡಿದರು.ಶಾಲಾ ಮುಖ್ಯಗುರು ಕುಶಾಲಪ್ಪ ಬಿ ಸ್ವಾಗತಿಸಿ, ಶಿಕ್ಷಕಿ ವೀರ ಡಿಸೋಜಾ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ, ಎಸ್‌ಡಿಎಂಸಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here